ಗೌರವಕ್ಕಾಗಿ ಲಂಕಾ-ಇಂಡೀಸ್‌ ನಾಳೆ ಹೋರಾಟ

0
17

ಚೆಸ್ಟರ್‌ ಲೀ-ಸ್ಟ್ರೀಟ್‌:-ಈಗಾಗಲೇ ಐಸಿಸಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ಸ್ ಹಾದಿಯನ್ನು ಕಳೆದುಕೊಂಡಿರುವ ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ನಾಳೆ ಇಲ್ಲಿನ ರಿವರ್‌ ಸೈಡ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಪಂದ್ಯ ಗೆದ್ದು ಗೌರವ ಉಳಿಸಿಕೊಳ್ಳುವ ಯೋಜನೆಯೊಂದಿಗೆ ಉಭಯ ತಂಡಗಳು ಕಣಕ್ಕೆ ಇಳಿಯಲಿವೆ.
ಶ್ರೀಲಂಕಾ ಆಡಿರುವ 7 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು, ಮೂರು ಪಂದ್ಯಗಳಲ್ಲಿ ಸೋಲು ಹಾಗೂ ಇನ್ನುಳಿದ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ತನ್ನ ಖಾತೆಯಲ್ಲಿ ಆರು ಅಂಕಗಳನ್ನು ಸಂಪಾಧಿಸಿಕೊಂಡಿರುವ ಲಂಕೆಗೆ ಸೆಮಿಫೈನಲ್‌ ಹಾದಿ ಈಗಾಗಲೇ ಬಂದ್‌ ಆಗಿದೆ.

2015ರ ವಿಶ್ವಕಪ್‌ಗೆ ಪ್ರಸಕ್ತ ಆವೃತ್ತಿಯನ್ನು ಹೊಂದಾಣಿಕೆ ಮಾಡಿದ್ದಲ್ಲಿ ದಿಮುತ್‌ ಕರುಣರತ್ನೆ ಪಡೆ ಕಳಪೆ ಪ್ರದರ್ಶನ ತೋರಿದೆ. ಆಡಿರುವ ಎಲ್ಲ ಪಂದ್ಯಗಳಲ್ಲಿ ಲಂಕಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದೆ. ಆದರೆ, ಲಸಿತ್‌ ಮಲಿಂಗಾ ನೇತೃತ್ವದ ಬೌಲಿಂಗ್‌ ವಿಭಾಗ ಗೆದ್ದಿರುವ ಎರಡು ಪಂದ್ಯಗಳಲ್ಲಿ ಮಹತ್ವದ ಪಾತ್ರವಹಿಸಿತ್ತು.
ಜೂನ್‌ 28 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಸೋಲುವುದಕ್ಕೂ ಮುನ್ನ ಶ್ರೀಲಂಕೆಗೆ ಸೆಮಿಫೈನಲ್‌ ತಲುಪುವ ಅವಕಾಶವಿತ್ತು. ಆದರೆ, ಆಫ್ರಿಕಾ ವಿರುದ್ಧ 9 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿ ವಿಶ್ವಕಪ್‌ ಅಭಿಯಾನವನ್ನು ಮುಗಿಸಿತು.
ಮತ್ತೊಂದೆಡೆ, ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ವಿರುದ್ಧ ಆರ್ಭಟಿಸಿ ನಂತರದ ಪಂದ್ಯಗಳಲ್ಲಿ ಮುಗ್ಗರಿಸಿದ ಬಲಿಷ್ಠ ವೆಸ್ಟ್‌ ಇಂಡೀಸ್‌ ಪ್ರಸಕ್ತ ಆವೃತ್ತಿಯಲ್ಲಿ ವೈಫಲ್ಯ ಅನುಭವಿಸಿದೆ. ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮತ್ತೊಂದು ಪಂದ್ಯದಲ್ಲಿ ಮಳೆಯಿಂದ ಫಲಿತಾಂಶ ಬಂದಿರಲಿಲ್ಲ. ತನ್ನ ಖಾತೆಯಲ್ಲಿ ಮೂರು ಅಂಕಗಳನ್ನು ಹೊಂದಿರುವ ವಿಂಡೀಸ್‌ ಸ್ಪರ್ಧೆಯಿಂದ ಹೊರ ನಡೆದಿದೆ.
ಜೇಸನ್‌ ಹೋಲ್ಡರ್‌ ಪಡೆಯಲ್ಲಿ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕ್ರಿಸ್‌ಗೇಲ್ ಹೇಳಿಕೊಳ್ಳುವಂಥ ಪ್ರದರ್ಶನ ನೀಡಲೇ ಇಲ್ಲ. ಶಾಯ್‌ ಹೋಪ್‌ ಕೆಲವು ಪಂದ್ಯಗಳಲ್ಲಿ ಆಡಿದ್ದು, ಬಿಟ್ಟರೆ ಇನ್ನುಳಿದವರು ತಂಡಕ್ಕೆ ಆಸರೆಯಾಗಲಿಲ್ಲ. ಆದರೆ, ಬೌಲಿಂಗ್‌ ವಿಭಾಗ ಅದ್ಭುತವಾಗಿದೆ. ಬೌಲರ್‌ಗಳು ತಮ್ಮ ಶಾರ್ಟ್‌ ಪಿಚ್‌ಗಳ ಮೂಲಕವೇ ಎದುರಾಳಿ ಬ್ಯಾಟ್ಸ್‌ಮನ್‌ ಗಳಲ್ಲಿ ಒತ್ತಡ ಹೇರಿದ್ದರು. ಇದೀಗ ವೆಸ್ಟ್‌ ಇಂಡೀಸ್‌ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದು ಗೌರವ ಉಳಿಸಿಕೊಳ್ಳು ಕಡೆ ಗಮನ ಹರಿಸಿಲಿದೆ.
ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ರಿವರ್‌ ಸೈಡ್‌ ಕ್ರೀಡಾಂಗಣ, ಚೆಸ್ಟರ್‌ ಲೀ-ಸ್ಟ್ರೀಟ್‌ ಕ್ರೀಡಾಂಗಣ

loading...