ನೌಕರರ ಸಮಸ್ಯೆ, ದೂರುಗಳಿಗೆ ಸಭೆ

0
17

ಕನ್ನಡಮ್ಮ ಸುದ್ದಿ- ಧಾರವಾಡ: ಕ.ರಾ.ಸ.ನೌ.ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ೨೦೧೯-೨೦೨೪ ನೇ ಸಾಲಿಗೆ ನೂತನವಾಗಿ ಆಯ್ಕೆಯಾದ ಸಂಘದ ನಿರ್ದೇಶಕರ ಅಭಿನಂದನೆ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭ ಜರುಗಿತು.
ಜಿಲ್ಲಾಧಿಕಾರಿ ದೀಪಾ ಚೋಳನ್ ಉದ್ಘಾಟಿಸಿ ಮಾತನಾಡಿದರು. ಆಡಳಿತ ಮತ್ತು ದಿನನಿತ್ಯದ ಕಚೇರಿ ಕೆಲಸಗಳನ್ನು ಪಾರದರ್ಶಕವಾಗಿ ನಿರ್ವಹಿಸುವದರಿಂದ ಯಾವುದೇ ರೀತಿಯ ಹೆದರಿಕೆ,ಒತ್ತಡಗಳಿಂದ ದೂರ ಇರಬಹುದು. ಕಳೆದ ಒಂದು ವರ್ಷದ ನನ್ನ ಆಡಳಿತದಲ್ಲಿ ಜಿಲ್ಲೆಯ ನೌಕರರು ಸಾಕಷ್ಟು ಸಹಕಾರ ನೀಡಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ನೌಕರರ ಸಂಘದ ಬೇಡಿಕೆಗಳಾದ ಸುಸಜ್ಜಿತ ವಸತಿ ಸಮುಚ್ಚಯ, ಅಧಿಕಾರಿಗಳಿಂದ ಸ್ಪಂದನೆ ಮತ್ತು ಮುಖ್ಯವಾಗಿ ಜಿಲ್ಲೆಯ ನೌಕರರ ಸಮಸ್ಯೆ, ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ತಿಂಗಳಲ್ಲಿ ಒಂದು ದಿನ ಸಭೆ ಜರುಗಿಸುವದಾಗಿ ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿದರು. ಎ.ಐ.ಪಿ.ಟಿ.ಎಫ್. ನವದೆಹಲಿ ಉಪಾಧ್ಯಕ್ಷ ಬಸವರಾಜ ಗುರಿಕಾರ, ರಾಜ್ಯ ಪರಿಷತ್ ಸದಸ್ಯ ಎಚ್.ಬಿ.ದಳವಾಯಿ, ಜಿಲ್ಲಾ ಘಟಕದ ಕೋಶಾಧ್ಯಕ್ಷರಾದ ಪ್ರತಿಭಾ ಡಿ.ರಾಣಿ, ಮಾಜಿ ಅಧ್ಯಕ್ಷ ಎಸ್.ಕೆ.ರಾಮದುರ್ಗ ಸೇರಿದಂತೆ ಎಲ್ಲ ತಾಲೂಕಾ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಪ್ರಾಸ್ತಾವಿಕ ಮಾತನಾಡಿದರು. ಎಸ್.ಜಿ.ಸುಬ್ಬಾಪೂರಮಠ ಸ್ವಾಗತಿಸಿದರು. ರಮೇಶ ಲಿಂಗದಾಳ ನಿರೂಪಿಸಿದರು. ಎಫ್.ವಿ.ಮಂಜಣ್ಣವರ ವಂದಿಸಿದರು.

loading...