ರಮೇಶ ಜಾರಕಿಹೊಳಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದಾರೆಯೇ ಎಂದು ಮಾಧ್ಯಮದವರೆ ಕೇಳಿ: ಸಚಿವ ಖಾದರ

0
31

ಬೆಳಗಾವಿ

ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆಯೆ ನೀಡಿಲ್ಲ. ಅವರು ಸರಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೋ ಏನೋ ಗೋತ್ತಿಲ್ಲ. ಅದನ್ನು ಮಾಧ್ಯಮದವರೆ ಅವರಿಗೆ ಕೇಳಿ ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರುತ್ತದೆ. ಶಾಸಕ ಸ್ಥಾನಕ್ಕೆ ರಮೇಶ ಜಾರಕಿಹೊಳಿ ಎಲ್ಲಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಲು ಒಂದು ಪದ್ದತಿ ಇರುತ್ತದೆ. ಆ ರೀತಿಯಲ್ಲಿ ರಾಜೀನಾಮೆ ನೀಡಬೇಕು. ಸರಕಾರಕ್ಕೆ ಅವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೋ ಏನು ಎಂದು ಮಾಧ್ಯಮದವರೆ ಅವರಿಗೆ ಕೇಳಬೇಕೆಂದರು.

ರಮೇಶ ಜಾರಕಿಹೊಳಿ ಮೂಲತಃ ಕಾಂಗ್ರೆಸ್. ಆದರೆ ಅವರನ್ನು ಇಲ್ಲಿಯವರೆಗೆ ಯಾವ ನಾಯಕರು ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

loading...