ಮೈತ್ರಿ ಸರ್ಕಾರ ಪತನಗೊಳಿಸುವ ಸಂಚು ರೂಪಿಸಿದ್ದು ಸಿದ್ದರಾಮಯ್ಯ : ಪ್ರಹ್ಲಾದ್ ಜೋಶಿ

0
9

ಹುಬ್ಬಳ್ಳಿ:-ಮೈತ್ರಿ ಸರ್ಕಾರದ ಅಸ್ಥಿರತೆಗೊಳಿಸುವ ಯೋಜನೆ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಅಧಿಕಾರದಲ್ಲಿ ಮುಂದುವರೆಯುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ,ಹೀಗಾಗಿ ಶಾಸಕರ ರಾಜೀನಾಮೆ ಅವರ ಹೇಳಿಕೆಗಳು ಈ ಎಲ್ಲದರ ಹಿಂದಿನ ಸೂತ್ರದಾರ ಅವರೇ ಆಗಿದ್ದಾರೆ. ಸಿದ್ದರಾಮಯ್ಯಗೆ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರ ಜಿ. ಪರಮೇಶ್ವರಗೆ ನಾಯಕತ್ವ ಸಿಗುತ್ತಿದೆ ಎಂಬ ಆತಂಕದಿಂದ ಸಿದ್ದರಾಮಯ್ಯ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪದ ಬಗ್ಗೆಪ್ರತಿಕ್ರಿಯಿಸಿದ ಅವರು, ಬಜೆಟ್ ಪುಸ್ತಕವನ್ನು ಅವರು ಪೂರ್ಣವಾಗಿ ಓದಿಲ್ಲ ಎಂದು ಭಾವಿಸಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಯುಪಿಎ ಸರ್ಕಾರ ಇದ್ದಾಗ 47 ಸಾವಿರ ಕೋಟಿ ನೀಡಿದ್ದರು. 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಸೌಲಭ್ಯ ರೂಪಿಸಲಾಗಿದೆ. ದೇಶದ ರೈತರನ್ನು ಶೋಷಣೆ ಮಾಡಿದ್ದು ಕಾಂಗ್ರೆಸ್. ರೈತರ ಈಗಿನ ಸಂಕಷ್ಟಕ್ಕೆ ಕಾಂಗ್ರೆಸ್ ಕಾರಣ, ನಾವಲ್ಲ ಎಂದು ಅವರು ತಿರುಗೇಟು ನೀಡಿದರು.

ರೈತರನ್ನು ಸಿದ್ದರಾಮಯ್ಯ ಪುರಸ್ಕರಿಸಿದ್ದಕ್ಕೆ 130 ಇದ್ದ ಸಂಖ್ಯಾ ಬಲ 78ಕ್ಕೆ ಬಂದಿದ್ದಾರೆ. ನಾವು 280 ಇದ್ದವರು 304ಕ್ಕೆ ತಲುಪಿದ್ದೇವೆ. ಜನಪರ ಕಾಳಜಿ ನೋಡಿಯೇ ಜನ ಉತ್ತಮ ತೀರ್ಪು ನೀಡಿದ್ದಾರೆ. ಮುಂದಿನ 10 ವರ್ಷ ದೇಶ ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬುದನ್ನು ಬಜೆಟ್ ಬಿಂಬಿಸುತ್ತಿದೆ. ಇದೊಂದು ದೂರದೃಷ್ಟಿಯುಳ್ಳ ಬಜೆಟ್. ಸಾಮಾನ್ಯ ಜನರನ್ನ ದೃಷ್ಟಿಯಲ್ಲಿಟ್ಟುಕೊಂಡ ಬಜೆಟ್ ರೂಪಿಸಲಾಗಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

loading...