ಪುರಸಭೆಯ ನಿರ್ಲಕ್ಷಕ್ಕೆÃ ಒಳಗಾದ ನೀಲಮ್ಮನ ಕೆರೆ..

0
46

ಮಾಬುಸಾಬ ಯರಗುಪ್ಪಿ
ನವಲಗುಂದ: ಮಹಾತ್ಮರ ಮನೆತನವೆಂದೇ ಪ್ರಸಿದ್ದಿಯಾಗಿರುವಂತಹ ಶಿರಸಂಗಿ ವಂಶಸ್ಥರಾದ ನೀಲಮ್ಮ ತಾಯಿ ನಗರದ ಜನರಿಗೆ ಕುಡಿಯುವ ನೀರಿಗಾಗಿ ಭೂಮಿಯನ್ನು ಕೊಟ್ಟು ಕೆರೆಯನ್ನು ತೆಗೆಸಿ ಊರ ಜನರಿಗೆ ಉಪಕಾರವನ್ನು ಮಾಡಿ ಹೋಗಿದ್ದಾರೆ. ಅಂತಹ ಕೆರೆಯ ನೀರನ್ನು ನಗರದ ಜನರು ಸುಮಾರು ವರ್ಷಗಳ ಕಾಲ ಕುಡಿಯಲು ಉಪಯೋಗಿಸುತ್ತಿದ್ದರು ಮತ್ತು ಈಗಲೂ ಉಪಯೋಗಿಸುತ್ತಿದ್ದಾರೆ. ಪುರಾತನ ಇತಿಹಾಸವನ್ನು ಹೊಂದಿರುವಂತಹ ಕೆರೆಯು ಇಂದು ಪುರಸಭೆಯ ನಿರ್ಲಕ್ಷಕ್ಕೆÃ ಒಳಗಾಗಿ ಕುಡಕರ, ಪುಂಡ-ಪುಡಾರಿಗಳ ತಾಣವಾಗಿ ಪರಿಣಮಿಸಿದೆ.

ನಿರ್ಲಕ್ಷಕ್ಕೆÃ ಕೆರೆಯಲ್ಲಿ ತುಂಬಿದೆ ಕಸ: ಈ ಊರಿನ ಜನರಿಗೆ ಈ ಮೂದಲು ಕುಡಿಯಲು ನೀರು ಕೂಡುತ್ತಿದ್ದಂತಹ ನೀಲಮ್ಮ ತಾಯಿಯ ಕೆರೆಯು ನೆನಪಾಗುವುದು ಚನ್ನಮ್ಮನ ಜಲಾಶಯದಲ್ಲಿ ನೀರು ಖಾಲಿಯಾದ ನಂತರ ಅಥವಾ ಆ ಕೆರೆಯಲ್ಲಿರುವಂತಹ ಯಂತ್ರಗಳು ಕೆಟ್ಟು ಹೋದಾಗ. ಮೂದಲು ನೀಲಮ್ಮನ ಕೆರೆಯಿಂದ ಒತ್ತುವ ಗಾಡಿಯಲ್ಲಿ ಕೊಡಗಳನ್ನು ಇಟ್ಟುಕೊಂಡು ಮನೆಗೆ ನೀರು ತರುತ್ತಿದ್ದರು. ಬೆಳಗಾಯಾಯಿತೆಂದರೆ ಸಾಕು ಪ್ರತಿಯೂಬ್ಬರ ಕಾಯಕ ನೀರು ತರುವುದೇ ಆಗಿತ್ತು. ಇವತ್ತು ಕಾಲ ಬದಲಾಗಿದೆ ಕುಡಿಯುವ ನೀರಿನ ಸವಲತ್ತು ಹೆಚ್ಚಾಗಿದೆ ಯಾರು ಕೂಡಾ ನೀರಿಗಾಗಿ ಮೂದಲಿನ ಹಾಗೆ ಹರಸಾಹಸವನ್ನು ಪಡಬೇಕಾಗಿಲ್ಲಾ. ಚನ್ನಮ್ಮನ ಕೆರೆಯಿಂದ ಶುದ್ದಿಕರಿಸಿರುವಂತಹ ನೀರು ಮನೆಯ ಬಾಗಿಲಿಗೆ ಬಂದು ಬಿಡುತ್ತದೆ. ಈ ಮೂದಲು ನೀಲಮ್ಮನ ಕೆರೆಗೆ ಹೋಗಿ ನೀರು ತುಂಬಿಕೂಂಡು ಬರುತ್ತಿದ್ದವರು ಇಂದು ಕಾಲ ಬದಲಾಗಿದೆ, ನೀರು ಮನೆಯ ಬಾಗಿಲಿಗೆ ಬಂದಿದೆ. ಚನ್ನಮ್ಮನ ತಾಯಿಯ ಕೃಪೆಯಿಂದ ನಗರದ ಜನರು ನೀರಿನ ತೊಂದರೆಯಿಂದ ವಿಮುಕ್ತರಾಗಿದ್ದಾರೆ.
ಈ ನೀಲಮ್ಮನ ಕೆರೆಯು ಕೂಡಾ ನಮಗೆ ಮೊದಲಿನಷ್ಟೆÃ ಮಹತ್ವವನ್ನು ಪಡೆದಿದೆ. ಯಾಕೆಂದರೆ ಈ ಕೆರೆಯ ನೀರನ್ನು ಮದುವೆ ಮುಂಜಿಗಾಗಿ ಟ್ಯಾಂಕರಗಳ ಮೂಲಕ ಬಳಕೆಯಾಗುತ್ತಿದೆ. ಆದರೆ ಈ ಕೆರೆಯಲ್ಲಿ ಸ್ವಚ್ಛತೆ ಎನ್ನುವುದು ಮರಿಚಿಕೆಯಾಗಿ ಹೋಗಿದೆ. ಈ ಕೆರೆಯು ಇಂದು ಕಸದ ಅಡ್ಡೆಯಾಗಿ ಪರಿಣಮಿಸಿದೆ. ಕುಡುಕರು ತಾವು ಕುಡಿದಂತಹ ಸರಾಯಿಯ ಬಾಟಲಿಯನ್ನು ಕೆರೆಯಲ್ಲಿ ಚಲ್ಲಿ ಹೋಗುತ್ತಿದ್ದಾರೆ. ಅನೈತಿಕ ಚಟುವಟಿಕೆಗಳ ಜೋತೆಗೆ ಇಸ್ಪೆÃಟ್ ಆಟವು ಜೋರಾಗಿ ನಡೆದಿದೆ ಎಂಬುದು ಸ್ಥಳಿಯರ ಆರೋಪವಾಗಿದೆ.

ಕೆರೆಯ ನೀರು ಸದ್ಯ ಹಚ್ಚ ಹಸರಾಗಿದೆ. ಎಲ್ಲಿ ನೋಡಿದರಲ್ಲಿ ಪಾಚಿ ಬೆಳೆದು ನಿಂತಿದೆ. ಕೆರೆಯ ಸುತ್ತಲು ಜಾಡು ಕಟ್ಟಿದ್ದು ಈ ಕೆರೆಯನ್ನು ಪುರಸಭೆಯವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಿಂದಿನ ಕಾಲದಲ್ಲಿ ಆ ಮಹಾತಾಯಿ ಈ ಊರಿನ ಜನರಿಗಾಗಿ ಹೊಲವನ್ನು ಕೊಟ್ಟು ಕೆರೆಯನ್ನು ತೆಗೆಸಿ ಅನುಕೂಲವನ್ನು ಮಾಡಿ ಹೋಗಿದ್ದರೆ ಅದನ್ನು ಸ್ವಚ್ಛತೆಯಿಂದ ಇಡಬೇಕೆಂಬ ವಿಚಾರ ಪುರಸಭೆಯವರಿಗೆ ಇಲ್ಲದಿರುವುದು ದುರಂತವೇ ಸರಿ. ಈ ಮೂದಲು ಬರಗಾಲ ಬಿದ್ದು ಸರಿಯಾಗಿ ಮಳೆಯಾಗದೆ ಈ ನೀಲಮ್ಮನ ಕೆರೆಯಲ್ಲಿ ನೀರು ಖಾಲಿಯಾದ ನಂತರ ಅಗಸರಬಾವಿ, ಗುರವಂಜಿ ಬಾವಿ, ಯಮನೂರು ಕೆರೆಯಲ್ಲಿ ಪಾಳೆಹಚ್ಚಿ ಕುಡಿಯಲು ನೀರನ್ನು ತರುತ್ತಿದ್ದರು. ಅಗಸರ ಬಾವಿಯಲ್ಲಂತೂ ಚಿಪ್ಪಿನಿಂದ ನೀರನ್ನು ತುಂಬಿಕೂಳ್ಳುವಂತಹ ಪರಿಸ್ಥಿತಿ ಇತ್ತು. ಬೆಣ್ಣೆ ಹಳ್ಳ ಮತ್ತು ಗುಡ್ಡದಲ್ಲಿರುವಂತಹ ಕ್ವಾರಿಯಲ್ಲಿ ಬಟ್ಟೆಗಳನ್ನು ಒಗೆಯಲು ಹೋಗುತ್ತಿದರು. ಇಷ್ಟೂಂದು ನೀರಿನ ಸಮಸ್ಯೆ ಇದ್ದ ನಗರದಲ್ಲಿ ಶಾಶ್ವತವಾಗಿ ಕುಡಿಯಲು ನೀರು ಸಿಗುತ್ತಿದೆ.
ನೀಲಮ್ಮ ಕೆರೆ ಹಿಂದಿನಷ್ಟೆÃ ಅವಶ್ಯ. ಇವತ್ತು ಪ್ರತಿಯೂಬ್ಬರಿಗೂ ಅವಶ್ಯವಾಗಿರುವಂತಹದು ಕುಡಿಯುವ ನೀರು. ಅಂತಹ ಜಲವನ್ನು ಶೇಖರಿಸಲು ಹಿಂದಿನವರು ಬಿಟ್ಟುಹೋಗಿರುವಂತಹ ನೀಲಮ್ಮನ ಕೆರೆಯನ್ನು ಕಾಪಾಡುವುದು ನಗರದ ಪ್ರತಿಯೂಬ್ಬರ ಆದ್ಯ ಕರ್ತವ್ಯವಾಗಿದೆ. ಇವತ್ತು ಸಮಯಕ್ಕೆÃ ಸರಿಯಾಗಿ ಮಳೆಯಾಗುತ್ತಿಲ್ಲಾ, ಇದರಿಂದಾಗಿ ಕೆರೆಗಳಲ್ಲಿ ಸರಿಯಾಗಿ ನೀರು ಶೇಖರಣೆಯಾಗುತ್ತಿಲ್ಲಾ. ಇಂತಹ ಸಂದರ್ಭದಲ್ಲಿ ಮಲಪ್ರಭಾ ಡ್ಯಾಮಿನಿಂದ ಕಾಲುವೆಗಳ ಮೂಲಕ ನೀಲಮ್ಮನ ಕೆರೆಗೆ ಕುಡಿಯಲು ನೀರನ್ನು ತುಂಬಿಸಿಕೂಳ್ಳುವಂತಹ ಪರಿಸ್ಥಿತಿ ಬರುತ್ತದೆ. ಅಂತಹದರಲ್ಲಿ ಆ ಕೆರೆಯ ಸುತ್ತ-ಮುತ್ತಲು ಸ್ವಚ್ಛತೆ ಇಡದಿದ್ದರೆ ಹೇಗೆ? ಇವತ್ತು ಕೆರೆಗಳ ಸುತ್ತಲು ಒಂದು ನೋಟವನ್ನು ಹಾಯಿಸಿದರೆ ಸಾಕು ಈ ಕೆರೆಯು ನೀರನ್ನು ಕುಡಿಯಲೇಬಾರದು ಎನ್ನುವಷ್ಟರ ಮಟ್ಟಿಗೆ ಗಲೀಜು ತುಂಬಿದೆ. ಎಲ್ಲೆಂದರಲ್ಲಿ ಸರಾಯಿಯ ಬಾಟಲಿಗಳು, ಪ್ಲಾಸ್ಟಿÃಕ್ ಹಾಳೆಗಳು, ಕಸ-ಕಂಠಿ, ಜಾಡುಗಟ್ಟಿದಂತಹ ಬಣ್ಣಿಗಿಡಗಳು ಕಾಂಗ್ರೆÃಸ್ ಕಸ, ಜನರು ನಡೆದಾಡಲು ನಿರ್ಮಿಸಿದಂತಹ ರಸ್ತೆ ಕುಸಿತವಾಗಿ ಹೋಗಿದೆ, ಹೀಗೆ ಇಲ್ಲಿ ಸ್ವಚ್ಛತೆ ಎನ್ನುವುದು ಅಷ್ಟಕ್ಕÀಷ್ಟೆÃ. ಈ ಕೆರೆಗಳ ನಿರ್ವಹಣೆಗಾಗಿ, ಕೆರೆಯಲ್ಲಿ ನೀರಿಗೆ ಪೌಡರ ಹಾಕುವುದು, ಆ ಕೆರೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಸಲುವಾಗಿ ಪುರಸಭೆಯಲ್ಲಿ ಸಿಬ್ಬಂಧಿಗಳು ಇದ್ದರು ಕೂಡಾ ಇಲ್ಲಿಯ ವೆವಸ್ಥೆ ಮಾತ್ರ ಹಾಳಾಗಿ ಹೋಗಿದೆ. ಕೆಲವೂಂದು ಹಳ್ಳಿಗಳನ್ನು ನೋಡಿದಾಗಿ ಅವರು ಕುಡಿಯುವ ಹನಿ ನೀರಿಗಾಗಿ ಪರಿತಪಿಸುತ್ತಿರುತ್ತಾರೆ. ಆದರೆ ನಗರದಲ್ಲಿ ಶಾಶ್ವತವಾಗಿ ಕುಡಿಯುವ ನೀರಿಗಾಗಿ ಕೆರೆಯನ್ನು ನಿರ್ಮಿಸಿದ್ದಾರೆ, ಇನ್ನಾದರು ನೀಲಮ್ಮನ ಕೆರೆಯ ಕಡೆಗೆ ಪುರಸಭೆಯ ಮುಖ್ಯಾಧಿಕಾರಿಗಳು ಗಮನವನ್ನು ಹರಿಸಿ ಆ ಕೆರೆಯಲ್ಲಿರುವಂತಹ ನೀರಿಗೆ ಪೌಡರನ್ನು ಹೊಡೆಸಿ ಅದರ ಸುತ್ತಲು ಬೆಳೆದಿರುವಂತಹ ಕಸವನ್ನು ತೆಗೆಸುವಂತಹ ಕೆಲಸವನ್ನು ಮಾಡಬೇಕು. ಮುಂದೂಂದು ದಿನ ನೀರಿನ ಬರ ಬಿದ್ದಾಗ ಈ ನೀಲಮ್ಮನ ಕೆರೆಯೇ ಈ ನಗರದ ಆಸರೆಯಾಗಿ ನಿಲ್ಲುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲಾ.

ಈ ನೀಲಮ್ಮನ ಕೆರೆಯು ಬಹಳ ಹಿಂದಿನಿಂದ ಬಂದಿರುವಂತಹದು ಇದಕ್ಕೆÃ ತನ್ನದೆಯಾದಂತಹ ಇತಿಹಾಸವಿದೆ. ಚನ್ನಮ್ಮನ ಕೆರೆಯು ನಿರ್ಮಾಣವಾದ ನಂತರ ಆ ಕೆರೆಯ ನೀರಿನ ಬಳಕೆ ಕಡಿಮೆಯಾಯಿತು. ಇಂದು ಚನ್ನಮ್ಮನ ಕೆರೆಯಲ್ಲಿನ ನೀರು ಖಾಲಿಯಾದರೆ ಈ ನೀಲಮ್ಮನ ಕೆರೆಯ ನೀರೆ ನಮಗೆ ಗತಿಯಾಗುತ್ತದೆ. ನಾವು ಮೂದಲು ಈ ರೀತಿಯಾಗಿ ಬರಗಾಲ ಬಿದ್ದರೆ ಕುಡಿಯುವ ನೀರನ್ನು ಬೆಣ್ಣೆ ಹಳ್ಳದಲ್ಲಿ ವರ್ತಿಯನ್ನು ತೆಗೆದು ಚರಗಿಯಿಂದ ತುಂಬಿಕೂಂಡು ತರುತ್ತಿದ್ದೆವು. ಸದ್ಯ ಕಾಲ ಬದಲಾಗಿದೆ ಸವಲತ್ತು ಹೆಚ್ಚಾಗಿದೆ, ಇನ್ನಾದರು ಪ್ರತಿಯೂಬ್ಬರು ನೀರನ್ನು ಮಿತವಾಗಿ ಬಳಸುವುದನ್ನು ಕಲಿಯಬೇಕು. ಪುರಸಭೆಯವರು ನೀಲಮ್ಮನ ಕೆರೆಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು, ಆ ಕೆರೆಯನ್ನು ಉಳಿಸಿ ಬೆಳೆಸಬೇಕು. ಬಸನಗೌಡ ಪಾಟೀಲ್ ಸಮಾಜ ಸೇವಕರು, ನವಲಗುಂದ

loading...