ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ರಾಜಹಂಸಗಡ

0
125

ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ | ತುಂತುರು ಮಳೆಯಲ್ಲಿ ನೋಡಲು ಸುಂದರ

ಮಾಲತೇಶ ಮಟಿಗೇರ

ಬೆಳಗಾವಿ: ರಾಜಹಂಸಗಡ ಬೆಟ್ಟ ಮಳೆಗಾಲ ಹಿನ್ನಲೆ ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಕೈಬಿಸಿ ಕರೆಯುತ್ತಿದೆ.

ಬೆಳಗಾವಿವೊಂದು ಐತಿಹಾಸ ಜಿಲ್ಲೆಯಾಗಿದ್ದು, ಹೆಚ್ಚು ಐತಿಹಾಸಿಕ ಪ್ರದೇಶಗಳನ್ನು ಕಾಣಬಹುದು. ಆದರೆ ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಮರಿಚಿಕೆಯಾಗುತ್ತಿವೆ. ನಗರದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ರಾಜಹಂಸಗಡ ಕೋಟೆ, ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಆದರೆ ಸರಕಾರ ಗಮನಕ್ಕೆ ಬಾರದೆ ಇರುವುದರಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ.


ಗುಡ್ಡದ ಮೇಲೆ ನಿರ್ಮಾಣವಾಗಿರುವ ಕೋಟೆ ೧೬೭೪ರಲ್ಲಿ ಮರಾಠರಿಂದ ನಿರ್ಮಾಣವಾಗಿದೆ. ಛತ್ರಪತಿ ಶಿವಾಜಿ ಮಹಾರಾಜ ಜಿಲ್ಲೆಯ ಕೋಟೆಗಳ ರಕ್ಷಣೆಗಾಗಿ ಶತ್ರುಗಳ ಚಲನ–ವಲನದ ಮೇಲೆ ನಿಗಾ ಇಡುವ ಉದ್ದೇಶದಿಂದ ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗ ಅದೊಂದು ಐತಿಹಾಸಿಕ ಪ್ರವಾಸಿಗರ ತಾಣವಾಗಿ ಮಾರ್ಪಟ್ಟಿದ್ದು, ಯುವ ಜನಾಂಗವನ್ನು ಗಮನ ಸೆಳೆಯುತ್ತಿದೆ.

*ಯುವ ಜನರು ಹೆಚ್ಚು:* ರಾಜಹಂಸಗಡ ಕೋಟೆಗೆ ಮಳೆಗಾಲ, ಚಳಿಗಾಲದಲ್ಲಿ ವೀಕ್ಷಣೆ ತೆರಳಿದರೆ ಉತ್ತಮವಾಗಿರುತ್ತದೆ. ತುಂತುರು ಮಳೆಯಲ್ಲಿ ಬೆಟ್ಟದ ಮೇಲೆ ನಿಂತರೇ ಸಾಕು ಸ್ವರ್ಗಕ್ಕೂ ಮೀಗಿಲು ಎಂದು ಹೇಳಿದರೆ ತಪ್ಪಾಗಲಾರದು. ವಿಶೇಷವಾಗಿ ಕಾಲೇಜು ಯುವಕ, ಯುವತಿಯರ, ಪ್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಯುವ ಜನರಷ್ಟೇ ಅಲ್ಲ, ಕುಟುಂಬ ಸಮೇತ ಬರುವವರೂ ಉಂಟು. ಬುತ್ತಿ ತಂದು ಅಲ್ಲಿಯೇ ಉಂಡು ಹೋಗುತ್ತಾರೆ. ಇದರೊಂದಿಗೆ ಬೆಳಗಾವಿ ಚಿತ್ರಣವನ್ನು ಪೋನ್ ನಲ್ಲಿ ಸೆರೆ ಹಿಡಿಯುವುದು, ಸೆಲ್ಪಿ ತೆಗೆದಕೊಳ್ಳುವ ಮೂಲಕ ತಮ್ಮ ಸಮಯ ಕಳೆಯುತ್ತಾರೆ. ದಿನಕ್ಕೆ ೫೦೦ ರಿಂದ ೬೦೦ ಪ್ರವಾಸಿಗರು ಭೇಟಿ ನೀಡುತ್ತಾರೆ.

*ಪ್ರವಾಸೋಧ್ಯಮ ಇಲಾಖೆಯ ನಿರ್ಲಕ್ಷ್ಯ*: ಐತಿಹಾಸಿಕ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ಸರಕಾರದಿಂದ ಕೋಟಿ ಕೋಟಿ ಹಣವನ್ನು ಮೀಸಲಿಡಲಾಗುತ್ತದೆ. ಆದರೆ ರಾಜಹಂಸಗಡ ಕೋಟೆ ಅಭಿವೃದ್ಧಿ ಪಡಿಸಲು ಪ್ರವಾಸೋಧ್ಯಮ ಇಲಾಖೆಯ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ನಿರ್ಲಕ್ಷ್ಯ ಕ್ಕೆ ಒಳಗಾಗಿದ್ದ ಈ ಪಾರಂಪರಿಕ ತಾಣವನ್ನು ಇತ್ತೀಚೆಗೆ ಕೊಂಚ ಅಭಿವೃದ್ಧಿ ಪಡಿಸಲಾಗಿದೆ. ಮತ್ತಷ್ಟು ಆಕರ್ಷಕಗೊಳಿಸುವುದಕ್ಕೂ ಅವಕಾಶವಿದೆ. ಪ್ರವಾಸೋದ್ಯಮ ಅಥವಾ ಪಾರಂಪರಿಕ ಇಲಾಖೆಯವರು ಇತ್ತ ಗಮನಹರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಬಹಳಷ್ಟು ಅವಕಾಶವಿದೆ.

ಒಟ್ಟಿನಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದ್ದರು ಸಹ ಜಿಲ್ಲೆ ಜನತೆಯ ಗಮನ ಸೆಳೆಯುತ್ತಿದೆ. ಪ್ರವಾಸೋಧ್ಯಮ ಇಲಾಖೆ ಇತ್ತ ಗಮನ ಹರಿಸಿ ಅಳಿವಿನ ಅಂಚಿನಲ್ಲಿರುವ ರಾಜಹಂಸಗಡವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರೆ, ಜಿಲ್ಲೆಗೆ ಇದೊಂದು ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಡಲಿದೆ.

==========ಬಾಕ್ಸ್======

ರಾಜಹಂಸಗಡ ಬೆಟ್ಟ ನೋಡಲು ಸುಂದರವಾಗಿದೆ. ಮಳೆಗಾಲ ಇರುವುದರಿಂದ ಹಚ್ಚು ಹಸಿರಿನಿಂದ ಕಾಣುತ್ತಿದೆ. ನೋಡಲು ಆನಂದವೆನಿಸುತ್ತದೆ. ಆದರೆ ಇಲ್ಲಿ ಕೋಟೆಯ ಸಮೀಪದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಹೆಚ್ಚು ಅಭಿವೃದ್ಧಿ ಪಡೆಸಿದರೆ. ಇನ್ನೂ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತದೆ.
ವಿರೂಪಾಕ್ಷಿ, ಪ್ರವಾಸಿಗ

=======ಬಾಕ್ಸ್=========

*ನಿರ್ವಹಣೆಯ ಕೊರತೆ; ಹಾಳಾದ ವಿಶ್ರಾಂತಿ ಕೊಠಡಿ*

ರಾಜಹಂಸಗಡ ಕೋಟೆ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದೆ. ಈ ಹಿಂದೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ೨೦೧೭ರಲ್ಲಿ ಶಾಸಕರ ಅನುದಾನದಲ್ಲಿ ಕೋಟೆಯ ಆವರಣದಲ್ಲಿ ಸಿದ್ಧೇಶ್ವರ ದೇವಸ್ಥಾನ, ಪ್ರವಾಸಿಗರಿಗೆ ಶೌಚಾಲಯ, ವಿಶ್ರಾಂತಿ ತಾಣವನ್ನು ನಿರ್ಮಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದರು. ಆದರೆ ದೇವಸ್ಥಾನ ಮಾತ್ರ ನಿರ್ವಹಣೆ ಕಾಣುತ್ತಿದ್ದು, ಅಲ್ಲಿನ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಸಂಪೂರ್ಣ ನಿರ್ವಹಣೆ ಇಲ್ಲದೆ ಹಾಳಾಗಿದೆ. ಈಗಿನ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಐತಿಹಾಸಿಕ ತಾಣವಾಗಿ ಮಾರ್ಪಡುತ್ತಿರುವ ರಾಜಹಂಸಗಡವನ್ನು ಸರಕಾರ ಗಮನ ಸೆಳೆದು ಅಭಿವೃದ್ಧಿ ಪಡಿಸಿದರೆ ಹೆಚ್ಚು ಪ್ರವಾಸಿಗರನ್ನು ಗಮನ ಸೆಳೆಯಲಿದೆ.

loading...