ಶಾಸಕಿ ಅಂಜಲಿಗೆ ಲಕ್ಷಣ ರೇಖೆ‌ ಹಾಕಿದ ಖಾನಾಪುರ ಬಿಜೆಪಿ

0
210


ಬೆಳಗಾವಿ
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲ‌ ಮೂಡಿಸಿರುವ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ರಾಜೀನಾಮೆ ನೀಡುತ್ತಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಗೆ ರಾಜೀನಾಮೆ‌ ನೀಡಿ ಬಿಜೆಪಿ ಸೇರುವುದಕ್ಕೆ ವಿರೋಧಿಸಿ ಬಿಜೆಪಿ ಸದಸ್ಯತ್ವ ಅಭಿಯಾನ ರದ್ದುಗೊಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಖಾನಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಗೆ ಪುಷ್ಠಿ ನೀಡಿರುವ ನಿಂಬಾಳ್ಕರ್ ಹೇಳಿಕೆಗೆ ಖಾ‌ನಾಪುರ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಟೀಕಿಸಿ ಆರೋಪ‌ ಮಾಡಿದ್ದ ನಿಂಬಾಳ್ಕರ್ ಗೆ ಯಾವುದೇ ಕಾರಣಕ್ಕೂ ಬಿಜೆಪಿ ಸೇರಿಸಿಕೊಳ್ಳ ಬಾರದು ಎಂದು ಬಿಜೆಪಿ ಆರಂಭಿಸಿದ್ದ ಸದಸ್ಯತ್ವ ಅಭಿಯಾನ ರದ್ದುಗೊಳಿಸಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಬಿಜೆಪಿ ಸೇರ್ಪಡೆಯಾದರೆ ಬಿಜೆಪಿ ಸದಸ್ಯತ್ವ ಅಭಿಯಾನ ಬಂದ್ ಮಾಡುವುದಾಗಿ ಖಾನಾಪುರ ತಾಲೂಕಾ ಬಿಜೆಪಿ ವಿಠ್ಠಲ್ ಸಮ್ಮುಖದಲ್ಲಿ ಠರಾವ್ ಪಾಸ ಮಾಡಿದ್ದಾರೆ.

loading...