ಬೆಳಗಾವಿ ಜನತೆಗೆ ತಪ್ಪದ ಗೋಳು !

0
34

ಮಳೆಯಾದ್ರೆ ಮಿನಿ ಹೊಂಡಗಳಂತಾದ ರಸ್ತೆಗಳು | ಕಣ್ಣ ತೆರೆಯದ ಜಿಲ್ಲಾಡಳಿತ

ಮಾಲತೇಶ ಮಟಿಗೇರ

ಬೆಳಗಾವಿ: ಸ್ಮಾರ್ಟ್ ಸಿಟಿ ಹಣೆ ಪಟ್ಟಿ ಹೊತ್ತಿರುವ ಕುಂದಾನಗರಿ ಜನತೆಗೆ ಪ್ರತಿ ವರ್ಷ ಮಳೆಗಾಲ ಆರಂಭವಾದರೆ ಹದಗೆಟ್ಟ ರಸ್ತೆಗಳಿಂದ ಅನುಭವಿಸುವ ತೊಂದರೆಗೆ ಮುಕ್ತಿ ದೊರೆಯುವಂತೆ ಕಾಣುತ್ತಿಲ್ಲ.
ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಸ್ಮಾರ್ಟ್ ಸಿಟಿಗೆ ಬೆಳಗಾವಿ ಆಯ್ಕೆ ಆಗಿ ನಾಲ್ಕು ವರ್ಷ ಪೂರ್ಣಗೊಳಿಸಿದೆ. ಆದರೆ ರಸ್ತೆಗಳು ಮಾತ್ರ ಸುಧಾರಣೆಯಾಗುವಂತೆ ಕಾಣುತ್ತಿಲ್ಲ. ಮಳೆಗಾಲ ಪ್ರಾರಂಭವಾದರೆ ಸಾಕು ನಗರದ ವಿವಿಧಡೇ ಕೆಲ ರಸ್ತೆಗಳು ಕೇಸರು ಗದ್ದೆಯಾದರೆ, ಇನ್ನೊಂಡೇ ಮಿನಿ ಹೊಂಡಗಳಂತೆ ನಿರ್ಮಾಣವಾಗುತ್ತವೆ. ಆದರೆ ಅಧಿಕಾರಿಗಳು ಮಾತ್ರ ಅಶ್ವಾಸನೆಯಲ್ಲಿಯೇ ದಿನಗಳನ್ನು ದುಡ್ಡುತ್ತಾ ಕುಳಿತು ಬಿಟ್ಟಿದ್ದಾರೆ.


ರಸ್ತೆ ಸುಧಾರಣೆಗೆ ನಡೆಯದ ಸಭೆ: ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಮೊದಲು ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಅಧಿಕಾರಿಗಳು ಸಭೆಗಳನ್ನು ನಡೆಸುವ ಮೂಲಕ ರಸ್ತೆಗಳನ್ನು ಸುಧಾರಣೆಗಳಿಸುವ ಕಾರ್ಯವನ್ನು ಕೈಗೊಳ್ಳಬೇಕು. ಆದರೆ ಈ ಬಾರಿ ಯಾವುದೇ ರೀತಿ ಸಭೆಗಳನ್ನು ನಡೆಸದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ವನ್ನು ಎತ್ತಿ ತೊರಿಸುತ್ತದೆ. ಅಲ್ಲದೆ ನಗರದ ಜನತೆ ಪ್ರತಿಭಟನೆ ಮಾಡಿ ಎಲ್ಲವನ್ನೂ ಪಡೆಯುವ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಹದಗೆಟ್ಟ ಪ್ರಮುಖ ರಸ್ತೆಗಳು: ಎಪಿಎಂಸಿಯಿಂದ ಮಾರ್ಕಂಡಯ್ಯ ರೀವರ್, ಕೆ.ಎಚ್ ಕಂಗ್ರಾಳಿಯಿಂದ ಅಲಟಗಾ ಕ್ರಾಸ್, ನಗರದ ಮಧ್ಯಭಾಗದಲ್ಲಿರುವ ಕೇಂದ್ರ ಗ್ರಂಥಾಲಯ ರಸ್ತೆ, ಕೆಪಿಟಿಸಿಎಲ್ ರೋಡ್, ಮಾರುತಿ ಗಲ್ಲಿ ಸೇರಿದಂತೆ ಹಲವಡೇ ರಸ್ತೆಗಳು ಮತ್ತೆ ಅದೇ ಸ್ಥಿತಿಗೆ ಬಂದಿವೆ. ರೋಡ್ ನಲ್ಲಿ ಗುಂಡಿಗಳದ್ದೆ ದರ್ಬಾರ್ ಆರಂಭವಾಗಿದ್ದು, ಮಳೆಗಾಲ ಆರಂಭದಿಂದ ರಸ್ತೆಯಲ್ಲಿ ಸಂಚರಿಸಲು ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ಬೆಳಗಾವಿ ಜನತೆಗೆ ಬಂದಿದೆ.

ಹೈಟೆಕ್ ರಸ್ತೆಗಳು: ನಗರದ ಹಲವೆಡೇ ರಸ್ತೆಗಳಲ್ಲಿ ಗುಂಡಿಗಳ ದರ್ಬಾರ್ ಆಗಿದ್ದರೆ ಇನ್ನೊಂದಡೆ ಕೆಲ ರಸ್ತೆಗಳು ಹೈಟೆಕ್ ಆಗಿದ್ದಾವೆ. ಆರ್ ಪಿಡಿ, ಶಾಸ್ತಿçÃನಗರ, ಹನುಮಾನ ನಗರ, ಅಜಂನಗರ, ಸಾಯಿ ನಗರ ರಸ್ತೆಗಳು ಪುಲ್ ಹೈಟೆಕ್ ಮಾದರಿಯಲ್ಲಿ ನಿರ್ಮಾಣವಾಗಿವೆ. ಅದೇ ರೀತಿ ಉಳಿದ ರಸ್ತಗಳು ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನಿರ್ಮಾಣವಾಗಲಿ ಎಂಬುವುದು ನಗರ ಜನತೆ ಆಸೆಯವಾಗಿದೆ.
ಒಟ್ಟಿನಲ್ಲಿ ನಗರದ ಜನತೆ ಮಳೆಗಾಲ ಆರಂಭವಾದರೆ ಭಯದಿಂದ ಸಂಚರಿಸುವ ಸ್ಥಿತಿ ತಪ್ಪುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಹದಗೆಟ್ಟ ರಸ್ತೆಗಳನ್ನು ದುರಸ್ಥಿ ಕಾರ್ಯ ಕೈಗೊಳ್ಳುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿದೆ.

ಜಿಲ್ಲಾಡಳಿತದ ಕಣ್ಣತೆರೆಸುವ ಪ್ರಯತ್ನ
ಕಳೆದ ವರ್ಷ ನಗರದಲ್ಲಿ ಸುರಿಯುತ್ತಿದ್ದ ಬಾರಿ ಮಳೆಯಿಂದ ಪ್ರಮುಖ ರಸ್ತೆಗಳೇ ಹದಗೆಟ್ಟ ಪರಿಣಾಮ ಅಪಘಾತಗಳು ಸಂಭವಿಸಿದ್ದವು. ಇವುಗಳನ್ನು ಗಂಭೀರವಾಗಿ ಪರಿಣಿಸದ ಜಿಲ್ಲಾಡಳಿತದ ವಿರುದ್ಧ ವಿವಿಧ ಸಂಘಟನೆಗಳು , ಹೋರಾಟಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೋಡುವುದು, ಮಾಲೆ ಹಾಕುವುದು, ತೆಪ್ಪದಲ್ಲಿ ಕುಳಿತು ಸವಾರಿ ಸೇರಿದಂತೆ ಅನೇಕ ರೀತಿ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತದ ಕಣ್ಣತೆರೆಯಲು ಪ್ರಯತ್ನಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹದಗೆಟ್ಟ ರಸ್ತೆಯ ದುರಸ್ಥಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿತ್ತು. ಆದರೂ ಸಹ ತಾತ್ಕಾಲಿಕ ರಸ್ತೆ ದುರಸ್ಥಿ ಮಾಡಿದರು. ಆದರೆ ಈ ವರ್ಷ ಮತ್ತೆ ಮಳೆ ಆರಂಭವಾಗಿದ್ದು, ಜಿಲ್ಲೆಯ ಜನತೆಯ ಗೋಳು ಮಾತ್ರ ತಪ್ಪುತ್ತಿಲ್ಲ.

 

ಎಪಿಎಂಸಿಯಿಂದ ಮಾರ್ಕಂಡಯ್ಯ ರಸ್ತೆ ಅತೀ ಪ್ರಮುಖ ರಸ್ತೆಯಾಗಿದ್ದು, ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ರಸ್ತೆ ಸುಮಾರು ೨೫ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಅನೇಕ ವರ್ಷಗಳಿಂದ ರೋಡ್ ಹದಗೆಟ್ಟಿದ್ದರು ರಸ್ತೆ ಕಾಮಗಾರಿ ನಡೆದಿಲ್ಲ. ಇನ್ನೂ ಮಳೆಗಾಲ ಆರಂಭವಾದರೆ ಸಾಕು ನಗರದ ಕೆಲ ರಸ್ತೆಗಳಲ್ಲಿ ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣವೇ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಬೇಕು.

ಸರಸ್ವತಿ ಪಾಟೀಲ, ಜಿಲ್ಲಾ ಪಂಚಾಯತ್ ಸದಸ್ಯೆ

loading...