ದಾನಿಗಳಿಂದಲೆ ಬಡಮಕ್ಕಳಿಗೆ ಅನುಕೂಲ

0
13

ಕನ್ನಡಮ್ಮ ಸುದ್ದಿ-ಧಾರವಾಡ: ತೇಜಸ್ವಿ ನಗರದ ಶ್ರಿÃ ಮಾರುತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎಲ್ಲಾ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶ್ರಿÃ ರಾಮದಾಸ ಗಜಾನನ ಶೆಟ್ಟಿ, ಶ್ರಿÃಮತಿ ಸುಧಾ ರಾಮದಾಸ ಶೆಟ್ಟಿ ಹಾಗೂ ಪ್ರಶಾಂತ ರಾಮದಾಸ ಶೆಟ್ಟಿ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ ಬುಕ್ಕ್, ಪೆನ್, ಪೆನ್ಸಿಲ್ ಪೌಚ್, ಕಂಪಾಸ್ ಪೆಟ್ಟಿಗೆ ವಿತರಣೆ ಮಾಡಿದರು.
ಪ್ರೌಢ ಶಾಲಾ ಮುಖ್ಯೊÃಪಾಧ್ಯಾಯ ಎಂ.ಜಿ.ಹೆಬ್ಬಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯೊÃಪಾದ್ಯಾಯ ಎ.ಎಸ್.ಪಾಟೀಲ ಅವರು ಶಾಲೆಗಳ ಸ್ಥಿತಿಗತಿ ಹಾಗೂ ನಡೆದುಬಂದ ವಿಚಾರವನ್ನು ತಿಳಿಸಿದರು.ಬಿಆರ್‌ಸಿ ಶ್ರಿÃಮತಿ ಡಿ.ವ್ಹಿ.ಸಜ್ಜನ ಮಾತನಾಡಿ, ಸ್ಲಂ ಶಾಲೆಗಳ ಬಡಮಕ್ಕಳಿಗೆ ಇಂಥಹ ದಾನಿಗಳಿಂದಲೆ ಮಕ್ಕಳಿಗೆ ತುಂಬಾ ಅನಕೂಲವಾಗುತ್ತದೆ ಎಂದು ಹೇಳಿದರು.

ಪ್ರಶಾಂತ ಶೆಟ್ಟಿಯವರು ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಮಕ್ಕಳು ಸಾಧನೆ ಮಾಡಬೇಕೆನ್ನುವ ಛಲವಿರುತ್ತದೆ. ಅಂತಹ ಮಕ್ಕಳಿಗೆ ದಾನಿಗಳು ಶಿಕ್ಷಣಕ್ಕೆ ಸಹಾಯ ಮಾಡುವುದರಿಂದ ಸಹಾಯ ಪಡೆದ ಮಕ್ಕಳು ದೇಶಕ್ಕೆ ಸತ್‌ಪ್ರಜೆಗಳಾಗಬೇಕೆಂದರು. ಜಿ.ಎಸ್.ತಿಮಲಾಪೂರ ಉಪಸ್ಥಿತರಿದ್ದರು. ಎಚ್.ಎಸ್.ಹೂಗಾರ ನಿರೂಪಿಸಿದರು.

loading...