ಜಗುಚಂದ್ರ ರಂಗ ಭೂಮಿಗೆ ವಿಶಿಷ್ಠ ಸೇವೆ ಸಲ್ಲಿಸಿದ್ದಾರೆ

0
31

ಕನ್ನಡಮ್ಮ ಸುದ್ದಿ-ಧಾರವಾಡ: ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮ್ಮುಚ್ಚಯದಲ್ಲಿ ಥಿಯೇಟರ್ ಎಂಪೈರ ಕಲ್ಚರಲ್ ಪೋರಂ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹೋಯೋಗದಲ್ಲಿ ಕೆ ಜಗುಚಂದ್ರ ಹೆಸರಿನಲ್ಲಿ ನಾಟಕ ಜರುಗಿತು.
ವೃತಿಯಲ್ಲಿ ಶಿಕ್ಷಕರಾಗಿದ್ದ ಜಗುಚಂದ್ರ ಅವರು ರಂಗ ಭೂಮಿಗೆ ತಮ್ಮದೇ ಆದ ವಿಶೀಷ್ಟ ಸೇವೆ ಸಲ್ಲಿಸುವ ಮೂಲಕ ರಂಗ ಭೂಮಿಯಲ್ಲಿ ಪ್ರಮುಖರಾಗಿ ಸೇವೆಸಲ್ಲಿಸಿದ್ದಾರೆ, ಸಂಪನ್ಮೂಲ ವ್ಯಕ್ತಿಯಾಗಿ, ವಿಶೇಷ ಶಿಕ್ಷಕರಾಗಿ, ನಾಟಕಗಳ ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ, ಸಾಂಸ್ಕೃತಿಕ, ಸಾಮಾಜಿಕ, ಚಟುವಟಿಕೆಗಳಲ್ಲಿ ತಮ್ಮನ್ನು ತಾವೂ ತೋಡಗಿಸಿ ಕೊಂಡಿದ್ದಾರೆ, ಅಲ್ಲದೇ ನಾಟಕ ಅಕಾಡೆಮಿಯ ಸದಸ್ಯರಾಗಿಯು ಕಾರ್ಯನಿರ್ವಹಿಸಿದ್ದಾರೆ. ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಹೊಂದಿದ್ದಲ್ಲದೇ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ೨೦೧೨-೧೩ ನೇ ಸಾಲಿನ ಕರ್ನಾಟಕ ಬಾಲ ವಿಕಾಸ ಆಕಾಡೆಮಿ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

loading...