ಬಾಗಲಕೋಟೆ ಸ್ಮಾರಕ ರಕ್ಷಣೆಗೆ ಮುಂದಾದ ಪುರಾತತ್ವ ಇಲಾಖೆ

0
33

ಬಾಗಲಕೋಟೆ: ಕೃಷ್ಣಾ ನದಿಯ ಹಿನ್ನಿÃರಿನಲ್ಲಿರುವ ಹಳೆಯ ಬಾಗಲಕೋಟೆ ಸ್ಮಾರಕ ಸಂರಕ್ಷಣೆಗೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಣಿಯಾಗುತ್ತಿದ್ದಂತೆಯೇ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಡಿ.ಪಿ.ಧನಪಾಲ್, ಪುರಾತತ್ವ ಇಲಾಖೆಯ ಅಧಿಕಾರಿ ಅಜಯ ಜನಾರ್ಧನ ಹಾಗೂ ಸಹಾಯಕ ಅಧಿಕ್ಷಕರಾದ ಮುವೇಂದ್ರನ್ ಈ ಮೂವರ ತಂಡ ಸ್ಮಾರಕ ವಿರುವ ಸ್ಥಳಕ್ಕೆ ಭೇಟಿ ನೀಡಿ ಸಂರಕ್ಷಣೆಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಸ್ಮಾರಕದ ಸುತ್ತಲಿನ ನೀರು ಕಡಿಮೆಯಾದ ನಂತರ ಈ ಸ್ಮಾರಕದ ಸ್ಥಿರತೆ, ಬುನಾದಿ ಹಾಗೂ ಉಳಿದ ಭಾಗಗಳನ್ನು ಯಾವ ರೀತಿಯಾಗಿ ಸಂರಕ್ಷಿಸಬಹುದೆಂದು ಚರ್ಚಿಸಲಾಯಿತು.

 

೧೮೦೦ ರಲ್ಲಿ ಈ ಪ್ರದೇಶವನ್ನು ಸರ್ ಸುಭಾ ಎಂಬುವರು ಪ್ರಾಂತ್ಯವನ್ನಾಗಿ ಪರಿವರ್ತಿಸಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ರಾಸ್ತಿಯಾ ಕುಟುಂಬಕ್ಕೆ ಸೇರಿದ ಆನಂದರಾವ ಬಿಕಾಜಿ ಎಂಬುವರು ಬಾಗಲಕೋಟೆಯಲ್ಲಿ ನೆಲೆಸಿ ಅಪರೂಪದ ಸುಂದರವಾದ ಅರಮನೆಯೊಂದನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಸವಣೂರಿನ ನವಾಬರು ಈ ನಗರದ ಹಳೆಪೇಟೆ ನಿರ್ಮಾಣಗೊಳಿಸಿದ್ದರು. ಅದು ಇಂದು ಹಿನ್ನಿÃರಿನಲ್ಲಿ ಮುಳುಗಡೆ ಹೊಂದಿದೆ.
ಪೇಶ್ವೆಗಳ ಕಾಲದಲ್ಲಿ ಟಂಕಶಾಲೆಯೊಂದನ್ನು ಸ್ಥಾಪಿಸಲಾಗಿತ್ತು. ಅದು ೧೮೩೫ ವರೆಗೆ ಚಾಲ್ತಿಯಲ್ಲಿತ್ತು ಎಂದು ತಿಳಿದು ಬರುತ್ತದೆ. ಮರಾಠರ ಕಾಲದಲ್ಲಿಯ ಕೋಟೆ ಮತ್ತು ಸೈನಿಕ ಶಿಬಿರಗಳಿದ್ದ ಅವಶೇಷಗಳು ಬಾಗಲಕೋಟೆಯ ಸುತ್ತಮುತ್ತಲೂ ಕಂಡುಬಂದಿವೆ.

loading...