8 ರಿಂದ 10 ಐಪಿಎಲ್‌ ತಂಡಗಳ ಏರಿಕೆಗೆ ಮತ್ತೆ ಪ್ರಯತ್ನ

0
11

ಮುಂಬೈ:- ವಿಶ್ವದ ಅತ್ಯಂತ ಶ್ರೀಮಂತ ಟೂರ್ನಿಯೆಂದೇ ಕರೆಯುವ ಇಂಡಿಯನ್‌ ಪ್ರೀಮಿಯರ್ ಲೀಗ್‌ ಮುಂಬರುವ ಆವೃತ್ತಿಗೆ ತನ್ನ ಪ್ರಾಂಚೈಸಿಗಳನ್ನು 8 ರಿಂದ 10ಕ್ಕೆ ಏರಿಸಲು ಮುಂದಾಗಿದೆ.
ಹಾಗಾಗಿ, ದಿ ಅದಾನಿ ಗ್ರೂಪ್‌ (ಅಹಮದ್‌ಬಾದ್‌), ದಿ ಆರ್‌ಪಿಜಿ-ಸಂಜಯ್‌ ಗೊಯಾಂಕ್‌ ಗ್ರೂಪ್‌ (ಪುಣೆ) ಟಾಟಸ್‌ (ರಾಂಚಿ ಹಾಗೂ ಜೆಮ್ ಶೆಡ್‌ಪುರ್‌) ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ಐಪಿಎಲ್‌ ನೂತನ ಪ್ರಾಂಚೈಸಿಗಾಗಿ ಬಿಡ್‌ ಸಲ್ಲಿಸಿರುವ ಅಗ್ರ ಸಂಸ್ಥೆಗಳಾಗಿವೆ.
ಕಳೆದ 2011ರಲ್ಲಿ ಹೆಚ್ಚುವರಿಯಾಗಿ ಎರಡು ತಂಡಗಳನ್ನು ಆಡಿಸಲಾಗಿತ್ತು. ಆದರೆ, ಇದರಿಂದಾಗಿ ಹಲವು ವಿವಾದಗಳು ಉದ್ಭವವಾಗಿದ್ದವು. ಆದ್ದರಿಂದ ಹೊಸ ಎರಡು ತಂಡಗಳನ್ನು ಕೈ ಬಿಡಲಾಗಿತ್ತು. ಇದೀಗ ಅದೇ ಪ್ರಯೋಗ ಮಾಡಲು ಐಪಿಎಲ್‌ ಮುಂದಾಗಿದೆ.
ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿ, ” ಐಪಿಎಲ್‌ನಲ್ಲಿ 8 ರಿಂದ 10 ತಂಡಗಳು ಏರಿಕೆ ಮಾಡುವ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಈ ಪ್ರಕ್ರಿಯೆಗಾಗಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರಾಂಚೈಸಿಗಳ ಐಪಿಎಲ್‌ ಅನ್ನು ಪ್ರಾಯೋಗಿಕವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಬಿಸಿಸಿಐ ನೆರವು ಅಗತ್ಯ ಎಂದು ಹೇಳಿದ್ದಾರೆ.
” ಪಾಲುದಾರರು ಹಾಗೂ ಬಿಸಿಸಿಐ ಎರಡೂ ಫ್ರಾಂಚೈಸಿಗಳೊಂದಿಗೆ ಉತ್ತಮ ಬಾಂಧವ್ಯ ಬೆಸೆದುಕೊಂಡಿದ್ದಾರೆ. ವೃತ್ತಿಪರ ನಿರ್ವಹಣೆಯಲ್ಲಿ ಯಾರಾದರೂ ಅಪಾರದರ್ಶಕ ನಡವಳಿಕೆ ಮತ್ತು ಪ್ರಾಸಂಗಿಕ ಹೇಳಿಕೆಗಳು ಮತ್ತು ಟೀಕೆಗಳು ಬಿಸಿಸಿಐ ಮತ್ತು ಫ್ರಾಂಚೈಸಿಗಳ ನಡುವಿನ ವಿಶ್ವಾಸ ಮತ್ತು ಸಂಬಂಧವನ್ನು ಅನಗತ್ಯವಾಗಿ ಹಾಳುಮಾಡುತ್ತವೆ ಎಂದು ನಾವು ಕಳವಳ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

loading...