ನೌಕರರು ವಿಶಾಲ ಮನೋಭಾವನೆ ಬೆಳೆಸಿಕೊಳ್ಳಿ

0
13

ಕನ್ನಡಮ್ಮ ಸುದ್ದಿ-ಧಾರವಾಡ: ವಿಕಲಚೇತನ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ರೀತಿಯಲ್ಲಿ ಪ್ರಯತ್ನ ಮಾಡುವುದಾಗಿ ಸರಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡರ ಹೇಳಿದರು. ನೌಕರರ ಸಂಘದ ಕಚೇರಿಯಲ್ಲಿ ವಿಕಲಚೇತನ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿÃಕರಿಸಿ ಮಾತನಾಡಿದರು.
ವಿಕಲಚೇತನ ನೌಕರರು ಇತರೇ ನೌಕರರಗಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.ವಿಕಲಚೇತನ ನೌಕರರು ಸಂಕುಚಿತ ಮನೋಭಾವನೆಯನ್ನು ಬಿಟ್ಟು ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸರಕಾರಿ ನೌಕರಿಗೆ ಮರಣ ಶಾನಸವಾಗಿರುವ ಎನ್.ಪಿ.ಎಸ್.ಯೋಜನೆಯು ಅಭದ್ರತೆಯಿಂದ ಕೂಡಿದೆ.ಎನ್.ಪಿ.ಎಸ್.ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಈಗಾಗಲೇ ಅನೇಕ ಹೋರಾಟಗಳನ್ನು ಸರಕಾರಿ ನೌಕರರ ಸಂಘ ಮಾಡಿದೆ ಎಂದರು.

ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಷ್ಟಿçÃಯ ಉಪಾಧ್ಯಕ್ಷÀ ಬಸವರಾಜ ಗುರಿಕಾರ ಮಾತನಾಡಿ, ವಿಕಲಚೇತನ ನೌಕರರ ಸಂಘವು ವಿಶಿಷ್ಟವಾದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇತರೇ ಸಂಘಟನೆಗಳಿಗೆ ಮಾದರಿಯಾಗಿದೆ. ವಿಕಲಚೇತನರಲ್ಲಿ ಸಾಧನೆಯನ್ನು ಮಾಡಿದರವರು ಅನೇಕರಿದ್ದಾರೆ ಅಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸರಕಾರ ಮಾಡಿದಾಗ ಅವರು ಇನ್ನೂ ಹೆಚ್ಚಿನ ಮಟ್ಟದ ಸಾಧನೆ ಮಾಡಲು ಸಹಾಯಕವಾಗುತ್ತದೆ ಎಂದರು.
ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಸುಭಾರಪುರಮಠ, ಖಜಾಂಚಿ ಪ್ರತಿಭಾ ರಾಣಿ, ನಿರ್ದೇಶಕರಾದ ರಾಜೇಶ ಕೊನರಡ್ಡಿ, ವಿಕಲಚೇತನ ನೌಕರರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಅಂದಪ್ಪ ಬೋಳರಡ್ಡಿ, ಗೌರಧ್ಯಕ್ಷ ಚನ್ನಬಸಪ್ಪ ಬೆಲ್ಲದ, ತಾಲೂಕ ಅಧ್ಯಕ್ಷ ಅಂದಪ್ಪ ಇದ್ಲಿ ಇದ್ದರು.

loading...