ಹುಲಿ ದತ್ತು ಪಡೆದ ಸಚಿವ ಜಿಟಿಡಿ

0
5


ಮೈಸೂರು- ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ತಮ್ಮ ಮೊಮ್ಮಗನ

ಎರಡನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಮೈಸೂರು ಮೃಗಾಲಯದಿಂದ ಹೆಣ್ಣು ಹುಲಿಯೊಂದನ್ನು ರವಿವಾರ ದತ್ತು ಪಡೆದಿದ್ದಾರೆ.

ಸಚಿವ ಜಿಟಿಡಿ ಅವರ ಪುತ್ರ ಹರೀಶ್ ಗೌಡ ಅವರ ಏಕೈಕ ಪುತ್ರನಾಗಿರುವ ಸಂವೇದ್ ಗೌಡ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದ ಚಾಮುಂಡಿ ಹೆಸರಿನ ಹುಲಿಯನ್ನು ಸಚಿವರು ದತ್ತು ಪಡೆದಿದ್ದಾರೆ.

ಒಂದು ವರ್ಷದ ಅವಧಿಗಾಗಿ 1 ಲಕ್ಷ ರೂ ಹಣ ನೀಡಿ, ಹೆಣ್ಣು ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಒಂದು ವರ್ಷದ ಹುಲಿಯ ಆರೈಕೆಗೆ ಈ ಹಣವನ್ನು ಬಳಸಲಾಗುತ್ತದೆ.
ಮೃಗಾಲಯದ ದತ್ತು ಯೋಜನೆಗೆ ಸಹಕರಿಸಿದ್ದಕ್ಕಾಗಿ ಸಚಿವರ ಕುಟುಂಬಕ್ಕೆ ಮೃಗಾಲಯದ ಆಡಳಿತ ಮಂಡಳಿ ಧನ್ಯವಾದ ಸಲ್ಲಿಸಿದೆ.

loading...