ತ್ವರಿತವಾಗಿ ಕಾಲುವೆಗಳ ದುರಸ್ಥಿ ಕಾಮಗಾರಿ ಆರಂಭಿಸುವಂತೆ ಆಗ್ರಹ

0
13

ಆಲಮಟ್ಟಿ: ಕೃಷ್ಣಾಮೇಲ್ದಂಡೆ ಯೋಜನೆಯ ಕಾಲುವೆಗಳಲ್ಲಿನ ಹೂಳು ಹಾಗೂ ಕಂಟಿಗಳನ್ನು ತೆರವುಗೊಳಿಸುವ ಮತ್ತು ಕಾಲುವೆಗಳ ದುರಸ್ಥಿ ಮಾಡುವ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ ಆದ್ದರಿಂದ ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು ಮತ್ತು ಒಣಗುತ್ತಿರುವ ಬೆಳೆಗಳನ್ನು ಕಾಪಾಡಲು ಕಾಲುವೆಗಳಿಗೆ ಶೀಘ್ರವಾಗಿ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದರು.
ಸೋಮವಾರ ಮುಂಜಾನೆ ಆಲಮಟ್ಟಿ ಎಡದಂಡೆ ಕಾಲುವೆ ವ್ಯಾಪ್ತಿಯ ಮುದ್ದೆÃಬಿಹಾಳ ತಾಲೂಕಿನ ಆಲೂರ ಗ್ರಾಮದ ರೈತರು ಕೃಷ್ಣಾಭಾಗ್ಯಜಲನಿಗಮದ ಆಲಮಟ್ಟಿ ವಲಯ ಮುಖ್ಯ ಅಭಿಯಂತರರನ್ನು ಭೇಟಿ ಮನವಿ ಮಾಡಿದ ಅವರು, ಎಎಲ್‌ಬಿಸಿ ವಿತರಣಾ ಕಾಲುವೆ ೧೯,೨೦ ಸೇರಿದಂತೆ ಕೃಷ್ಣಾಮೇಲ್ದಂಡೆ ಯೋಜನೆಯ ಯಾವ ಕಾಲುವೆಗಳಲ್ಲಿಯೂ ಹೂಳು ಹಾಗೂ ಕಂಟಿ ತೆರವುಗೊಳಿಸುವ ಮತ್ತು ಒಡೆದಿರುವ ಕಾಲುವೆಗಳ ದುರಸ್ಥಿಗಳನ್ನು ಕೈಗೊಳ್ಳದಿರುವದರಿಂದ ಕಾಲುವೆಗಳಿಗೆ ನೀರು ಬಿಟ್ಟರೆ ರೈತರ ಜಮೀನಿಗೆ ನೀರು ಹೊಕ್ಕು ಬೆಳೆಹಾನಿಯಾಗುವಂತಾಗುತ್ತದೆ ಎಂದರು.
ಇನ್ನು ಈಗಾಗಲೇ ಮುಂಗಾರು ಮಳೆಯನ್ನು ನಂಬಿ ಕೆಲ ರೈತರು ಸಾಲಸೋಲಮಾಡಿ ಬಿತ್ತನೆ ಮಾಡಿದ್ದರೆ ಇನ್ನು ಬಿತ್ತನೆ ಮಾಡಲು ಭೂಮಿಯನ್ನು ಹದಗೊಳಿಸಿ ಬೀಜಗೊಬ್ಬರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆಧರೆ ವರುಣನ ಅವಕೃಪೆಯಿಂದ ಭೂತಾಯಿಯ ಉಡಿಯನ್ನು ತುಂಬಲಾಗುತ್ತಿಲ್ಲ ಆದರೂ ಕೂಡ ಕೃಷ್ಣಾ ನದಿಯ ಉಗಮಸ್ಥಾನ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವದರಿಂದ ಆಲಮಟ್ಟಿ ಲಾಲಬಹಾದ್ದೂರ ಶಾಸ್ತಿç ಜಲಾಶಯಕ್ಕೆ ನೀರು ಬಂದು ಜಲಾಶಯ ತುಂಬಿದೆ ಆದ್ದರಿಂದ ರೈತರ ಹಿತಕಾಪಾಡಲು ಕೂಡಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕೃಷ್ಣೆಯ ಒಡಲಮಕ್ಕಳ ಹಸಿವು ನೀಗಿಸಲು ತಡಮಾಡದೇ ಕೃಷ್ಣಾಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೂ ನೀರು ಹರಿಸಬೇಕು ಮತ್ತು ವಾರಾಬಂಧಿ ವೇಳೆಯಲ್ಲಿ ಕಾಲುವೆಯಲ್ಲಿನ ಹೂಳು ಹಾಗೂ ಕಂಟಿಗಳ ತೆರವುಗೊಳಿಸುವದು ಸೇರಿದಂತೆ ಒಡೆದಿರುವ ಕಾಳುವೆಗಳ ದುರಸ್ಥಿಗೊಳಿಸಬೇಕು ಇಲ್ಲದಿದ್ದರೆ ಬರಗಾಲದಿಂದ ಬಸವಳಿದಿರುವ ರೈತರು ಸಿಡಿದೇಳುವದಕ್ಕಿಂತ ಮುಂಚೆಯೇ ಕ್ರಮಕೈಗೊಳ್ಳಬೇಕು ಎಂದು ರೈತರು ವಿನಂತಿಸಿದರು.
ನಂತರ ಮಾತನಾಡಿದ ಆಲಮಟ್ಟಿ ವಲಯ ಮುಖ್ಯ ಅಭಿಯಂತರ ಆರ್.ಪಿ.ಕುಲಕರ್ಣಿಯವರು ಈಗಾಗಲೇ ಕ್ಲೊÃಜರ್ ಹಾಗೂ ಸ್ಪೆÃಶಲ್ ರಿಪೇರಿ ಕಾಮಗಾರಿಗಳಿಗೆ ಟೆಂಡರ ಕರೆಯಲಾಗಿದೆ ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಮತ್ತು ಕಾಲುವೆಗಳಿಗೆ ನೀರು ಹರಿಸುವ ಕುರಿತು ಕೃಷ್ಣಾಮೇಲ್ದಂಡೆ ಯೋಜನೆಯ ನೀರಾವರಿ ಸಲಹಾಸಮಿತಿ
ಸಭೆಯಲ್ಲಿ ತೀರ್ಮಾನಿಸಿದಂತೆ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ನಂತರ ಮಾತನಾಡಿದ ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಸಿ.ಛಬ್ಬಿಯವರು ನಮ್ಮ ವಿಭಾಗದ ಕೆಲ ವಿತರಣಾ ಕಾಲುವೆಗಳನ್ನು ನವೀಕರಣಗೊಳಿಸಲು ಟೆಂಡರ್ ಕರೆಯಲಾಗಿದ್ದ ಗುತ್ತಿಗೆದಾರರು ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಿದ್ದಾರೆ ಇನ್ನು ವಿತರಣಾ ಕಾಲುವೆ ೧೯ನ್ನು ಕ್ಲೊÃಜರ್ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು ಅದಕ್ಕೆ ಗುತ್ತಿಗೆದಾರರು ನಿಯಮದಂತೆ ಬಾರದಿರುವದರಿಂದ ಮತ್ತೆ ಟೆಂಡರ ಕರೆಯಲಾಗಿದೆ ಅದು ಜು.೧೫ಕೊನೆಯ ದಿನವಾಗಿದ್ದು ಅದರಲ್ಲಿ ಅರ್ಹಗುತ್ತಿಗೆದಾರರಿಂದ ಕಲೆಸ ಆಋಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ರೈತರಾದ ಯಲ್ಲಪ್ಪ ಕರಡಿ, ಈರಣ್ಣ ಬಿರಾದಾರ, ಲಾಳೇಸಾಬ ವಾಲಿಕಾರ, ಚೇತನ ಕಂದಗಲ್ಲ, ರಾಚಯ್ಯಮುತ್ಯಾ ಹಿರೇಮಠ, ಎಸ್.ಜಿ.ಕಪನೂರ, ಮಲಕಾಜಪ್ಪ ಖಡಿ, ವೈ.ಆರ್.ಬೀಳಗಿ, ಮುದಕಣ್ಣಾ ವಾಲಿಕಾರ, ಅಣ್ಣಪ್ಪ ಹೊಸಮನಿ, ಮಲ್ಲಣ್ಣ ವಾಲಿಕಾರ, ಪಾಂಡು ಜಗ್ಗಲ, ಸಂಗಪ್ಪ ಜಗ್ಗಲ ಮೊದಲಾದರಿದ್ದರು.

loading...