ಶಾಲೆ, ಬಡಾವಣೆ ಸುತ್ತಲಿನ ಕಸದ ಸಮಸ್ಯೆಗೆ ಮುಕ್ತಿ ಯಾವಾಗ !!

0
77

ರವಿಕುಮಾರ ಕಗ್ಗಣ್ಣವರ
ಧಾರವಾಡ – ದೇಶದಾದ್ಯಂತ ಎಲ್ಲೆಡೆ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಲೇ ಇದ್ದರೂ ಶಿಕ್ಷಣ ನಗರಿ ಎಂದು ಹೆಸರು ಪಡೆದಿರುವ ಧಾರವಾಡವು ಮಾತ್ರ ಕಸದಿಂದ ಮುಕ್ತಿ ಹೊಂದುತ್ತಿಲ್ಲ. ನಗರದ ಬೀದಿಗಳ ಪಕ್ಕದಲ್ಲಿ ಹಾಗೂ ಶಾಲಾ ಕಂಪೌಂಡ ಬಳಿ ಕಸದ ರಾಶಿಗಳು ಕಾಣ ಸಿಗುತ್ತದೆ. ಮಕ್ಕಳು ಸೇರಿದಂತೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವುದಲ್ಲದೇ ವಿವಿಧ ರೋಗಗಳಿಗೂ ತುತ್ತಾಗುವಂತಾಗಿದೆ ಅಂiÉÆ್ಯÃ ಈ ಕಸದ ಸಮಸ್ಯೆಗೆ ಮುಕ್ತಿ ಯಾವಾಗ ಸಿಗುತ್ತದೋ ಎಂದು ಜನರು ಪರಿತಪಿಸುತ್ತಲೇ ಇರುತ್ತಾರೆ. ನಗರದ ಸತ್ತೂರ ಬಳಿಯ ಆಶ್ರಯ ಕಾಲೋನಿಯಲ್ಲಿನ ಶಾಲೆಯ ಸುತ್ತಲೂ ಸ್ವಚ್ಛತೆ ಮರೀಚಿಕೆಯಾಗಿದ್ದು ಕಲುಷಿತ ನೀರು ಹರಿಯದೇ ದುರ್ನಾತ ಬೀರುತ್ತಿದೆ ಜೊತೆಗೆ ಸೊಳ್ಳೆ ಕಾಟ ಹೆಚ್ಚಾಗಿದೆ. ಶಾಲೆ ಬಳಿ ನೀರು ನಿಂತಿದ್ದು ನೀರಿನಿಂದಾಗಿ ಶಾಲೆ ಸುತ್ತಮುತ್ತ ಗಬ್ಬು ವಾಸನೆ ಬೀರುತ್ತಿದೆ. ಶಾಲೆಯ ಸುತ್ತಮುತ್ತಲಿನ ನಿವೇಶನಗಳ ಸಾರ್ವಜನಿಕರಿಗೆ ಕಸ ತಂದು ಹಾಕುವ ಜಾಗವಾಗಿ ಪರಿಣಮಿಸಿದ ಕಾರಣ ಶಾಲೆಯ ಸುತ್ತ ಸ್ವಚ್ಛತೆಯೇ ಮಾಯವಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಸ ಕೊಳೆತು ಗಬ್ಬೆದ್ದು ನಾರುತ್ತಿದೆ. ದುರ್ನಾತ ತಾಳಲಾರದೆ ಜನರು ಮತ್ತು ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಕಸದ ರಾಶಿ ತುಂಬಿ ತುಳುಕುತ್ತಿದ್ದರೂ ಮಹಾನಗರ ಪಾಲಿಕೆ ಕಸವಿಲೇವಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇಲ್ಲಿನ ಜನ ಪಾಲಿಕೆ ಸದಸ್ಯರಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರೂ ಕೂಡ ನಿರ್ಲಕ್ಷಕ್ಕೊಳಗಾಗಿದೆ. ಶಾಲೆಯ ಸುತ್ತಲೂ ಈ ಪರಿಸ್ಥಿತಿ ಇದ್ದು, ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. `ಪ್ರತಿನಿತ್ಯ ಪಾಲಿಕೆಯ ಕಸ ವಿಲೇವಾರಿ ವಾಹನಗಳು ಬರುತ್ತಿವೆ. ಆದರೆ ಜನರು ಮಾತ್ರ ಅದಕ್ಕೆ ಕಸ ಹಾಕದೆ, ಶಾಲೆ ಪಕ್ಕದಲ್ಲಿ ಚೆಲ್ಲುತ್ತಿದ್ದಾರೆ. ಶಾಲೆ ಇದೆ ಎಂಬ ಪರಿಜ್ಞಾನವೂ ಅವರಿಗೆ ಇಲ್ಲವಾಗಿದೆ. ಸ್ವಚ್ಛತೆ ಸಮಸ್ಯೆಯಿಂದಾಗಿ ಬಿಡಾಡಿ ದನಗಳು, ನಾಯಿ ಹಾಗೂ ಹಂದಿಗಳ ಕಾಟವೂ ಹೆಚ್ಚಾಗಿದ್ದು ಶಾಲಾ ಮಕ್ಕಳು ಭಯದ ವಾತಾವರಣದಲ್ಲಿದ್ದಾರೆ.ಈಗಾಗಲೇ ಕಸವಿಲೇವಾರಿ ಸಂಬಂಧಿಸಿದಂತೆ ಪಾಲಿಕೆ ಸಿಬ್ಬಂದಿಯವರಿಗೆ ಸೂಚನೆ ನೀಡಲಾಗಿದ್ದು ಜನರು ಕಸವನ್ನು ರಸ್ತೆ ಬದಿ ಹಾಕದೇ ಹಸಿಕಸ, ಒಣಕಸ ಬರ‍್ಪಡಿಸಿ ಕಸ ಸಂಗ್ರಹಣಾ ವಾಹನದಲ್ಲಿ ಹಾಕುವ ಮೂಲಕ ಸ್ವಚ್ಚತೆಗೆ ಸಹಕರಿಸಬೇಕು. ಶಾಲಾ ಸುತ್ತಲು ಕಸ ಬಿದ್ದಿರುವುದು ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಕ್ರಮ ಜರುಗಿಸಲಾಗುವುದು.

loading...