ವಿಶ್ವಕಪ್ ಗೆಲ್ಲಲಿದೆ ಇಂಗ್ಲೆಂಡ್: ಪಾಂಟಿಂಗ್

0
13

ಲಂಡನ್:- ಆತಿಥೇಯ ತಂಡ 2019ರ ಐಸಿಸಿ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅವರು ಭವಿಷ್ಯ ನುಡಿದಿದ್ದಾರೆ.
ಇಂಗ್ಲೆಂಡ್ ಭಾನುವಾರ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ವಿಶ್ವಕಪ್ ಫೈನಲ್ ಆಡಲಿದೆ. ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಲು ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಹೋರಾಟ ನಡೆಸಲಿವೆ. ಆರಂಭದಿಂದಲೂ ಇಂಗ್ಲೆಂಡ್ ತಂಡವನ್ನು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಲಾಗುತ್ತಿತ್ತು.
ಇಂಗ್ಲೆಂಡ್ ಎರಡನೇ ಸೆಮಿಫೈನಲ್ಸ್ ನಲ್ಲಿ ಐದು ಬಾರಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿತ್ತು. ಇಂಗ್ಲೆಂಡ್ 1992ರ ಬಳಿಕ ಹಾಗೂ ಒಟ್ಟಾರೆ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಈ ಬಗ್ಗೆ ಮಾತನಾಡಿರುವ ಪಾಂಟಿಂಗ್, ‘ಇಂಗ್ಲೆಂಡ್ ವಿಶ್ವಕಪ್ ಗೆಲ್ಲಬಹುದು. ಟೂರ್ನಿ ಆರಂಭಕ್ಕೂ ಮುನ್ನ ಆತಿಥೇಯ ತಂಡ ಕಪ್ ಗೆಲ್ಲುವುದಾಗಿ ತಿಳಿಸಿದ್ದೆ. ಆಂಗ್ಲರನ್ನು ಅವರ ಅಂಗಳದಲ್ಲಿ ಸೋಲಿಸುವುದು ಕಷ್ಟ ಎಂದು ಹೇಳಿದ್ದಾರೆ.

‘ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಲು ಸಾಕಷ್ಟು ಶ್ರಮಿಸಿದೆ. ಸತತ ಎರಡು ಬಾರಿ ವಿಶ್ವಕಪ್ ಫೈನಲ್ ಗೆ ಅರ್ಹತೆ ಪಡೆಯುವುದು ದೊಡ್ಡ ಸಾಧನೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲೂ ಭರ್ಜರಿ ಪ್ರದರ್ಶನ ನೀಡಿ’ ಎಂದು ಪಾಂಟಿಂಗ್ ಆಶಿಸಿದ್ದಾರೆ.

loading...