ದೇಹದ ಮೇಲೆ ಇಷ್ಟಲಿಂಗ ಧಾರಣೆ ಮಾಡಿ

0
67

ಕನ್ನಡಮ್ಮ ಸುದ್ದಿ-ಧಾರವಾಡ: ಸಮಸ್ತ ವೀರಶೈವ-ಲಿಂಗಾಯತರೆಲ್ಲರೂ ಸದಾ ದೇಹದ ಮೇಲೆ ಇಷ್ಟಲಿಂಗವನ್ನು ಧಾರಣೆ ಮಾಡಿದರೆ ಭೂತ-ಪ್ರೆÃತಗಳ ಭಯವೂ ಸೇರಿದಂತೆ ಇನ್ನಿತರೇ ಯಾವುದೇ ರೀತಿಯ ಸೂತಕಗಳ ಭಯವಿಲ್ಲವೆಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇನಾಂಹೊಂಗಲ ವಿರಕ್ತಮಠದ ಶ್ರಿÃಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ತತ್ವಾನ್ವೆÃಷಣ ಮಂದಿರದಲ್ಲಿ ವೀರಶೈವ ಜಂಗಮ ಸಂಸ್ಥೆಯು ಹಮ್ಮಿಕೊಳ್ಳುವ `ನಿರಂತರ ಉಪನ್ಯಾಸ ಮಾಲಿಕೆ’ ಅಡಿಯಲ್ಲಿ ‘ಲಿಂಗಾಂಗ ಸಾಮರಸ್ಯ’ ವಿಷಯ ಕುರಿತು ಮಾತನಾಡಿದರು. ಇಷ್ಟಲಿಂಗ ಧಾರಣೆಯ ನಂತರ ಗುರು ಮುಖೇನ ಪ್ರಾಪ್ತವಾದ ರೀತಿಯಲ್ಲಿ ಪೂಜೆ ಮಾಡಿ ತದೇಕಚಿತ್ತದಿಂದ ಲಿಂಗದ ಮೇಲೆ ದೃಷ್ಟಿಯನ್ನು ಕೇಂದ್ರಿಕರಿಸಿ ಧ್ಯಾನದ ಅನುಸಂಧಾನದಲ್ಲಿ ತಲ್ಲಿÃನರಾಗುವುದರಿಂದ ಆಗ ಅಂಗ ಮತ್ತು ಲಿಂಗವೆಂಬ ದ್ವಂದ್ವಗಳು ಅಳಿದು ಲಿಂಗಾಂಗ ಸಾಮರಸ್ಯ ಉಂಟಾಗುತ್ತದೆ ಎಂದರು.

ತಾಯಿಯ ಗರ್ಭದಲ್ಲಿರುವ ಪಿಂಡಕ್ಕೆ ೮ ತಿಂಗಳಲ್ಲಿ ಅಂಗಾಂಗಗಳು ಮೂಡಿ ಚೈತನ್ಯ ತುಂಬಿಕೊಳ್ಳುತ್ತದೆ. ಆ ಸಮಯದಲ್ಲಿ ಹಿರೇಮಠದ ಸ್ವಾಮಿಗಳು ತಾಯಿಗೆ ಓಂಕಾರ ಮಂತ್ರ ಉಪದೇಶ ಮಾಡಿ ಗರ್ಭಕ್ಕೆÃ ಇಷ್ಟಲಿಂಗ ಧಾರಣೆ ಮಾಡುವುದರಿಂದ ಹುಟ್ಟುವ ಮೊದಲೆ ಗರ್ಭಸ್ಥ ಶಿಸು ಸಂಸ್ಕಾರ ಪಡೆಯುತ್ತದೆ. ನಂತರ ಅದು ೮೪ ಲಕ್ಷ ಜೀವರಾಶಿಗಳಲ್ಲಿ ಶ್ರೆÃಷ್ಠವಾದ ಮಾನವ ಜನ್ಮ ಪಡೆಯುತ್ತದೆ. ಲೌಕಿಕವಾಗಿ ಮತ್ತು ಅಲೌಕಿಕವಾಗಿ ಉತ್ತುಂಗ ಸಾಧನೆಗೆ ಇಷ್ಟಲಿಂಗದ ಮಹಾಬೆಳಗು ದಾರಿತೋರಿಸುತ್ತದೆ ಎಂದರು.
ಬಿ. ಎಸ್. ಬಿದರಿಮಠ ಅಧ್ಯಕ್ಷತೆ ವಹಿಸಿದ್ದರು. ಪಂಪಾಪತಿ ಹಿರೇಮಠ, ಡಾ. ಮಹಾಂತಸ್ವಾಮಿ ಹಿರೇಮಠ, ಜಯಶ್ರಿÃ ಪುರಾಣಿಕ, ಅನುಸೂಯಾ ಹಿರೇಮಠ, ಪೂರ್ಣಿಯಾ ಹಿರೇಮಠ, ಜಿ. ಜಿ. ಹಿರೇಮಠ, ವ್ಹಿ. ಎಸ್. ಹಿರೇಮಠ, ಸಿದ್ದಲಿಂಗಸ್ವಾಮಿ, ಡಾ. ವಸ್ತçದ, ತೋರಗಲ್ಲಮಠ, ಕಾಡದೇವರಮಠ, ಜಗದೀಶ ಸುಬ್ಬಾಪುರಮಠ, ಹಳ್ಳಿಗೇರಿಮಠ ಇದ್ದರು.

loading...