ಚಂದ್ರಯಾನ -2ಕ್ಕೆ ಸಾಕ್ಷಿಯಾಗಲು ಶ್ರೀಹರಿಕೋಟಾಕ್ಕೆ ರಾಷ್ಟ್ರಪತಿ ಪ್ರಯಾಣ

0
7

ಚಿತ್ತೂರು:- ಶ್ರೀಹರಿಕೋಟಾದಲ್ಲಿ ಸೋಮವಾರ ಮುಂಜಾನೆ 2.51ಕ್ಕೆ ನಡೆಯಲಿರುವ ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಡ್ಡಯನಕ್ಕೆ ಸಾಕ್ಷಿಯಾಗಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಂಧ್ರಪ್ರದೇಶಕ್ಕೆ ಆಗಮಿಸಿದ್ದಾರೆ.
ರಾಷ್ಟ್ರಪತಿಗಳು ತಮ್ಮ ಪತ್ನಿಯೊಂದಿಗೆ ತಿರುಪತಿ ಸಮೀಪದ ರೇಣುಗುಂಠ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ನೆಲ್ಲೂರಿನ ಶ್ರೀಹರಿಕೋಟಾಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಚಂದ್ರಯಾನ -2 ಉಡ್ಡಯನ ವೀಕ್ಷಿಸಿದ ನಂತರ ಕೋವಿಂದ್ ಹಾಗೂ ಪತ್ನಿ ಸವಿತಾ ಕೋವಿಂದ್ ಅವರು ರೇಣಿಗುಂಠ ವಿಮಾನ ನಿಲ್ದಾಣದಿಂದ ದೆಹಲಿಗೆ ಮರಳಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಪಾಲ ಇಎಸ್ ಎಲ್ ನರಸಿಂಹನ್, ಚಿತ್ತೂರು ಜಿಲ್ಲಾಧಿಕಾರಿ ಭರತ್ ನಾರಾಯಣ ಗುಪ್ತಾ ಮತ್ತಿತರ ಅಧಿಕಾರಿಗಳು ಬರಮಾಡಿಕೊಂಡರು.
ಅಲ್ಲಿಂದ ತಿರುಪತಿಯ ಪದ್ಮಾವತಿ ಗೆಸ್ಟ್ ಹೌಸ್ ಗೆ ತೆರಳಿದ ಕೋವಿಂದ್ ದಂಪತಿ, ರಾಜ್ಯಪಾಲ ನರಸಿಂಹನ್ ದಂಪತಿಯೊಂದಿಗೆ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದರು.
ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಲ್ ಮತ್ತಿತರರು ಉಪಸ್ಥಿತರಿದ್ದರು.

loading...