ಜಿಲ್ಲೆಯ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ: ಭೀಮಶಿ

0
48

ವಿಜಯಪುರ : ಪ್ರಸ್ತುತ ಜಲಸಂಪನ್ಮೂಲ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆಯ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ ಹೇಳಿದರು.
ವಿಜಯಪುರ ತಾಲೂಕಿನ ಹೊನವಾಡ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ ಹಾಗೂ ರೈತ ಸಮಾವೇಶ ಉದ್ದೆÃಶಿಸಿ ಮಾತನಾಡಿದ ಅವರು, ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರು ಕೆರೆಗೆ ನೀರು ತುಂಬಿಸುವ ಯೋಜನೆ, ತುಬಚಿ-ಬಬಲೇಶ್ವರ ಹೀಗೆ ಅನೇಕ ನೀರಾವರಿ ಯೋಜನೆಗಳನ್ನು ನಿರ್ಣಾಯಕ ಹಂತಕ್ಕೆ ತಲುಪಿಸಿದ್ದರು, ಅದರಂತೆ ಶಿವಾನಂದ ಪಾಟೀಲರು ಸಹ ಮುಳವಾಡ ಏತ ನೀರಾವರಿ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಪ್ರಸ್ತುತ ಜಲಸಂಪನ್ಮೂಲ ಸಚಿವರು ಈ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ನೀರಾವರಿ ಯೋಜನೆಗಳು ಬಾರಾಕಮಾನ್ ಆಗಿ ಬಿಟ್ಟಿವೆ ಎಂದರು. ರೈತರು ಸಂಘಟಿತರಾಗಿ ನೀರಾವರಿ ಯೋಜನೆ ಸಂಪೂರ್ಣಗೊಳಿಸಲು ಹೋರಾಟ ಮಾಡಬೇಕಾಗಿದೆ ಎಂದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ ಕೃಷಿ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ ವರದಿ ಜಾರಿಗೆ ತರುವದಾಗಿ ಅಧಿಕಾರಕ್ಕೆ ಬಂದ ಮೋದಿ ಅವರ ಕೇಂದ್ರ ಸರಕಾರ ರೈತರ ಪ್ರಶ್ನೆಗಳ ಬಗ್ಗೆ ಒಂದು ಮಾತು ಹೇಳುತ್ತಿಲ್ಲ ಎಂದು ಟೀಕಿಸಿದರು. ರೈತರು ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ರಕ್ಷಣೆಗೆ ಮುಂದಾಗುತ್ತಿಲ್ಲ. ಹೀಗಾಗಿ ರೈತರ ಆತ್ಮಹತ್ಯ ಸರಣಿ ಮುಂದುವರಿದಿದೆ. ರೈತರು ಜಾಗೃತರಾಗಿ ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ರೈತರ ಪರ ನೀತಿಗಳು ಬರಬಹುದಾಗಿವೆ. ಇಲ್ಲದೆ ಹೋದರೆ ಕಾರ್ಪೋರೆಟ್ ಕಂಪನಿಗಳ ಕೈಗೆ ದೇಶ ಹೋಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಬಾಬು ಮಹಾರಾಜರು ಮಾತನಾಡಿ, ರೈತರು ಸಂಘಟಿತರಾಗಬೇಕು, ಒಗ್ಗಟ್ಟಿನ ಮಂತ್ರ ಜಪಿಸಬೇಕು, ಒಂದಾಗಿ ಹೋರಾಟ ಮಾಡಿದರೆ ರೈತರ ಸರ್ವೋತೋಮುಖ ಅಭಿವೃದ್ಧಿಯಾಗಲು ಸಾಧ್ಯ ಎಂದರು.

 

ಪ್ರಾಂತ ರೈತ ಸಂಘದ ಹೊನವಾಡ ಗ್ರಾಮ ಘಟಕದ ಅಧ್ಯಕ್ಷರಾಗಿ ಧರೆಪ್ಪ ವಿಠಲ ಗುಗ್ಗರಿ ಉಪಾಧ್ಯಕ್ಷರಾಗಿ ಈರಪ್ಪ ತೇಲಿ, ಕಾರ್ಯದರ್ಶಿಯಾಗಿ ಚೆನ್ನಪ್ಪ ಕೋಟಿ ಸ. ಕಾರ್ಯದರ್ಶಿಯಾಗಿ ನಾಗಪ್ಪ ಕಟೆ ಖಜಾಂಚಿಯಾಗಿ ಶ್ರಿÃಮಂತ ಚೌರಿಯವರನ್ನೊಳಗೊಂಡ ೨೩ ಜನರ ಗ್ರಾಮ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನಾಗರಾಜ ಕಟೆ ಸ್ವಾಗತಿಸಿದರು. ಸಾಬು ಕಾತ್ರಾಳ ವಂದಿಸಿದರು. ಭೀಮು ಚಾವರ ವಂದಿಸಿದರು. ರಘುನಾಥ ಬಾಣಿಕೋಲ ರೈತ ಗೀತೆ ಹಾಡಿದರು.

loading...