ನೇರ ನೇಮಕಾತಿಗೆ ಆಗ್ರಹ

0
13

ಕನ್ನಡಮ್ಮ ಸುದ್ದಿ-ಧಾರವಾಡ: ರಾಜ್ಯದಲ್ಲಿ ಹಿಂದುಗಳಿದ ವರ್ಗಗಳಲ್ಲಿ ವಿಶ್ವಕರ್ಮ ಸಮಾಜ ಜನ ಸಂಖ್ಯೆಯಲ್ಲಿ ೨ನೇ ಸ್ಥಾನದಲ್ಲಿದ್ದು, ಆರ್ಥಿಕವಾಗಿ ಹಿಂದುಳಿದದನ್ನು ಹೋರಾಟದ ಮುಖಾಂತರ ಮತ್ತು ಬೃಹತ್ ಸಮಾವೇಶಗಳನ್ನು ಮಾಡುವದರ ಮೂಲಕ ಹಿಂದಿನ ಸರ್ಕಾರದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೆÃವೆ. ಈ ನಮ್ಮ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂಧಿಸಿ ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ವಿವಿಧ ಯೋಜನೆಗಳಾದ ಗಂಗಾ ಕಲ್ಯಾಣ, ಅರಿವು, ಪಂಚವೃತ್ತಿ ಸಾಲ, ಮಹಿಳಾ ಸ್ತಿçÃಶಕ್ತಿ ಗುಂಪುಗಳಿಗೆ ಸಾಲ, ಪಂಚ ಕಸಬುಗಳಾದ ಬೆಳ್ಳಿ, ಬಂಗಾರದ ಕೆಲಸ, ಕಟ್ಟಿಗೆ ಕೆಲಸ, ಲೋಹದ ಕೆಲಸ, ಶಿಲ್ಪದ ಕೆಲಸ ಹೀಗೆ ಅನೇಕ ಯೋಜನೆಗಳನ್ನು ರೂಪಿಸಿ ನಿಗಮದ ಕೆಲಸವನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಅರ್ಜಿಸಲ್ಲಿಸಿದ ಫಲಾನುಭವಿಗಳನ್ನು ಆಯ್ಕೆಮಾಡುವ ಪ್ರಕ್ರಿÃಯೆಯಲ್ಲಿ ಲಾಟರಿ ಪದ್ಧತಿಯನ್ನು ಅಳವಡಿಸಿದ್ದು, ಇದರಿಂದ ನಿಜವಾದ ಫಲಾನುಭವಿಗಳಿಗೆ ಇದರ ಪ್ರಯೋಜನೆ ದೊರೆಯದೇ ಮಧ್ಯಮ ಸ್ಥಿತಿವಂತರಿಗೆ ಇದರ ಲಾಭವಾಗುತ್ತಿದೆ. ಕಾರಣ ವಿಶ್ವಕರ್ಮ ಸಮಾಜ ಸಬಲಗೊಳ್ಳಬೇಕಾದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಬಲಗೊಳ್ಳುವಲ್ಲಿ ಯಶಸ್ವಿಗೊಳ್ಳಬೇಕಾದರೆ, ನಿಜವಾದ ಫಲಾನುಭವಿಗಳನ್ನು ಆಯ್ಕೆ ಸಮಿತಿಯಲ್ಲಿ ನೇರವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಒಟ್ಟಾರೆ ಸಮಾಜದ ಹಿತದೃಷ್ಠಿಯಿಂದ ಲಾಟರಿ ಪದ್ಧತಿ ರದ್ದುಗೊಳಿಸಿ ಏಕೆಂದರೆ ರಾಜ್ಯದ ಯಾವ ಜಿಲ್ಲೆಯಲ್ಲಿಯೋ ಈ ಲಾಟರಿ ಪದ್ಧತಿ ಇರುವದಿಲ್ಲ. ಆದರಿಂದ ಹೆಚ್ಚಿನ ಪ್ರಾದಿನಿತ್ಯವನ್ನು ನೇರವಾಗಿ ಫಲಾನುಭವಿಗಳನ್ನು ಆಯ್ಕೆಮಾಡಬೇಕೆಂದು ಧಾರವಾಡ ಜಿಲ್ಲಾ ವಿಶ್ವಕರ್ಮ ಮಹಾಸಭಾ ವತಿಯಿಂದ ಮನವಿ ಸಲ್ಲಿಸಿತು. ಮನೋಹರ ಲಕ್ಕುಂಡಿ, ಶಿವಣ್ಣ ಬಡಿಗೇರ, ವಸಂತ ಅರ್ಕಾಚಾರ್, ಮೋಹನ ಅರ್ಕಸಾಲಿ, ಸಂತೋಷ ಬಡಿಗೇರ ಸೇರಿದಂತೆ ಮತ್ತಿತರರಿದ್ದರು.

loading...