ಮಹದಾಯಿ ವಿಚಾರ ; ರಾಜ್ಯದ 28 ಎಂಪಿಗಳಿಗೆ ಗಡುವು

0
21

ಬೆಳಗಾವಿ : ಮಹದಾಯಿ ವಿಚಾರದಲ್ಲಿ ರಾಜಕೀಯ ನಾಯಕರ ಆಸಕ್ತಿ ಕೊರತೆ ಇದೆ. ನಾವು ಹಮ್ಮಿಕೊಳ್ಳುತ್ತಿರುವ ಸಮಾವೇಶದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯದ 28 ಎಂಪಿಗಳಿಗೆ ಗಡವು ನೀಡುತ್ತೇವೆ. ಆದರೂ ಆಗಲಿಲ್ಲವೆಂದರೆ ಎಂಪಿಗಳ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದ್ದಾರೆ.

ರಾಜ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಮೂರು ಪಕ್ಷಗಳು ಮೂರು ಬಿಟ್ಟಿವೆ. ಶಾಸಕರು ಮಾರಾಟವಾಗುತ್ತಿದ್ದಾರೆ. ಎಲ್ಲರೂ ವಿಧಾನಸಭೆ ಖಾಲಿ ಮಾಡಬೇಕು. ಈಗ ಸರಕಾರ ಅಸ್ಥಿರಗೊಳಿಸಿದಂತೆ ಮುಂದೆನೂ ಇದೇ ರೀತಿ ಸರಕಾರವನ್ನು ಶಾಸಕರು ಅಸ್ಥಿರಗೊಳಿಸುತ್ತಾರೆ. ಹೀಗೆ ಅರಾಜಕತೆ ಉಂಟಾಗುತ್ತದೆ. ಶಾಸಕರ ವ್ಯಾಪಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬರಗಾಲ ಆವರಿಸಿದೆ.‌ ರೈತರು ಸಂಕಷ್ಟದಲ್ಲಿದ್ದಾರೆ. ಮೂರು ಪಕ್ಷದ ನಾಯಕರು ರೆಸಾರ್ಟ್ ರಾಜಕಾರಣದ ಮೂಲಕ‌ 3ನೇ ದರ್ಜೆ ರಾಜಕೀಯಕ್ಕೆ ನಿರಂತರಾಗಿದ್ದಾರೆ. ಮುಂದಿನ‌ ದಿನಗಳಲ್ಲಿ ಮೂರು‌ ಪಕ್ಷಗಳಿಗೆ ಚುನಾವಣೆಯಲ್ಲಿ ಜನರು ಬುದ್ದಿಕಲಿಸಬೇಕು ಎಂದರು.

loading...