ಭರತನಾಟ್ಯದಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳೆಯುತ್ತದೆ

0
30

ಕನ್ನಡಮ್ಮ ಸುದ್ದಿ-ಧಾರವಾಡ: ಆಲೂರು ವೆಂಕಟರಾವ ಸಭಾಭವನದಲ್ಲಿ ರತಿಕಾ ನೃತ್ಯ ನಿಕೇತನ ಧಾರವಾಡ ಹಾಗು ಸಾಯಿರಾಮನ್ ನೃತ್ಯ ಕೇಂದ್ರ ತುಮಕೂರು ಸಹಯೋಗದಲ್ಲಿ ನೃತ್ಯಾರ್ಪಣ ಕಾರ್ಯಕ್ರಮ ಹಾಗೂ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದವರು ನಡೆಸುವ ಪರೀಕ್ಷೆಗಳ ಕುರಿತಾಗಿ ನಾಲ್ಕು ಸಂಪುಟದ ಪಠ್ಯಪುಸ್ತಕಗಳನ್ನು ತುಮಕೂರಿನ ಅಂತರಾಷ್ಟಿçÃಯ ಯುವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಸಾಗರ್ ಟಿ.ಎಸ್ ರಚಿಸಿದ ನಾಟ್ಯರಂಗ, ನಾಟ್ಯ ಮಾಧ್ಯಮ, ನಾಟ್ಯ ವಿಶಾರದ, ನಾಟ್ಯಾಲಂಕಾರ ಇವುಗಳ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟಿತವಾದ ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು. ಹಿರಿಯ ನೃತ್ಯಗಾರ್ತಿ ಡಾ. ತುಳಸಿ ರಾಮಚಂದ್ರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಇಂದು ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದದ್ದು ಇಂದಿನ ಪೀಳಿಗೆಗೆ ಇದೆ ಭರತನಾಟ್ಯದಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿ ಬೆಳೆಯುತ್ತದೆ ಅಲ್ಲದೆ ಇದರಲ್ಲಿ ಒಂದು ಆಗಾದ ಶಕ್ತಿ ಇದೆ ಎಂದು ಈ ಪುಸ್ತಕಗಳು ಉತ್ತಮವಾಗಿದ್ದು ಮಕ್ಕಳಿಗೆ ಸರಿಯಾಗಿ ತಿಳಿಯಲು ಉತ್ತಮವಾಗಿ ಲೇಖಕರು ಬರೆದಿದ್ದು ಪಾಲಕರು ತಮ್ಮ ಮಕ್ಕಳಿಗೆ ಈ ಪುಸ್ತಕಗಳ ಬಗ್ಗೆ ಮನನ ಮಾಡಿಕೊಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಲು ಪ್ರೆÃರೆಪಿಸಬೇಕು ಎಂದರು.
ಮುರಘಾಮಠದ ಶ್ರಿÃ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಹಾಗೂ ವಿದ್ವಾನ ಸಾಗರ್ ರವರು ಉತ್ತಮವಾದ ಪುಸ್ತಕಗಳನ್ನು ತಮ್ಮ ಮುಂದೆ ನೀಡಿದ್ದಾರೆ ಅವುಗಳ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮವಾಗಿ ಬಳಸಿಕೊಳ್ಳಬೇಕು ಈ ನಾಟ್ಯಕಲೆಯಲ್ಲಿ ಅಧಮ್ಯ ಅಗೋಚರ, ಅಪ್ರತಿಮ ಅನ್ನುವ ಎಲ್ಲ ವಿಚಾರಗಳನ್ನು ಈ ಪುಸ್ತಕದಲ್ಲಿ ಕ್ರೂಢೀಕರಿಸಿದ್ದು ಅದನ್ನು ವ್ಯಾಪಕತೆಯಿಂದ ಬೆಳೆಸಬೇಕು ಒಂದು ಪುಸ್ತಕ ಒಂದು ಜಗತ್ತನ್ನು ಆಳುತ್ತದೆ ಒಂದು ಪುಸ್ತಕ ಒಂದು ದೇಶವನ್ನು ಆಳುತ್ತದೆ ಎಂದರು.

ಶಿವಾನಂದ ಶೆಟ್ಟರ್ ಅಧ್ಯಕ್ವತೆವಹಿಸಿ ಮಾತನಾಡಿ, ನಾಟ್ಯ ಪರಂಪರೆ ಬೆಳೆಯಬೇಕು ಹಾಗೂ ತಮ್ಮ ಹಾಗೂ ನೃತ್ಯದಲ್ಲಿಯ ಆಸಕ್ತಿ ಬೆಳೆದದ್ದು ಗಾಂಧಿಭವನದಿಂದ ಎಂದು ಈ ಕಲೆಯಲ್ಲಿ ಒಂದು ಅಧ್ಬುತ ಶಕ್ತಿ ಇದೆ ಮಕ್ಕಳು ಬೆಳೆಸಿಕೊಳ್ಳಬೇಕು ಹಾಗೂ ಈ ನಾಲ್ಕು ಪುಸ್ತಕಗಳನ್ನು ಮಕ್ಕಳು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು. ವಿದೂಷಿಯರಾದ ರೋಹಿಣಿ ಇಮಾರತಿ, ಸಹನಾ ಭಟ್, ಹೇಮಾ ವಾಘಮೊಡೆ, ಸೀಮಾ ಕುಲಕರ್ಣಿ, ನಾಗರತ್ನಾ ಹಡಗಲಿ ಹಾಗೂ ಸಾಯಿರಾಮನ್ ನೃತ್ಯ ಕೇಂದ್ರದ ಅಧ್ಯಕ್ಷರಾದ ಸುಮಾ ಪ್ರಸಾದ, ರತಿಕಾ ಸಾಗರ ಉಪಸ್ಥಿತರಿದ್ದರು. ಸಾಗರ ಟಿ.ಎಸ್. ಪ್ರಾಸ್ತಾವಿಕ ಮಾತನಾಡಿದರು ಸುನೀಲ ಕುಲಕರ್ಣಿ ನಿರೂಪಿಸಿದರು.

loading...