ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿದ ಗ್ರಾಮಸ್ಥರು

0
21

ಬಂಕಾಪುರ : ಪಟ್ಟಣದ ರೈತರು ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗದಗ ಗ್ರಾಮದ ವರ (ಗಂಡು ಕತ್ತೆ) ಬೆಟಗೇರಿ ಗ್ರಾಮದ ವಧು (ಹೆಣ್ಣು ಕತ್ತೆ) ರವರನ್ನು ಕರೆತಂದು ಅರಳಲೆಮಠದ ಭವ್ಯವಾದ ಕಲ್ಯಾಣಮಂಟಪದಲ್ಲಿ ಶಾಸ್ತೊçÃಕ್ತವಾಗಿ ಮಂತ್ರ ಘೋಷ ಮಂಗಲವಾದ್ಯಗಳೋಂದಿಗೆ ಮದುವೆ ಸಂಪ್ರದಾಯ ಮೇರೆದರು.
ನೂತನ ವಧು-ವರರನ್ನು ತಳಿರು ತೋರಣ ಕಟ್ಟಿ ಶ್ರಿÃಂಗರಿಸಿದ ಅರಳಲೆಮಠದ ಆವರಣಕ್ಕೆ ಬಾಜಾ ಭಜಂತ್ರಿ ಸಮೇತ ಭವ್ಯವಾಗಿ ಬರಮಾಡಿಕೊಳ್ಳಲಾಯಿತು. ನಂತರ ಫಲಹಾರ ಸೇವಿಸಿದ ಬಂಧು ಬಾಂಧವರು ಸಂಪ್ರದಾಯದಂತೆ ಮುತ್ತೆöÊದಿಯರು ಅರಿಷಣವನ್ನು ನೂತನ ವಧು-ವರರಿಗೆ ಲೆಪಿಸಿ ಆರತಿ ಬೇಳಗಿ, ಗಂಡ, ಹೆಂಡತಿಯರ ಹೇಸರುಗಳನ್ನು ವಡಪು ಸಮೇತ ಹೇಳುವಮೂಲಕ ಮದುವೆ ಸೋಬಗನ್ನು ಸವಿದರು. ಈ ಸಂದರ್ಬದಲ್ಲಿ ಒಬ್ಬರಿಗೊಬ್ಬರು ಅರಿಷಣವನ್ನು ಲೇಪಿಸುವಮೂಲಕ ಮದುವೆ ಸಂಭ್ರಮಕ್ಕೆ ಮೇರಗು ತಂದರು. ನಂತರ ಕುಂಬಗಳನ್ನು ಇಟ್ಟು ದಾರದ ನೂಲನ್ನು ಸುತ್ತಿ ವಧು-ವರರಿಗೆ ಸುರಿಗೆ ನೀರನ್ನು ಹಾಕಿ ಮೈತೊಳೆದು ಹೊಸ ಬಟ್ಟೆಯನ್ನು ಹಾಕಿ ವಧುವಿನ ಹಣೆಗೆ ದಂಡಿಯನ್ನು ಕಟ್ಟಿ ವರನ ಹಣೆಗೆ ಬಾಶಿಂಘವನ್ನು ಕಟ್ಟಿ ಮಂಗಲ ವಾದ್ಯಗಳೊಂದಿಗೆ ಕಲ್ಯಾಣಮಂಟಪಕ್ಕೆ ಬರಮಾಡಿಕೊಂಡು ಶಾಸ್ತೊçÃಕ್ತವಾಗಿ ಪಂಚ ಕಳಸವನ್ನು ಹೂಡಿ ಕೂಡಿದ ಬಂಧು ಬಾಂಧವರಿಗೆ ಕಂಕಣವನ್ನು ಕಟ್ಟಿದರು. ನಂತರ ಗದಿಗಯ್ಯ ಮಹಾಂತಿನಮಠ ಶಾಸ್ತಿçÃಗಳವರಿಂದ ಮಂತ್ರೊÃಪದೇಶದೊಂದಿಗೆ ಗಟ್ಟಿ ಮೇಳ ಮೊಳಗಿಸಿ ತಾಳಿಯನ್ನು ಕಟ್ಟಿಸಿ ಕೂಡಿದ ಜನತೆ ಅಕ್ಷತೆ ಹಾಕುವಮೂಲಕ ಕತ್ತೆಗಳ ಮದುವೆ ಮಾಡಿಸಿ ಸಂಪ್ರದಾಯ ಮೇರೆದರು.
ನಂತರ ವಧು-ವರರ ಭವ್ಯ ಮೇರವಣಿಗೆ ಬಾಜಾ ಭಜಂತ್ರಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು. ಮೇರವಣಿಗೆ ಉದ್ದಕ್ಕೂ ಮುತ್ತೆöÊದಿಯರು ವಧು-ವರರಿಗೆ ತಿಲಕವಿಟ್ಟು ಆರತಿ ಬೆಳಗಿ ಸಮೃದ್ಧವಾದ ಮಳೆ ಬೇಳೆ ಕೊಡುವಂತೆ ಬೇಡಿಕೊಂಡರು. ನಂತರ ಮದುವೆಗೆ ಬಂದ ಬಂಧು, ಮಿತ್ರರಿಗೆ ಶಿರಾ ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಕಾಶ ಸಕ್ರಿ, ಬಾಪುಗೌಡ್ರ ಪಾಟೀಲ, ಸೋಮಶೇಖರ ಗೌರಿಮಠ, ರಾಮಣ್ಣ ವಳಗೇರಿ, ಶಿದ್ದಲಿಂಗಪ್ಪ ಸಕ್ರಿ, ಜಗದೀಶ ವಳಗೇರಿ, ರವಿ ಕುರಗೋಡಿ, ಈರಪ್ಪ ಕೊತಂಬ್ರಿ, ಅಂದಾನಿಗೌಡ್ರ ಪಾಟೀಲ, ಶಂಭು ಕುರಗೋಡಿ, ಮಲ್ಲಿಕಾರ್ಜುನ ನೇರೆಗಲ್, ಬಸವರಾಜ ನಾರಾಯಣಪುರ, ವಿರೇಶ ರುದ್ರಾಕ್ಷಿÃ, ಕೋಟೆಪ್ಪ ಸಕ್ರಿ, ಚಂದ್ರು ಕಳ್ಳಿಮನಿ, ಶಂಬಣ್ಣ ವಳಗೇರಿ, ಚನ್ನವೀರಪ್ಪ ಶಿಗ್ಗಾವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...