೧೩ ಕೋಟಿ ವೆಚ್ಚದಲ್ಲಿ ಎಪಿಎಂಸಿ ರಸ್ತೆ ಕಾಮಗಾರಿ

0
60

ವಾಹನಗಳ ಪರದಾಟಕ್ಕೆ ಮುಕ್ತಿ ದೊರೆಯಲಿದಿಯೇ | ಶೀಘ್ರ ಆರಂಭಕ್ಕೆ ರೈತರ ಒತ್ತಾಯ
ಮಾಲತೇಶ ಮಟಿಗೇರ
ಬೆಳಗಾವಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ರಸ್ತೆ ಕಾಮಗಾರಿ ೧೩ ಕೋಟಿ ವೆಚ್ಚದಲ್ಲಿ ಆರಂಭವಾಗಲಿದ್ದು, ವಾಹನ ಸವಾರರು ಅನುಭವಿಸುವ ತೊಂದರೆಗೆ ಶೀಘ್ರ ಮುಕ್ತಿ ದೊರೆಯಲಿದೆ.
ದಂಡು ಮಂಡಳಿಯ ವ್ಯಾಪ್ತಿಯಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಕೃಷಿ ಮಾರುಕಟ್ಟೆಗೆ ಸ್ಥಳಾಂತರ ಮಾಡುವ ಮೊದಲು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ರಸ್ತೆ ದುರಸ್ಥಿ ಮಾಡದೆ ಸಗಟು ಮಾರುಕಟೆಯನ್ನು ಸ್ಥಳಾಂತರ ಮಾಡಿದ್ದಾರೆ. ಈಗ ಹದಗೆಟ್ಟ ರಸ್ತೆಯಿಂದ ಮಾರುಕಟ್ಟೆಗೆ ಆಗಮಿಸುವ ಲಾರಿಗಳು, ಟ್ಯಾಕ್ಸಿಗಳು ಎಪಿಎಂಸಿ ಮಾರುಕಟ್ಟೆಯ ಒಳಗೆ ಬರಲು ಉಯಾಲೇ ಆಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು, ವಾಹನ ಸವಾರರು ಆಕ್ರೊÃಶ ವ್ಯಕ್ತ ಪಡಿಸುತ್ತಿದ್ದಾರೆ.
ಕಾಂಕ್ರೀಟ್  ರಸ್ತೆ ನಿರ್ಮಾಣ: ಹಲವು ವರ್ಷಗಳಿಂದ ಡಾಂಬರೀಕರಣ ಕಾಣದ ರಸ್ತೆಗೆ ಕಾಂಕ್ರೀಟ್ ಭಾಗ್ಯ ಒಲಿದು ಬಂದಿದೆ. ಸುಮಾರು ೧೩ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭವಾಗುತ್ತಿದೆ. ಎರಡು ತಿಂಗಳ ಹಿಂದೆಯೇ ಟೆಂಡರ್ ಪ್ರಕ್ರಿಯೇ ಮುಗಿದಿದ್ದು, ಇನ್ನೆÃನು ೧೦ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಲಿದೆ. ತರಕಾರಿ ತುಂಬಿರುವ ದೊಡ್ಡ ವಾಹನಗಳು ಸಂಚರಿಸುವುದರಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ವಾಹನ ಸವಾರರು ಅನುಭವಿಸುವ ತೊಂದರೆ ಮುಕ್ತಿ ದೊರೆಯಲಿದೆ ಎಂದು ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ಕನ್ನಡಮ್ಮಕ್ಕೆ ತಿಳಿಸಿದ್ದಾರೆ.


ಕುಡಿಯುವ ನೀರಿನ ವ್ಯವಸ್ಥೆ: ಕೃಷಿ ಮಾರುಕಟ್ಟೆಯಲ್ಲಿ ಅನೇಕ ವರ್ಷಗಳಿಂದ ಮೂಲಸೌಲಭ್ಯ ವಂಚಿತವಾಗಿದೆ ಎಂಬ ಆರೋಪಗಳು ರೈತರಿಂದ ಕೇಳಿ ಬರುತ್ತಿದ್ದವು. ಆದರೆ ಈಗ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನೂ ಮೂರು ತಿಂಗಳಲ್ಲಿ ಕುಡಿಯುವ ನೀರಿನ ಅರೋ ಪ್ಲಾö್ಯಂಟೆಷನ್ ೫ ರಿಂದ ೧೦ ಲಕ್ಷ ರೂ.ನಲ್ಲಿ ಮಾಡಲಾಗುತ್ತದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ಎಪಿಎಂಸಿ ಮಾರುಕಟ್ಟೆ ಸಗಟು ತರಕಾರಿ ಮಾರುಕಟ್ಟೆ ಸ್ಥಳಾಂತರಗೊಂಡ ಬಳಿಕ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿತ್ತು.
==========ಬಾಕ್ಸ್==========
ಹದಿಮೂರು ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ರಸ್ತೆಯ ಕಾಮಗಾರಿಗೆ ಬೆಂಗಳೂರಿನಲ್ಲಿ ಟೆಂಡರ್ ಪ್ರಕ್ರಿಯೇ ಆಗಿದ್ದು, ೧೦ ದಿನಗಳಲ್ಲಿ ಕೆಲಸ ಆರಂಭವಾಗಲಿದೆ. ಇನ್ನೂ ವಿವಿಧ ಅಭಿವೃದ್ಧಿ ಕಾರ್ಯಗಳು ಸರಕಾರ ಮಟ್ಟದಲ್ಲಿ ಇವೆ, ೧ ವರ್ಷದ ಅವಧಿಯಲ್ಲಿ ಕೃಷಿ ಮಾರುಕಟ್ಟೆ ಪೂರ್ಣ ಪ್ರಮಾಣದ ಕೆಲಸಗಳು ಆಗಲಿವೆ.
ಕೆ.ಎಚ್ ಗುರುಪ್ರಸಾದ್
ಜಂಟಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ
========ಬಾಕ್ಸ್=======
೩೪ ಸಾವಿರ ಚ.ಮಿ ರಸ್ತೆ
ಎಪಿಎಂಸಿಯಲ್ಲಿ ಗಟಾರು ಸೇರಿ ಒಟ್ಟು ೧೨ ಮೀಟರ್ ಅಗಲದ ರಸ್ತೆ ನಿರ್ಮಾಣ ಮಾಡಲಾಗಿದ್ದಾರೆ. ಸಗಟು ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿ ಒಟ್ಟಾರೆ ೩೪ ಸಾವಿರ ಚ.ಮೀ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಿದ್ದಾರೆ. ೬ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಎಂಜಿನಿಯರ ಅಶೋಕ ಹರಕುಣಿಯವರು ತಿಳಿಸಿದ್ದಾರೆ.

loading...