ಕ್ರೀಯಾ ಯೋಜನೆ ಸಿದ್ದಪಡಿಸುವ‌ ಕುರಿತು ತರಬೇತಿ ಕಾರ್ಯಾಗಾರ

0
68

ಕ್ರೀಯಾ ಯೋಜನೆ ಸಿದ್ದಪಡಿಸುವ‌ ಕುರಿತು ತರಬೇತಿ ಕಾರ್ಯಾಗಾರ

ಬೆಳಗಾವಿ : 2019-20ನೇ ಸಾಲಿನಲ್ಲಿ‌ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಮಾಹಿತಿ ಬಳಸಿಕೊಂಡು
ಜಿಯೋ ಸ್ಪಾಟಿಕಲ್ ಕ್ರಿಯಾ ಯೋಜನೆಗಳನ್ನು ರೂಪಿಸಲು ಬೆಳಗಾವಿ,ಬಾಗಲಕೋಟೆ, ವಿಜಯಪುರ ಜಿಲ್ಲೆಗಳ‌ನೊಳಗೊಂಡತೆ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಯೋಜನಾ ಹಾಗೂ ಸಾಂಖ್ಯಿಕ ಇಲಾಖೆಯ ನಿರ್ದೇಶಕ ಗುರುರಾಜ ರಾವ್ ಉದ್ಘಾಟಿಸಿದರು. ಪ್ರಸ್ತಾವಿಕವಾಗಿ ಜಿಲ್ಲಾ ಪಂಚಾಯತ್ ಸಿಇಓ ಡಾ.ರಾಜೇಂದ್ರ ಆರ್.ವಿ ಮಾತನಾಡಿ, ಸರಕಾರದ ಅನುದಾನವನ್ನು ಎಲ್ಲ ಇಲಾಖೆಗೆ ಸಮಾನವಾಗಿ ನೀಡಬೇಕಾಗಿದೆ. ಬರಿ ಬೇಡಿಕೆಗಳಿದ್ದ ಇಲಾಖೆಗಳಿಗೆ ಮಾತ್ರ ನೀಡದಿರಿ. ಇದರಿಂದ ಬಹಳ ಕೆಲಸಗಳು ನಿರ್ಲಕ್ಷ್ಯ ಒಳಗಾಗುತ್ತವೆ.
ನಾವು ಅನುದಾನ ಬಳಕೆ‌,ಹಂಚಿಕೆ ಕ್ರೀಯಾ ಯೋಜನೆ ರೂಪಿಸುವಲ್ಲಿ ವಿಪಲವಾಗುತ್ತಿದ್ದೆವೆ.ಆದ್ದರಿಂದ
ಅವಶ್ಯಕತೆ ಇದ್ದಲ್ಲಿಯೂ ಸಹ ಅನುದಾನವನ್ನು‌ ನೀಡುವ ಮೂಲಕ ಕ್ರಿಯಾ ಯೋಜನೆ ತಯಾರಿಸಿ ಎಂದು ಮೂರು ಜಿಲ್ಲೆಯ ಯೋಜನಾಧಿಕಾರಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ‌ತಂತ್ರಜ್ಞಾನ ಇಲಾಖೆ ಕಾರ್ಯಕಾರಿ ಕಾರ್ಯದರ್ಶಿ ಗಳು ಹೇಮಂತ್ ಕುಮಾರ್  ಕ್ರೀಯಾ ಯೋಜನೆ ಸಿದ್ದಪಡಿಸಿರುವ ಕುರಿತು ತರಬೇತಿ‌ ನೀಡಿದರು.

ಈ ಸಂದರ್ಭದಲ್ಲಿ ಮೂರು ಜಿಲ್ಲೆಯ ವಿವಿಧ ಇಲಾಖೆಯ ಕ್ರಿಯಾ ಯೋಜನಾಧಿಕಾರಿಗಳು ಹಾಜರಿದ್ದರು.

loading...