ಬೊನ್ಸಾಯಿ ಕೃಷಿ ಪದ್ಧತಿಯ ಉಪನ್ಯಾಸ

0
31

ಹೊನ್ನಾವರ : ಸ್ಥಿತಿಗಾರ ಶಾಲೆಯಲ್ಲಿ ವಿದ್ಯಾರ್ಥಿ ಮತ್ತು ಊರನಾಗರಿಕರಿಗೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು É ಏರ್ಪಡಿಸಲಾಗಿತ್ತು.
ನಿವೃತ್ತ ವಲಯ ಅರಣ್ಯಾಧಿಕಾರಿಗಳಾದ ಎಲ್.ಆರ್. ಹೆಗಡೆ ಬೊನ್ಸಾಯಿ ಕೃಷಿ ಪದ್ಧತಿಯ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು.
ಜಪಾನ್ ದೇಶದಲ್ಲಿ ಹುಟ್ಟಿದ ಈ ಕೃಷಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯಲು ಬೊನ್ಸಾಯಿ ಕೃಷಿ ವಿಧಾನ ಅಗತ್ಯ. ಇಂದು ಅಪರೂಪದ ಎಷ್ಟೊÃ ಸಸ್ಯಗಳು ನಶಿಸುತ್ತಿವೆ. ಅವುಗಳನ್ನು ಕಸಿ ವಿಧಾನದ ಮೂಲಕ ಉಳಿಸಿಕೊಳ್ಳಲು ಸಾಧ್ಯ.
ಕಾಳುಮೆಣಸನ್ನು ಮರಗಳಿಗೆ ಹಬ್ಬಿಸುವ ಬದಲು ಗಿಡಗಳಿಗೆ ಹಬ್ಬಿಸಿ ಬೆಳೆಯಲು ಸಾಧ್ಯ ಎಂಬುದನ್ನು ವಿವರಿಸಿದರು. ಕಡಿಮೆ ಖರ್ಚಿನಲ್ಲಿ ಅತಿ ಹಗುರವಾದ ‘ಪಾಟ್’ ತಯಾರಿಸುವುದು ಹೇಗೆಂದು ತೋರಿಸಿಕೊಟ್ಟರು. ಬೊನ್ಸಾಯಿ ಕೃಷಿ ವಿಧಾನ ಮಾಡಲು ಆಸಕ್ತಿ ಇರುವವರು ನನ್ನ ಮೊಬೈಲ್ ನಂಬರ್ ಆದ ೯೪೮೦೭೪೬೭೧೬ ಗೆ ಸಂಪರ್ಕಿಸಬಹುದೆಂಬುದನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಹಾಗೂ ಎಸ್.ಡಿ.ಎಮ್.ಸಿ. ವತಿಯಿಂದ ಎಲ್.ಆರ್. ಹೆಗಡೆಯವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಪಂಚಾಯಿತ ಸದಸ್ಯೆ ಶಶಿಕಲಾ ಆಚಾರಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಕೃಷ್ಣ ಆಚಾರಿ, ಸದಸ್ಯ ವೆಂಕಪ್ಪ ಹೆಗಡೆ, ಗಣೇಶ ಹೆಗಡೆ ಹಾಗೂ ದತ್ತಾತ್ರೆÃಯ ಹೆಗಡೆ ಉಪಸ್ಥಿತರಿದ್ದರು. ಮುಖ್ಯೊÃಪಾಧ್ಯಾಯಿನಿ ಪಾರ್ವತಿ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್.ಹೆಗಡೆ ನಿರೂಪಿಸಿದರು. ಶಿಕ್ಷಕಿ ಸಾವಿತ್ರಿ ದೇವಾಡಿಗ ಅಭಿನಂದಿಸಿದರು. ವಿದ್ಯಾರ್ಥಿಗಳಾದ ಅಮೃತಾ ಸಂಗಡಿಗರು ಪ್ರಾರ್ಥಿಸಿದರು.

loading...