ರೋಗಿಯ ವಿವರ ತಿಳಿಸುವ ಟಿಪ್ಪಣಿಗಳು ಅಭಿಪ್ರಾಯಗಳು ಲಭ್ಯ

0
16

ಕನ್ನಡಮ್ಮ ಸುದ್ದಿ-ಧಾರವಾಡ: ವೈದ್ಯಕೀಯ ವೃತ್ತಿಯ ವ್ಯಾಪಾರೀಕರಣ ಮತ್ತು ಸರಕಾರ ಮೇಲ್ವಿಚಾರಣೆಯ ಲೋಪದ ಕಾರಣದಿಂದಾಗಿ ಅನವಶ್ಯಕವಾಗಿ ಅದರಲ್ಲಿಯೂ ತರುಣಿಯರಿಗೆ ಗರ್ಭಾಶಯ ತೆಗೆಯುವ ಶಸ್ತçಚಿಕಿತ್ಸೆಗಳು ಅಡೆತಡೆ ಇಲ್ಲದೇ ನಡೆಯುತ್ತಿರುವುದು ಅತ್ಯಂತ ಖೇದರ ವಿಷಯ ಎಂದು ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ `ಗರ್ಭಾಶಯ ತೆಗೆಯುವ ಶಸ್ತçಚಿಕಿತ್ಸೆ’ಯ ಕುರಿತು ಮಾತನಾಡಿದರು. ಶೋಷಿತ, ಹಿಂದುಳಿದ ವರ್ಗಗಳ ಸಾಲಿಗೆ ಸೇರಿರುವ ಮಹಿಳೆಯ ಬಾಳು ಬರಿ ೨೫ ವರ್ಷಕ್ಕೆ ಮುಕ್ತಾಯವಾಗುವಂತ ಭೀಕರ ಪರಿಸ್ಥಿತಿ ರಾಜ್ಯದ ಹಲವು ಭಾಗಗಳಲಿ ಇದೆ, ೧೬ ವರ್ಷಕ್ಕೆ ಮದುವೆಯಾಗುವ ಇವರು ೨-೩ ಹೆರಿಗೆ ನಂತರ ಸಾಮಾನ್ಯ ಎನ್ನಬಹುದಾದ ಬೆನ್ನು ನೋವು, ಸೋಂಟ ನೋವು ಇವುಗಳ ಕಾರಣಗಳ ಹಿನ್ನೆಲೆಯಲ್ಲಿ ವೈದ್ಯರ ಬಳಿ ಹೋದಾಗ ಅವರಿಗೆ ಬೀತಿ ಹುಟ್ಟಿಸುವ ಮೂಲಕ ಹಲವು ಪ್ರಕರಣಗಳಲ್ಲಿ ಗರ್ಭಾಶಯ ತೆಗೆಯುವ ಶಸ್ತçಚಿಕಿತ್ಸೆಯನ್ನು ನುರಿತ ವೈದ್ಯರೇ ಮಾಡುತ್ತಿದ್ದದ್ದು ದುರ್ದೈವಕರ ಎಂದರು. ಅಮೇರಿಕೆಯಲ್ಲಿ ಶಸ್ತçಚಿಕಿತ್ಸೆ ಪೂರ್ವದ ಮತ್ತು ನಂತರದ ವಿಷಯದ ಕುರಿತಾಗಿ ಸಂಪೂರ್ಣ ರೋಗಿಯ ವಿವರ ತಿಳಿಸುವ ಟಿಪ್ಪಣಿಗಳು ಅಭಿಪ್ರಾಯಗಳು ಲಭ್ಯವಾಗುತ್ತವೆ. ಇವೆಲ್ಲ ವಿವರಗಳನ್ನು ಕಡ್ಡಾಯವಾಗಿ ಅಲ್ಲಿನ ವೈದ್ಯರು ಸರಕಾರಕ್ಕೆ ಸಲ್ಲಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಅಂಥ ವ್ಯವಸ್ಥೆಯೇ ಇಲ್ಲ. ಗರ್ಭಾಶಯ ಶಸ್ತçಚಿಕಿತ್ಸೆ ಯಾಕೆ ಮಾಡುತ್ತಾರೆ ಎಂಬ ಕಲ್ಪನೆ ರೋಗಿಗಳಿಗೆ ಇರುವುದಿಲ್ಲ, ಇಲ್ಲವೆ ವೈದ್ಯರು ಅದನ್ನು ಹೆಚ್ಚಿನ ಪ್ರಸಂಗಗಳಲ್ಲಿ ಮನದಟ್ಟು ಮಾಡಿಕೊಡುವುದಿಲ್ಲ. ಇದರ ಜೊತೆಗೆ ಭೀಕರ ಕಾಯಿಲೆಗಳ ಹೆಸರು ಹೇಳಿ ಗರ್ಭಾಶಯ ಶಸ್ತçಚಿಕಿತ್ಸೆಗೆ ರೋಗಿಗಳನ್ನು ಫುಸಲಾಯಿಸಲಾಗುತ್ತದೆ ಎಂದು ಹೇಳಿದರು.

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹೆರಿಗೆ ಮತ್ತು ಸ್ತಿçÃಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಮಾಲಾ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗರ್ಭಾಶಯ ತೆಗೆಯುವ ಶಸ್ತçಚಿಕಿತ್ಸೆ ಹಲವು ಪ್ರಸಂಗಗಳಲ್ಲಿ ಮಹಿಳೆಯರಿಗೆ ವರದಾನವಾಗಿದೆ. ಆದರೆ ಹಲವು ಪ್ರಸಂಗಗಳಲ್ಲಿ ಶಸ್ತçಚಿಕಿತ್ಸೆ ಅನಾವಶ್ಯಕವಾಗಬಾರದು ಎಂದರು. ಕೃಷ್ಣ ಜೋಶಿ ಸ್ವಾಗತಿಸಿದರು. ಮನೋಜ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಮಹಾಂತೇಶ ನರೇಗಲ್ಲ ವಂದಿಸಿದರು.
ವೇದಿಕೆಯ ಮೇಲೆ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು.

loading...