ಜೀವ ಕಳೆದುಕೊಂಡ ಕೋಟೆ ಕೆರೆ ಸಂಗೀತ ಕಾರಂಜಿ

0
40

ನಗರ‌ ನಿವಾಸಿಗಳಿಗೆ ನಿರಾಸೆ |ಪುನರಾರಂಭಿಸಲು ಒತ್ತಾಯ

ಮಾಲತೇಶ ಮಟಿಗೇರ

ಬೆಳಗಾವಿ: ನಗರದ ಕೋಟೆ ಕೆರೆಗೆ ವಾರಾಂತ್ಯದಲ್ಲಿ ಸಂಜೆಯ ಹೊತ್ತು ಹೋದರೆ ಸಂಗೀತ ಕಾರಂಜಿಯ ಮನಮೋಹಕ ದೃಷ್ಯಗಳನ್ನು ನೋಡಿಕೊಳ್ಳಬಹುದು ಎಂದುಕೊಂಡಿದ್ದ ಜನತೆಗೆ ನಿರಾಸೆ ಮೂಡುತ್ತಿದೆ.

ನಗರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಟೆ ಕೆರೆಯಲ್ಲಿ ನಿರ್ಮಿಸಿರುವ ಮ್ಯೂಸಿಕ್ ಕಾರಂಜಿ ತನ್ನ ಕಾರ್ಯವನ್ನು ನಿಲ್ಲಿಸಿ ವರ್ಷಗಳೇ ಕಳೆದಿದ್ದು, ಪ್ರವೇಶ ಶುಲ್ಕ ನೀಡಿ ಒಳ ಬರುವ ನಗರ ನಿವಾಸಿಗಳಿಗೆ ನಿರಾಸೆ ಮೂಡಿಸುತ್ತಿದೆ. ದೃಷ್ಟಿ ಬೊಟ್ಟಿನಂತಿರುವ ಕೋಟೆ ಕೆರೆ ನಗರ ವಾಸಿಗಳನ್ನು ಆಕರ್ಷಣೀಯ ಗೊಳಿಸುವ ಉದ್ದೇಶದಿಂದ ಉತ್ತರ ಕ್ಷೇತ್ರದ ಮಾಜಿ ಶಾಸಕ ಪಿರೋಜ್ ಸೇಠ್ ೧ ಕೋಟಿ ೮ ಲಕ್ಷ ಅನುದಾನದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸಿದ್ದರು. ಆದರೆ ಅದು ಈಗ ತನ್ನ ಕಾರ್ಯವನ್ನು ಸಂಪೂರ್ಣ ನಿಲ್ಲಿಸಿದ್ದು, ಕೋಟೆ ಕೆರೆಗೆ ಪ್ರವೇಶ ಶುಲ್ಕ ನೀಡಿ ಆಗಮಿಸುವ ಜನರಿಗೆ ನಿರಾಸೆ ಮೂಡುತ್ತಿದೆ.

ಆಕರ್ಷಣೀಯ ಸ್ಥಳ: ಬೆಳಗಾವಿಯ ಜನರಿಗೆ ವಿನೂತನ ಕೊಡುಗೆ ನೀಡಬೇಕು ಹಾಗೂ ಕುಟುಂಬದವರೆಲ್ಲ ಒಟ್ಟಿಗೆ ಬಂದು ಸಂತೋಷದಿಂದ ಕಾಲ ಕಳೆಯಬಹುದು ಎಂಬ ಉದ್ದೇಶದಿಂದ ಅಂದು ಶಾಸಕರಾಗಿದ್ದ ಪಿರೋಜ್ ಸೇಠ್ ಹಾಗೂ ಜಿಲ್ಲಾಧಿಕಾರಿ ಎಸ್ ಜಯರಾಂ ಕೆರೆಯಲ್ಲಿ ಸಂಗೀತ ಕಾರಂಜಿ ನಿರ್ಮಿಸುವ ಯೋಜನೆಗಳನ್ನು ರೂಪಿಸಿದ್ದರು. ವಾರಾಂತ್ಯದಲ್ಲಿ ಉಚಿತವಾಗಿ ಪ್ರದರ್ಶನ ಏರ್ಪಡಿಸುವ ಮೂಲಕ ಬೆಳಗಾವಿಯನ್ನು ಆಕರ್ಷಣೀಯ ಸ್ಥಳವಾಗಿ ಮಾರ್ಪಡಿಸುವ ಮಹದಾಸೆಯಿಂದ ನಿರ್ಮಿಸಲಾಗಿತ್ತು. ಆದರೆ ಅದು ಈಗ ಸಂಗೀತ ಕಾರಂಜಿ ತನ್ನ ಕಾರ್ಯವನ್ನು ನಿಲ್ಲಿಸಿದೆ.

ಸಂಗೀತ ಕಾರಂಜಿ ಉದ್ಘಾಟನೆಯ ಮೊದಲು ಬೆಳಗಾವಿಯ ಇತಿಹಾಸ ಕುರಿತ ಮಾಹಿತಿ ಪ್ರದರ್ಶಿಸಲಾಗುತ್ತದೆ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಹಲವು ದೃಶ್ಯಗಳನ್ನು ತೋರಿಸಲಾಗುತ್ತದೆ. ಜೊತೆಗೆ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ದೃಶ್ಯಾವಳಿಯನ್ನು ಪ್ರದರ್ಶಿಸಲಾಗುತ್ತದೆ. ಹಲವು ದೇಶಭಕ್ತಿ ಗೀತೆಗಳ ಹಿನ್ನೆಲೆ ಸಂಗೀತದೊಂದಿಗೆ ಕಾರಂಜಿಯು ನರ್ತನ ಮಾಡಲಿದೆ. ಸುಮಾರು ೨೦ ಬಗೆಯ ಸಂಗೀತ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಪ್ರಾರಂಭದಲ್ಲಿ ಮಾತ್ರ ಸಂಗೀತ ಕಾರಂಜಿ ಆಕರ್ಷಣೀಯವಾಗಿತ್ತು. ಬಳಿಕ ನೀರಿನ ಕೊರತೆ ತಂತ್ರಜ್ಞಾನ, ವಿವಿಧ ಸಮಸ್ಯೆಗಳಿಂದಾಗಿ ತನ್ನ ಕಾರ್ಯವನ್ನು ನಿಲ್ಲಿಸಿದೆ.

ಪುನ: ಆರಂಭಿಸುವಂತೆ ಜನರ ಒತ್ತಾಯ: ಕೋಟೆ ಕೆರೆಯಲ್ಲಿ ಸುಮಾರ ನಾಲ್ಕು ವರ್ಷಗಳ ಹಿಂದೆ ಸಂಗೀತ ಕಾರಂಜಿ , ಪುಟ್ ಪಾತ್, ಬೋಟಿಂಗ್ ಸೇರಿದಂತೆ ಕುಟುಂಬ ಸಮೇತ ತೆರಳಲು ಒಳ್ಳೆಯ ವಾತಾವರಣ ನಿರ್ಮಾಣವಾಗಿತ್ತು. ಇತ್ತಿಚಿಗೆ ರಾಷ್ಟ್ರ ಧ್ವಜವನ್ನು ನಿರ್ಮಿಸುವ ಮೂಲಕ ದೇಶವೇ ಬೆಳಗಾವಿಯತ್ತ ನೋಡುವಂತೆ ಮಾಡಿತ್ತು. ಆದರೆ ಈಗ ಅಭಿವೃದ್ಧಿಯಿಂದ ವಂಚಿತವಾಗಿದೆ. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಪುನಃ ಸಂಗೀತ ಕಾರಂಜಿಯನ್ನು ಆರಂಭಿಸಿ, ಇತಿಹಾಸ ಪ್ರದರ್ಶಿಸುವ ದೃಷ್ಯಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಒಟ್ಟಿನಲ್ಲಿ ಕೋಟೆ ಕೆರೆಯ ಉದ್ಯಾನವನದಲ್ಲಿ ಕೆಟ್ಟು ನಿಂತಿರುವ ಸಂಗೀತ ಕಾರಂಜಿಯನ್ನು ಪ್ರಾರಂಭಿಸುವ ಮೂಲಕ ಕೋಟೆ ಕೆರೆಯ ಅಂಧವನ್ನು ಹೆಚ್ಚಿಸಬೇಕಾಗಿದೆ.

=========ಬಾಕ್ಸ್======

ಕೋಟೆ ಕೆರೆಯ ಸಂಪೂರ್ಣ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಅಲ್ಲಿಯ ಅಭಿವೃದ್ಧಿ ಬಗ್ಗೆ ಪ್ಲ್ಯಾನ್ ಹಾಕಲಾಗಿದೆ. ೬೦ ಲಕ್ಷದಲ್ಲಿ ಕೋಟೆ ಕೆರೆ ತಡೆಗೊಡೆ ಹಾಗೂ ಈಗ ಇರುವ ಸಂಗೀತ ಕಾರಂಜಿಯನ್ನು ಸ್ಥಳಾಂತರ ಮಾಡಲಾಗುತ್ತದೆ. ಜನರು ಆಕರ್ಷೀಸುವ ರೀತಿಯಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

ಅನಿಲ ಬೆನಕೆ
ಶಾಸಕ ಉತ್ತರ ಕ್ಷೇತ್ರ

loading...