ಅಂಗಡಿಗಳಲ್ಲಿನ ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು

0
14

ಯಲ್ಲಾಪುರ : ಪ್ಲಾಸ್ಟಿಕ್ ನಿಷೇಧವಿದ್ದರೂ ಪಟ್ಟಣ ವ್ಯಾಪ್ತಿಯಲ್ಲಿನ ೭ ಅಂಗಡಿಗಳಲ್ಲಿನ ಸುಮಾರು ೧೭.೫ ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು, ಅಂಗಡಿ ಮಾಲಕರಿಗೆ ೩೫೦೦ ರೂ. ದಂಡ ವಿಧಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಪ.ಪಂ ಆರೋಗ್ಯ ನಿರೀಕ್ಷಕರಾದ ರುದ್ರಯ್ಯ ಹಿರೇಮಠ, ಗುರು ಗಡಗಿ ಹಾಗೂ ಸಿಬ್ಬಂದಿಗಳಾದ ತಿರುಪಾಲ ಮಾದರ, ದ್ಯಾಮಣ್ಣ ಹರಿಜನ ಹಠಾತ್ ಕಾರ್ಯಾಚರಣೆ ನಡೆಸಿ, ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಲ್ಲದೇ, ಪಟ್ಟಣದಲ್ಲಿ ಇನ್ನು ಮುಂದೆ ಯಾವುದೇ ಅಂಗಡಿಕಾರರು ಪ್ಲಾಸ್ಟಿಕ್ ಮಾರಿದರೆ ದಂಡ ವಿಧಿಸಲಾಗುವುದೆಂದು ಎಚ್ಚರಿಸಿದ್ದಾರೆ.

loading...