ವಿಧಾನ ಸಭೆ ಕಲಾಪಕ್ಕೆ ನಾವು ಹಾಜರಾಗಲ್ಲ : ಅತೃಪ್ತ ಶಾಸಕರು

0
4

ಬೆಂಗಳೂರು:-ಗುರುವಾರದಂದು ನಡೆಯಲಿರುವ ವಿಶ್ವಾಸಮತ ಯಾಚನೆ ಕಲಾಪಕ್ಕೆ ನಾವು ಹಾಜರಾಗುವುದಿಲ್ಲ. ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಅತೃಪ್ತ ಶಾಸಕರು ರಹಸ್ಯ ಸ್ಥಳದಿಂದ ಮೈತ್ರಿ ಸರ್ಕಾರ ಹಾಗೂ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಅಜ್ಞಾತ ಸ್ಥಳದಿಂದ ​12 ಜನ ಶಾಸಕರು ಒಂದೆಡೆ ಸೇರಿ ರೆಕಾರ್ಡ್ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ ಶಾಸಕರು , ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ನಾವೆಲ್ಲ ಒಗಟ್ಟಾಗಿದ್ದು, ನಮ್ಮ ಒಗ್ಗಟ್ಟು ಹೀಗೇ ಮುಂದುವರೆಯಲಿದೆ. ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ನಾವು ನಮ್ಮ ನಿರ್ಣಯದಿಂದ ಹಿಂದೆ ಸರಿಯುವುದಿಲ್ಲ. ಶಾಸಕರು ಕಲಾಪಕ್ಕೆ ಹಾಜರಾಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದ್ದು ಅದರಂತೆ ಮತಯಾಚನೆ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಬಿ.ಸಿ. ಪಾಟೀಲ್ ವಿಡಿಯೋದಲ್ಲಿ ತಿಳಿಸಿದ್ದಾರೆ.
19 ಸೆಕೆಂಡ್​ ವಿಡಿಯೋದಲ್ಲಿ 12 ಜನ ಶಾಸಕರು ಸಾಲಿನಲ್ಲಿ ನಿಂತಿದ್ದು, ಹಿರೇಕೆರೂರು ಶಾಸಕ ಬಿಸಿ ಪಾಟೀಲ್​ ತಮ್ಮ ನಿಲುವನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ
ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್​ಗೆ ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಅತೃಪ್ತ ಶಾಸಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಈಗಾಗಲೇ ಸುಪ್ರೀಂ ತೀರ್ಪಿನಂತೆ ಎರಡನೇ ಬಾರಿ ಸ್ಪೀಕರ್​ ಮುಂದೆ ಖುದ್ದು ಹಾಜರಾಗಿ ರಾಜೀನಾಮೆ ಸಲ್ಲಿಸಿದ್ದು, ತಮ್ಮ ರಾಜೀನಾಮೆ ಸ್ಪೀಕರಿಸುವ ಭರವಸೆಯನ್ನು ಅಸಮಾಧಾನಿತ ಶಾಸಕರು ಹೊಂದಿದ್ದಾರೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಕೈಗೊಳ್ಳಲಿರುವ ನಿರ್ಣಯದ ಮೇಲೆ ತಮ್ಮ ಮಂದಿ ನಡೆ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.

loading...