ಚಂಡಮಾರುತ: ಬ್ಲೂ ಅಲರ್ಟ್ ಮುಂದುವರಿಸಿದ ಚೀನಾ

0
0

ಬೀಜಿಂಗ್- ದಕ್ಷಿಣ ಚೀನಾದ ಹಲವು ಭಾಗಗಳಲ್ಲಿ ಚಂಡಮಾರುತ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾದ ರಾಷ್ಟ್ರೀಯ ವೀಕ್ಷಣಾಲಯ ಶನಿವಾರವೂ ಸಹ ಬ್ಲೂ ಅಲರ್ಟ್ ಮುಂದುವರಿಸಿದೆ
ಶನಿವಾರ ಮತ್ತು ಭಾನುವಾರಗಳಂದು ಶಾಂಘೈನ ಜಿಯಾಂಗ್ಸು, ಅನ್ಹುಯಿ, ಝೆಜಿಯಾಂಗ್, ಹುನಾನ್, ಜಿಯಾಂಕ್ಸಿ, ಯುನ್ನಾನ್, ಸಿಚುಯಾನ್ ಹಾಗೂ ಗುವಾಂಕ್ಸಿ ಝುಆಂಗ್ ಸ್ವಾಯತ್ತ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ
ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, 130 ಮಿಮೀ ವರೆಗೂ ಸುರಿಯುವ ನಿರೀಕ್ಷೆಯಿದೆ. ಜಿಲಿನ್ ಮತ್ತು ಲಿಯೋನಿಂಗ್ ಪ್ರಾಂತ್ಯಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿಯಿತ್ತಿದೆ.
ಪ್ರವಾಹ ಭೀತಿ ಎದುರಾಗಿರುವ ಕಾರಣ, ಭೂಕುಸಿತ, ಮಣ್ಣುಕುಸಿತಗಳ ಬಗ್ಗೆ ಜಾಗ್ರತೆ ವಹಿಸುವಂತೆ ಎಲ್ಲ ಸ್ಥಳೀಯ ಆಡಳಿತಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಚೀನಾ ದೇಶವು ನಾಲ್ಕು ಹಂತದ ಬಣ್ಣಗಳ ಕೋಡೆಡ್ ಹವಾಮಾನ ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿದೆ, ಕೆಂಪು ಬಣ್ಣವು ಅತ್ಯಂತ ತೀವ್ರತೆಯನ್ನು ಪ್ರತಿನಿಧಿಸುತ್ತದೆ, ನಂತರ ಕಿತ್ತಳೆ, ಹಳದಿ ಮತ್ತು ನೀಲಿ ಬಣ್ಣಗಳನ್ನು ಹೊಂದಿರುತ್ತದೆ.

loading...