ಉದಯೋನ್ಮುಖ ಕ್ರಿÃಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ

0
27

ಕನ್ನಡಮ್ಮ ಸುದ್ದಿ-ಧಾರವಾಡ: ಜಿಲ್ಲಾ ಓಲಂಪಿಕ್ ಅಸೋಶಿಯೇಶನ್ ಆಶ್ರಯದಲ್ಲಿ ರಾಜ್ಯಮಟ್ಟದ ಹಾಕಿ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಧಾರವಾಡ ಜಿಲ್ಲಾ ಓಲಂಪಿಕ್ ಅಸೋಶಿಯೇಶನ್ ಅಧ್ಯಕ್ಷ ಪಿ.ಎಚ್.ನೀರಲಕೇರಿ ಹೇಳಿದರು. ನಗರದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಜರುಗಿದ ಧಾರವಾಡ ಜಿಲ್ಲಾ ಓಲಂಪಿಕ್ ಅಸೋಶಿಯೇಶನ್‌ನ ೧೨ ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾಕಿ ಮತ್ತು ಕಬಡ್ಡಿ ಆಟಗಳಿಗೆ ಪ್ರೊÃತ್ಸಾಹ ನೀಡುವ ಅಗತ್ಯವಿದೆ. ಅಲ್ಲದೇ ಉದಯೋನ್ಮುಖ ಕ್ರಿÃಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಕೂಡ ಸಿಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗುವುದು. ಪಂದ್ಯಾವಳಿ ಯಶಸ್ವಿಗೆ ಇತರ ಸಂಘ-ಸಂಸ್ಥೆಗಳ ಸಹಕಾರ ಕೂಡ ಅಗತ್ಯ ಎಂದರು. ಅಲ್ಲದೇ ಜಿಲ್ಲಾ ಕ್ರಿÃಡಾಂಗಣದಲ್ಲಿನ ಸಿಂಥೆಟಿಕ್ ಟ್ರಾö್ಯಕ್ ಸಂರಕ್ಷಣೆಗೆ ಹೋರಾಟ, ನವ್ಹಂಬರ ತಿಂಗಳಲ್ಲಿ ಮಿನಿ ಓಲಂಪಿಕ್ ಮತ್ತು ದಿ.ಕಲ್ಲವ್ವ ಸಿಂದೋಗಿ ಸ್ಮರಣಾರ್ಥ ರಾಜ್ಯ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಸೋಶಿಯೇಶನ್‌ದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳು: ಶಿವು ಹಿರೇಮಠ (ಅಧ್ಯಕ್ಷ), ಡಾ.ಆನಂದ ನಾಡಗೀರ ಮತ್ತು ಪಿ.ಎಚ್.ನೀರಲಕೇರಿ (ಗೌರವ ಅಧ್ಯಕ್ಷರು), ಮೋಹನ ಮೋರೆ, ಜಿ.ಎಸ್.ಜಾಧವ (ಉಪಾಧ್ಯಕ್ಷರು), ಬಿ.ಎಸ್.ತಾಳಿಕೋಟಿ (ಕಾರ್ಯದರ್ಶಿ), ಪ್ರಮೋದ ಗಂಗಾಧರ (ಸಹ ಕಾರ್ಯದರ್ಶಿ), ಎಸ್.ಎಸ್.ಅಗಡಿ (ಕೋಶಾಧ್ಯಕ್ಷ), ಕೆ.ಎಸ್.ಭೀಮಣ್ಣವರ, ಈಶ್ವರ ಅಂಗಡಿ, ವಿನಯ ನಾಡಗೀರ, ಶ್ರಿÃಕಾಂತ ಕಂಚಿಬೇಲಿ, ಡಾ.ಶಕುಂತಲಾ ಹಿರೇಮಠ, ಡಿ.ಬಿ.ಗೋವಿಂದಪ್ಪ, ಪಿ.ಜೆ.ಹಾಸಲಕರ, ವಿ.ಪಿ.ಕುರ್ತಕೋಟಿ (ಕಾ.ಕಾ.ಸದಸ್ಯರು).

loading...