ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಇರ್ಷಾದ್ ನಿಧನ

0
16

ಡಾಕಾ- ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಮತ್ತು ಜತಿಯಾ ಪಕ್ಷದ ಅಧ್ಯಕ್ಷ ಹುಸೇನ್ ಮುಹಮ್ಮದ್ ಇರ್ಷಾದ್ ಅವರು ಭಾನುವಾರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾದರು.

ಅವರು ಬೆಳಿಗ್ಗೆ 7.45ಕ್ಕೆ ಕೊನೆಯುಸಿರೆಳೆದರು ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್ಪಿಆರ್) ಸಹಾಯಕ ನಿರ್ದೇಶಕ ರೆಲ್ ಶಮೀಮ್ ಹೇಳಿದ್ದಾರೆ.

ಮಾಜಿ ಮಿಲಿಟರಿ ಮುಖ್ಯಸ್ಥ ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಸ್ಥಿತಿ ಹದಗೆಟ್ಟು ಅವರ ಮನೆ ಮತ್ತು ಆಸ್ಪತ್ರೆಗೆ ಓಡಾಡುತ್ತಿದ್ದರು.
ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಇರ್ಷಾದ್ ಅವರು 1982ರಲ್ಲಿ ಸೇನಾ ಮುಖ್ಯಸ್ಥರಾಗಿದ್ದಾಗ ಅಧಿಕಾರವನ್ನು ವಶಪಡಿಸಿಕೊಂಡರು ಮತ್ತು ಮುಂದಿನ ವರ್ಷ ತಮ್ಮನ್ನು ಅಧ್ಯಕ್ಷರನ್ನಾಗಿ ಘೋಷಿಸಿಕೊಂಡಿದ್ದರು.

ನಂತರ ಅವರು ಜತಿಯಾ ಪಕ್ಷವನ್ನು ರಚಿಸಿದರು ಮತ್ತು 1986ರ ವಿವಾದಾತ್ಮಕ ಚುನಾವಣೆಯಲ್ಲಿ ಗೆದ್ದರು.

ಏಪ್ರಿಲ್ 24, 1982ರಂದು ಅಧ್ಯಕ್ಷ ಅಬ್ದುಸ್ ಸತ್ತಾರ್ ವಿರುದ್ಧ ರಕ್ತರಹಿತ ದಂಗೆಯ ಸಂದರ್ಭದಲ್ಲಿ ಅವರು ಸೈನ್ಯದ ಮುಖ್ಯಸ್ಥರಾಗಿ ಅಧಿಕಾರವನ್ನು ತಮ್ಮದಾಗಿಸಿಕೊಂಡರು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ನೇತೃತ್ವದ ಸಾಮೂಹಿಕ ದಂಗೆವರೆಗೆ ಇರ್ಷಾದ್ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

loading...