ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಉಳಿಸಿ

0
11

ಕನ್ನಡಮ್ಮ ಸುದ್ದಿ-ಧಾರವಾಡ: ಗಿಡಗಳನ್ನು ಬೆಳೆಸಿ, ಪರಿಸರ ಉಳಿಸಿ ಮುಂಬರುವ ಪರಿಸರ ಕ್ಷಾಮವನ್ನು ತಡೆಗಟ್ಟಬೇಕು ಎಂದು ಜನತಾ ಶಿಕ್ಷಣ ಸಮಿತಿ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಹೇಳಿದರು.
ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಮತ್ತು ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಇವುಗಳ ರಾಷ್ಟಿçÃಯ ಸೇವಾ ಯೋಜನೆ ಘಟಕಗಳು ಹಮ್ಮಿಕೊಂಡ “ವನಮಹೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು. `ಇಂದಿನ ದಿನಮಾನದಲ್ಲಿ ಗಿಡಗಳ ಮಾರಣ ಹೋಮ ನಿರಂತರ ನಡೆಯುತ್ತಾ ಇದೆ. ಇದರಿಂದ ಮಳೆಯ ಕೊರೆತೆ ಉಂಟಾಗಿ, ನೀರಿನ ಅಭಾವ ಹೆಚ್ಚುವುದರಿಂದ ಬೆಳೆಗಳು ಸರಿಯಾದ ರೀತಿಯಲ್ಲಿ ಫಸಲು ಕೊಡದೆ ಸೊರಗುತ್ತಿವೆ ಮತ್ತು ರೈತರು ಆತ್ಮಹತೆಗೆ ಶರಣಾಗುತ್ತಿದ್ದಾರೆ. ಕಾರಣ, ಸ್ವಯಂಸೇವಕರು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಸಾಕಷ್ಟು ಗಿಡಗಳನ್ನು ನೆಟ್ಟು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿ, ಅಭಿವೃದ್ಧಿ ಅಧಿಕಾರಿ ಪ್ರೊ. ಸೂರಜ ಜೈನ, ಡಾ. ಜಿನದತ್ತ ಹಡಗಲಿ, ಪ್ರೊ. ಎಸ್.ಕೆ. ಸಜ್ಜನ, ಶ್ರಿÃ ಜಿನೇಂದ್ರ ಕುಂದಗೋಳ, ಪ್ರೊ. ಚೈತನ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಭಾರತಿ ಪ್ರಾರ್ಥಿಸಿದರು. ಕುಮಾರ. ಮುಡಬಸನಗೌಡ ಸ್ವಾಗತಿಸಿದರು. ಕು. ಅಮೋಘ ವಂದಿಸಿದರು. ನಂತರ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

loading...