ಜನಸಂಖ್ಯೆ ವಿಸ್ಪೊÃಟ ಒಂದು ಸವಾಲಾಗಿದೆ

0
16

ಕನ್ನಡಮ್ಮ ಸುದ್ದಿ-ಧಾರವಾಡ: ಪ್ರಸ್ತುತ ಭಾರತದಲ್ಲಿ ಅತಿ ವೇಗವಾಗಿ ಜನಸಂಖ್ಯೆ ಬೆಳೆಯುತ್ತಿರುವ ಕಾರಣದಿಂದ ಸಾಮಾಜಿಕ ಕೆಡಕುಗಳು ಮತ್ತು ಪರಿಸರ ನಾಶವಾಗುತ್ತದೆ ಎಂದು ಭಾರತಿಯ ಆರ್ಥಿಕ ಮತ್ತು ಜನಸಂಖ್ಯಾ ಸಂಶೋಧನೆ ಕೇಂದ್ರದ ನಿರ್ದೇಶಕಿ ಡಾ. ಜ್ಯೊÃತಿ ಹಳ್ಳದ ಹೇಳಿದರು.
ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆ ಮತ್ತು ಮಾನವ ಹಕ್ಕುಗಳ ಸಂಘ ಮತ್ತು ಸಮಾಜಶಾಸ್ತç ವಿಭಾಗದ ಆಶ್ರಯದಲ್ಲಿ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ರಾಷ್ಟç ಎದುರಿಸುತ್ತಿರುವ ಜನಸಂಖ್ಯೆ ವಿಸ್ಪೊÃಟ ಒಂದು ಸವಾಲಾಗಿದೆ. ಸುಮಾರು ೨೦೨೪ರಲ್ಲಿ ಭಾರತ ಚೀನಾವನ್ನು ಹಿಂದೆ ಹಾಕಿ ವಿಶ್ವದ ಅತಿದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟç ಆಗಬಹುದೆಂದು ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ಮುಖ್ಯ ಕಾರಣ ಅನಕ್ಷರತೆ, ಮರಣ ಪ್ರಮಾಣ ಕಡಿಮೆ, ಹೆಚ್ಚಿನ ಜೀವಿತಾವಧಿ ಮತ್ತು ಕುಟುಂಬ ಯೋಜನೆಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಜನಸಂಖ್ಯಾ ಬೆಳವಣಿಗೆಗೆ ಕಾರಣ ಎಂದರು.

ಅನಾರೋಗ್ಯ ಸ್ಥಿತಿ, ಅಪರಾಧ ಪ್ರಮಾಣ ಏರಿಕೆ, ಬಾಲಾಪರಾಧ, ವೇಶ್ಯಾವೃತ್ತಿ, ಬಡತನ ಅಪೌಷ್ಠಿಕತೆ, ಕೊಳಚೆ ಪ್ರದೇಶಗಳ ಬೆಳವಣಿಗೆ ಹಾಗೂ ಅನೇಕ ರೋಗಗಳ ಹರಡಿಕೆಯಿಂದ ಪರಿಸರ ಕೂಡ ನಾಶವಾಗುತ್ತದೆ’ ಎಂದು ಹೇಳಿದರು.
ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿ ಅಧ್ಯಕ್ಷತೆವಹಿಸಿ ಮಾತನಾಡಿ, ಈ ದಿನವನ್ನು ೧೯೮೯ ರಿಂದ ‘ವಿಶ್ವಜನಸಂಖ್ಯಾ ದಿನಾಚರಣೆ’ ಎಂದು ಆಚರಿಸಲಾಗುತ್ತಿದೆ. ಸದರಿ ಕಾರ್ಯಕ್ರಮದ ಉದ್ದೆÃಶ ಜನರಲ್ಲಿ ಜನಸಂಖ್ಯೆ ವಿಸ್ಪೊÃಟದ ದುಷ್ಟಪರಿಣಾಮಗಳನ್ನು ತಿಳಿಸುವುದು ಮತ್ತು ನಿಯಂತ್ರಣಕ್ಕಾಗಿ ಯೋಜನೆಗಳನ್ನು ತರುವುದು. ಕಾರಣ, ಈ ನಿಟ್ಟಿನಲ್ಲಿ ಯುವಕರು, ವಿದ್ಯಾರ್ಥಿಗಳು ಇದರ ಅರಿವನ್ನು ಮೂಡಿಸಲು ಸಕ್ರಿÃಯವಾಗಿ ಭಾಗವಹಿಸಬೇಕು ಎಂದರು. ಸಮಾರಂಭದಲ್ಲಿ ಡಾ. ಎಂ.ಸಿ. ಕೃಷ್ಣಮೂರ್ತಿ, ಡಾ. ಆರ್.ವ್ಹಿ. ಚಿಟಗುಪ್ಪಿ, ಪ್ರೊ. ಎಸ್.ಕೆ. ಸಜ್ಜನ ಇದ್ದರು.

loading...