ಅಭಿವೃದ್ಧಿ ಯೋಜನೆಗಳಾದರೂ ಗ್ರಾಮ ಸಭೆಗಳ ಮುಖಾಂತರ ಬೇಡಿಕೆ ಇರಬೇಕು

0
17

ಗದಗ: ಅಧಿಕಾರ ವಿಕೇಂದ್ರಿÃಕರಣದಿಂದ ಗ್ರಾಮ ಪಂಚಾಯತ್ ಗಳು ಹೆಚ್ಚು ಸಬಲಗೊಂಡಿವೆ .ಕೆಳಹಂತದಿಂದಲೇ ಯೋಜನೆಗಳು ರೂಪಿತವಾಗಬೇಕು. ಯಾವುದೇ ಅಭಿವೃದ್ಧಿ ಯೋಜನೆಗಳಾದರೂ ಗ್ರಾಮ ಸಭೆಗಳ ಮುಖಾಂತರ ಬೇಡಿಕೆ ಇರಬೇಕು ಅದಕ್ಕನುಗುಣವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ತಯಾರಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಣಗಣದಲ್ಲಿಂದು ಗದಗ ತಾಲೂಕಾ ಅಭಿವೃದ್ಧಿ ಯೋಜನಾ ತಯಾರಿಕಾ ಪ್ರಕ್ರಿಯೆ ಹಾಗೂ ಸಮಿತಿಯ ಜವಾಬ್ದಾರಿಯ ಕುರಿತು ಸುಸ್ಥಿತ ಅಭಿವೃದ್ಧಿ ಗುರಿಗಳ ಪರಿಕಲ್ಪನೆಯ ಪರಿಚಯದ ಕರ‍್ಯಾಗಾರವನ್ನುದ್ದೆÃಶಿಸಿ ಅವರು ಮಾತನಾಡಿದರು.
ಶಾಸಕ ಎಚ್.ಕೆ.ಪಾಟೀಲ ಮಾತನಾಡಿ ಗದಗ ತಾಲೂಕಾ ಅಭಿವೃಧ್ಧಿ ಯೋಜನೆಯ ಸಿದ್ಧತೆಗೆ ಸಮಿತಿ ಸದಸ್ಯರುಗಳಿಗೆ ಜನರ ಬದುಕಿನ ಬಗ್ಗೆ ಸಂಪೂರ್ಣ ಅರಿವು ಹಾಗೂ ದೂರದೃಷ್ಟಿ ಇರಬೆಕು. ಅದಕ್ಕಾಗಿ ಈ ಕರ‍್ಯಾಗಾರವನ್ನು ಏರ್ಪಡಿಸಲಾಗಿದೆ. ಗ್ರಾಮಸಭೆಗಳಲ್ಲಿ ರೂಪಿತ ಯೋಜನೆಗಳು ತಾಲೂಕಾ ನಂತರ ಜಿಲ್ಲಾ ಮಟ್ಟದ ಯೋಜನೆ ತಯಾರಿಸಿ ನಂತರ ಸರ್ಕಾರದ ಬಜೆಟ್ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಜವಾಬ್ದಾರಿ ಮತ್ತು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು
ಜಿಲ್ಲಾ ಪಂಚಾಯತ್ ಉಪಕರ‍್ಯದರ್ಶಿ ಡಿ. ಪ್ರಾಣೇಶ ರಾವ್ ಅವರು ಮಾತನಾಡಿ ಗ್ರಾಮೀಣಾಭಿವೃದ್ಧಿ ವಿಕೆಂದ್ರಿÃಕರಣಕ್ಕೆ ಒತ್ತು ಕೊಡುವ ರಾಷ್ಟçಕ್ಕೆ ಸಹಾಯಕವಾಗುವ ಅಭಿವೃಧ್ಧಿ ಯೋಜನೆ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ , ಜಿಲ್ಲಾ ಪಂಚಾಯತ್ ಗಳಲ್ಲಿ ಸಾಕಾರ ಮಾಡಲು ಗದಗ ಮತ್ತು ಮೈಸೂರುಗಳನ್ನು ಆಯ್ಕೆ ಮಾಡಲಾಗಿತ್ತು. ಇದು ರಾಷ್ಟçದಲ್ಲಿಯೇ ಮಾದರಿಯಾಗಿರುವ ಯೋಜನೆ. ಗ್ರಾಮ ಸಭೆಯಲ್ಲಿ ನಡೆದಿದ್ದನ್ನು ದಾಖಲೀಕರಣ ಮಾಡಲಾಗಿದ್ದು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಗ್ರಾಮಪಂಚಾಯತ್ ಮತ್ತು ನಗರಪ್ರದೇಶಗಳಲ್ಲಿನ ಯೋಜನೆಗಳನ್ನು ಒಗ್ಗೂಡಿ ಸಮನ್ವಯಗೊಳಿಸುವುದು ಇದರ ಉದ್ದೆÃಶವಾಗಿದೆ. ಅಭಿವೃದ್ಧಿ ಯೋಜನೆ ತಯಾರಿಕೆಗೆ ವಾರ್ಡವಾರು ಸಭೆ ಜರುಗಿಸಿ , ಗ್ರಾಮಸಭೆ ಮಾಡಿ ಅಭಿವೃದ್ಧಿ ಯೋಜನೆ ಸಿದ್ಧಪಡಿಸಬೇಕು. ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರ, ಸಂಪನ್ಮೂಲಗಳ ಬಳಕೆ ಕುರಿತು ಪಟ್ಟಿ ಮಾಡುವುದು ಇದರಲ್ಲಿ ಸೇರಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ವಾಸಣ್ಣ ಕುರಡಗಿ, ಗದಗ ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ್, ತಾ.ಪಂ. ಸದಸ್ಯ ವಿದ್ಯಾಧರ ದೊಡ್ಡಮನಿ,ಜನಪ್ರತಿನಿಧಿಗಳು ಮಾಜಿ ಶಾಸಕ ಡಿ.ಆರ್.ಪಾಟೀಲ, ಗದಗ ತಾಲೂಕು ಪಂಚಾಯತ್ ಕರ‍್ಯನಿರ್ವಾಹಕ ಅಧಿಕಾರಿ ಡಾ. ಎಚ್.ಎಸ್. ಜನಗಿ ,ಗದಗ ತಾಲೂಕು ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ಶಾಸಕ ಎಚ್.ಕೆ.ಪಾಟೀಲ ಪತ್ರಕರ್ತರೊಂದಿಗೆ ಮಾತನಾಡಿ ಯೋಜನೆಗಳು ಯಶಸ್ವಿಯಾಗಲು ಕೆಳಮಟ್ಟದಿಂದ ಮೆಲ್ಪಟ್ಟದವರೆಗೆ ಯೋಜನಾಕಾರ್ಯಗಳ ರೂಪರೇಷವಾಗುವುದು ತುಂಬಾ ಅಗತ್ಯವಾಗಿದೆ. ಇಡೀ ಜಿಲ್ಲೆ ಬಯಲುಬಹಿರ್ದೆಸೆ ಮುಕ್ತ ಜಿಲ್ಲೆಯಾಗಬೇಕು. ಅಕ್ಟೊÃಬರ್ ೨ ರೊಳಗಾಗಿ ಶೌಚಾಲಯವನ್ನು ಬಳಸುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗದಗ ತಾಲೂಕಿಗೆ ತುಂಗಾಭದ್ರ ನದಿಯಿಂದ ನೀರು ಪೂರೈಕೆ ಸಂಬಂಧಿಸಿದಂತೆ ಪ್ರತಿ ಕುಟುಂಬಕ್ಕೆ ನಳದ ವ್ಯವಸ್ಥೆ ಜೋಡನೆ ಮಾಡಿ ಕೆಲಸ ಪೂರ್ಣಗೊಳಿಸಬೇಕು. ಮಾರ್ಚ ೧೬ ರೊಳಗಾಗಿ ಗ್ರಾಮೀಣ ಭಾಗದ ಎಲ್ಲಾ ವಸತಿ ರಹಿತರಿಗೆ ವಸತಿ ನಿರ್ಮಾಣ ಮಾಡಿ ಅಗಸ್ಟ್ ೧೫ ರೊಳಗಾಗಿ ಮನೆ ಕಟ್ಟು ಕೆಲಸ ಪೂರ್ಣವಾಗಬೇಕು. ಜಿಲ್ಲಾ ಪಂಚಾಯತ ಅಧಿಕಾರಿಗಳು ಸಂಪೂರ್ಣವಾಗಿ ಕೆಲಸ ಕಾರ್ಯಗಳನ್ನು ಮಾಡಲು ಮುಂದಾಗಬೇಕು. ಶಾಲಾ ಮಕ್ಕಳ ನೊಂದಣಿ ಮಾಡಲು ವಿಶೇಷ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಸ್ವಚ್ಛತೆ, ಆರೋಗ್ಯ, ಸಾಲದ ವ್ಯವಸ್ಥೆ, ಕೃಷಿಯ ಬಗ್ಗೆ ಬೀಜವನ್ನು ವಿತರಣೆ ಮಾಡಬೇಕು ಎಂದು ಶಾಸಕ ಎಚ್.ಕೆ.ಪಾಟೀಲ ನುಡಿದರು.

loading...