ಪ್ರತಿಯೊಂದು ಪಂದ್ಯದಲ್ಲೂ ವೈಯಕ್ತಿಕ ಒತ್ತಡವಿರುತ್ತದೆ: ರಾಹುಲ್‌

0
9

ಮ್ಯಾಂಚೆಸ್ಟರ್‌:-ವಿಶ್ವಕಪ್‌ ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲೂ ವೈಯಕ್ತಿಕ ಒತ್ತಡ ಇದ್ದೇ ಇರುತ್ತದೆ. ಹಾಗಾಗಿ, ವಿಕೆಟ್‌ ಅನುಗುಣವಾಗಿ ಬಹಳ ಎಚ್ಚರಿಕೆಯಿಂದ ಆಡುವ ಅಗತ್ಯವಿದೆ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ತಿಳಿಸಿದ್ದಾರೆ.
ಗುರುವಾರ ವೆಸ್ಟ್‌ ಇಂಡೀಸ್‌ ವಿರುದ್ಧ 125 ರನ್‌ಗಳಿಂದ ಜಯ ಸಾಧಿಸಿದ ಬಳಿಕ ಮಾತನಾಡಿದ ಅವರು, ಪ್ರತಿಯೊಂದು ಪಂದ್ಯದಲ್ಲೂ ವೈಯಕ್ತಿಕ ಒತ್ತಡ ಸಾಮಾನ್ಯವಾಗಿದ್ದು, ಪ್ರತಿಯೊಂದು ಎಸೆತವನ್ನು ಬೌಂಡರಿಗಟ್ಟಲು ಸಾಧ್ಯವಾಗುವುದಿಲ್ಲ. ಪಿಚ್‌ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗಾಗಿ, ಆರಂಭದಲ್ಲಿ ಕ್ರಿಸ್‌ನಲ್ಲಿ ನೆಲೆಯೂರಲು ಹೆಚ್ಚಿನ ಸಮಯ ತೆಗೆದುಕೊಂಡರೂ ನಮಗೆ ಏನೂ ಅನಿಸುವುದಿಲ್ಲ ಎಂದರು.
ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 268 ರನ್‌ ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ 143 ರನ್ ಗಳಿಗೆ ಆಲೌಟ್‌ ಆಗುವ ಮೂಲಕ ವಿಶ್ವಕಪ್‌ ಅಭಿಯಾನದಿಂದ ಅಧಿಕೃತವಾಗಿ ಹೊರ ನಡೆಯಿತು.
ಇಲ್ಲಿನ ಅಂಗಳದ ಪಿಚ್‌ ಸೌಥ್‌ಹ್ಯಾಮ್ಟನ್‌ ದಿ ರೋಸ್‌ ಬೌಲ್ ಕ್ರೀಡಾಂಗಣದ ಪಿಚ್‌ಗೆ ಹೋಲುತ್ತದೆ. ಸೌಥ್‌ಹ್ಯಾಮ್ಟನ್‌ ಪಿಚ್‌ ತುಂಬಾ ನಿಧಾನಗತಿಯಿಂದ ಕೂಡಿದೆ. ಆದರೆ, ಈ ಪಿಚ್‌ ವೇಗವಾಗಿ ಕೂಡಿದೆ. ಹಾಗಾಗಿ, ಹೊಸ ಬ್ಯಾಟ್ಸ್‌ಮನ್‌ ಹೆಚ್ಚು ರನ್‌ ಗಳಿಸಲು ಇಲ್ಲಿ ಸಾಧ್ಯವಾಗುವುದಿಲ್ಲ. ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಸ್ಟ್ರೈಕ್‌ ಅದಲು-ಬದಲು ಮಾಡಿದರೆ 260 ರಿಂದ 270 ರನ್‌ ಗಳಿಸಬಹುದು” ಎಂದು ರಾಹುಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಮೊದಲ 10 ಓವರ್‌ಗಳ ಬಳಿಕ ಈ ಪಿಚ್‌ನಲ್ಲಿ 300 ರನ್‌ ಕಲೆಹಾಕಲು ಸಾಧ್ಯವಿಲ್ಲ ಎಂದು ಎಂದು ಡ್ರೆಸ್ಸಿಂಗ್‌ ಕೊಠಿಡಿಯಲ್ಲಿದ್ದ ನಾಯಕ ವಿರಾಟ್‌ ಕೊಹ್ಲಿ ಮಾಹಿತಿ ರವಾನಿಸಲಾಗಿತ್ತು. ಹಾಗಾಗಿ, ನಾವು 260 ರನ್‌ ಗಳಿಸುವ ಕಡೆ ಗಮನ ಹರಿಸಿದೆವು” ಎಂದು ಹೇಳಿದರು.

ಆರಂಭಿಕನಾಗಿ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲವಾಗುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ” ಈ ಹಂತದಲ್ಲಿ ಆಡುವುದು ಕ್ಲಿಷ್ಟವಾಗಿದೆ. ಯಾವುದೇ ಸವಾಲು ಬಂದರೂ ಎದುರಿಸಲು ಸಿದ್ಧರಾಗಬೇಕು. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವಾಗ ಮುಕ್ತ ಮನೋಭಾವವನ್ನು ಹೊಂದಿರಬೇಕು. ಕಳೆದ ಮೂರು ವರ್ಷಗಳಿಂದ ಇಂತಹ ಸನ್ನಿವೇಶವನ್ನು ಎದುರಿಸುವ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿರುವುದರಿಂದ ಇದೀಗ ನನಗೆ ಸುಲಭವಾಗಿದೆ ಎಂದು ಕೆ.ಎಲ್‌ ರಾಹುಲ್‌ ತಿಳಿಸಿದರು.

loading...