ವಿಶ್ವಕಪ್‌ ಗೆಲುವಿನೊಂದಿಗೆ ದೇಶ ಕ್ರಿಕೆಟ್‌ ಪ್ರೀತಿಗೆ ಒಳಗಾಗಿದೆ: ಥೆರೇಸಾ ಮೇ

0
8

ಲಂಡನ್‌: ಇಂಗ್ಲೆಂಡ್‌ ತಂಡ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಜನರಲ್ಲಿ ಇದೀಗ ಕ್ರಿಕೆಟ್‌ ಮೇಲೆ ಒಲವು ಹುಟ್ಟಿದೆ ಎಂದು ಬ್ರಿಟಿಷ್‌ ಪ್ರಧಾನ ಮಂತ್ರಿ ಥೆರೇಸಾ ಮೇ ತಿಳಿಸಿದ್ದಾರೆ.

ಭಾನುವಾರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ನ್ಯೂಜಿಲೆಂಡ್‌ ವಿರುದ್ಧ ಗೆದ್ದು ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 10 ಡೋವಿಂಗ್‌ ಸ್ಟ್ರೀಟ್‌ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಬಗ್ಗೆ ಹೇಳಿದರು.
“ನಿಮ್ಮೆಲ್ಲರ ಕಠಿಣ ಪರಿಶ್ರಮದಿಂದ ಇದೀಗ ದೇಶದ ಕ್ರೀಡೆಯಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಲು ಸಾಧ್ಯವಾಗಿದೆ. ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ನೀವು ಇತರೆ ದೇಶದ ತಂಡಗಳಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ” ಎಂದು ವಿಶ್ವ ಚಾಂಪಿಯನ್ನರನ್ನು ಪ್ರಧಾನಿ ಕೊಂಡಾಡಿದರು.
” ಮತ್ತೊಮ್ಮೆ ದೇಶದ ಜನತೆ ಕ್ರಿಕೆಟ್‌ನ ಪ್ರೀತಿಗೆ ಪಾತ್ರವಾಗುವಂತೆ ಮಾಡಿರುವ ನಿಮ್ಮೆಲ್ಲರ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಮತ್ತೊಮ್ಮೆ ಹೊಗಳಿದ ಅವರು, ಮುಂದಿನ ತಲೆಮಾರುಗಳವರೆಗೂ ಇದು ಮಾಸುವುದಿಲ್ಲ ಎಂದು ಹೇಳಿದರು.

loading...