ರಾಯಚೂರ ಮೂಲದ ಯುವಕ ಬೆಳಗಾವಿಯಲ್ಲಿ ವಿಷ ಸೇವನೆ

0
729

ಬೆಳಗಾವಿ: ಶಿವು ಉಪ್ಪಾರ ಕೊಲೆ ಪ್ರಕರಣಕ್ಕೆ ನ್ಯಾಯ ದೊರೆಯಬೇಕೆಂದು ರಾಯಚೂರ ಮೂಲದ ಯುವಕ ಚಂದ್ರಶೇಖರ ಗೌಡ್ರ ಬೆಳಗಾವಿಯಲ್ಲಿ ವಿಷ ಸೇವಿಸಿದ್ದಾನೆ.

ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನದಲ್ಲಿ ನಡೆದಿದ್ದ ಹಿಂದೂಪರ ಸಂಘಟನೆಗಳು ನಡೆಸಿದ್ದ ಬೃಹತ್ ಸಮಾವೇಶದಲ್ಲಿ ಈತ ಲಿಂಗಸೂರಿಂದ ಆಗಮಿಸಿದ್ದ , ಶಿವು ಉಪ್ಪಾರ ಕೊಲೆ ಪ್ರಕರಣದಲ್ಲಿ ನ್ಯಾಯ ಕೊಡಿಸುವುದರಲ್ಲಿ ಪೊಲೀಸರು ಎಡವಿದ್ದಾರೆ. ನ್ಯಾಯ ದೊರೆಯಬೇಕೆಂದು ಒತ್ತಾಯಸಿ ಮನನೊಂದು ವಿಷ ಕುಡಿದಿದ್ದಾನೆ. ತಕ್ಷಣ ಜಿಲ್ಲಾಸ್ಪತ್ರೆಗೆ ಕರೆತಂದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ವಾರ್ಡಗಳಿಗೆ ಸ್ಥಳಾಂತರ ಮಾಡಿದ್ದಾರೆ.

loading...