ಜೀವನಮಟ್ಟ ಕುಸಿತಗಳಿಗೆ ಜನಸಂಖ್ಯಾ ಸ್ಪೊÃಟ ಕಾರಣ

0
40

ಕನ್ನಡಮ್ಮ ಸುದ್ದಿ-ಧಾರವಾಡ: ನಾಗಾಲೋಟದಲ್ಲಿ ಭೂತಾಕಾರವಾಗಿ ಬೆಳೆಯುತ್ತಿರುವ ಜನಸಂಖ್ಯಾ ಸ್ಪೊÃಟನೆ ದೇಶದ ಪ್ರಗತಿಯನ್ನು ಕುಂಠಿತಗೊಳಿಸುವ ಅಸುರಿ ಶಕ್ತಿಯಾಗಿದೆ ಎಂದು ಕರಡಿಗುಡ್ಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಶ್ರಿÃಕಾಂತ ಯಲಿಗಾರ ಹೇಳಿದರು. ತಾಲೂಕಿನ ಕರಡಿಗುಡ್ಡದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ವತಿಯಿಂದ `ವಿಶ್ವ ಜನಸಂಖ್ಯಾ ದಿನಾಚರಣೆ’ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ಚರ್ಚಾಕೂಟ, ಭಾಷಣ ಮತ್ತು ಪ್ರಬಂಧ ಸ್ಪರ್ಧೆ’ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಸಮಸ್ಯೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುವಂತೆ, ಜನಸಂಖ್ಯಾ ಸ್ಪೊÃಟನೆ ಬಡತನ, ನಿರುದ್ಯೊÃಗ, ಅಪೌಷ್ಠಿಕತೆ, ಜೀವನಮಟ್ಟ ಕುಸಿತ, ಪರಿಸರ ಮಾಲಿನ್ಯದಂತಹ ಭೀಕರ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ವಿಷಾದನೀಯ. ಈ ಜಟಿಲ ಸಮಸ್ಯೆಯಿಂದ ಮುಕ್ತಿ ಹೊಂದಲು `ರಾಷ್ಟಿçÃಯ ಜನಸಂಖ್ಯಾ ನೀತಿ’ಯನ್ನು ದೇಶÀ ಅನುಸರಿಸಬೇಕು. ಕುಟುಂಬಯೋಜನೆ ಹಾಗೂ ಜನಸಂಖ್ಯಾ ಶಿಕ್ಷಣದಿಂದ ಇದರ ಹತೋಟಿ ಸಾಧ್ಯ ಎಂದರು. ಕ.ವಿ.ವ.ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ ಬಹುಮಾನ ವಿತರಿಸಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವುದರ ಜೊತೆಗೆ ರಾಷ್ಟçದ ಅಭಿವೃದ್ಧಿಗೆ ಪೂರಕವಾಗುವಂತ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಂಘದ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳತ್ತ ಕೊಂಡ್ಯೊಯುತ್ತಿದ್ದು ಆ ದಿಶೆಯಲ್ಲಿ ಸಂಘದ ಮಕ್ಕಳ ಮಂಟಪ ಹಲವಾರು ಅರ್ಥಪೂರ್ಣ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ, ಆ ನಿಟ್ಟಿನಲ್ಲಿ ಕರಡಿಗುಡ್ಡ ಗ್ರಾಮದ ಶಾಲಾ, ಕಾಲೇಜು ಹಂತದಲ್ಲಿ ಪಠ್ಯಪೂರಕ ಚಟುವಟಿಕೆ ಆಯೋಜಿಸಿ ಇಂದು ಜನಸಂಖ್ಯಾ ಸ್ಪೊÃಟದ ಸಾಧಕ-ಬಾಧಕಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕರಡಿಗುಡ್ಡ ಸರಕಾರಿ ಪ.ಪೂ ಮಹಾವಿದ್ಯಾಲಯದ ಸಿ.ಬಿ.ಸಿ. ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಪಸಣ್ಣವರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಹನುಮಂತಪ್ಪ ನಿಟ್ಟೂರ ಅಧ್ಯಕ್ಷತೆವಹಿಸಿದ್ದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಬಸವರಾಜ ಗುತ್ತೆಪ್ಪನವರ, ಸಿ.ಇ.ಸಿ. ರಾಜ್ಯ ಸಂಪನ್ಮೂಲ ವ್ಯಕ್ತಿ ವೀರಣ್ಣ ಒಡ್ಡಿÃನ, ಕರಡಿಗುಡ್ಡ ಸರಕಾರಿ ಪ್ರೌಢಶಾಲೆಯ ಮುಖ್ಯೊÃಪಾಧ್ಯಾಯರಾದ ಎಸ್. ಜಿ. ಭಂಡಾರಿ, ಶಶಿಭೂಷಣ ದೊಡವಾಡ, ಬಸಪ್ಪ ಶೆಲ್ಲಿಕೇರಿ ಉಪಸ್ಥಿತರಿದ್ದರು. ಎನ್. ಟಿ. ಕಾಖಂಡಕಿ ಸ್ವಾಗತಿಸಿದರು.
ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಎಸ್. ಸುಮಾ ನಿರೂಪಿಸಿದರು. ಸಿ. ಬಿ. ಶೀಲವಂತರ ವಂದಿಸಿದರು.

loading...