ಕರಾಟೆ ಸ್ಪರ್ಧೆ ಬಾಗಲಕೋಟೆಗೆ ಸಮಗ್ರ ಪ್ರಶಸ್ತಿ

0
18

ಬಾಗಲಕೋಟ: ವಿದ್ಯಾಗಿರಿ ಜು.೧೨ರಿಂದ ೧೫ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರಿÃಡಾಂಗಣದಲ್ಲಿ ನಡೆದ ೧೪ ವರ್ಷದೊಳಗಿನವರ ೧೮ ನೇ ರಾಜ್ಯ ಸಬ್ ಜೂನಿಯರ್ ವುಶು ಪಂದ್ಯಾವಳಿಯಲ್ಲಿ ಬಾಗಲಕೋಟ ಜಿಲ್ಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಸ್ಪರ್ಧೆಯಲ್ಲಿ ನಗರದ ಬಸವೇಶ್ವರ ಸಿಬಿಎಸ್‌ಇ ಶಾಲೆಯ ೬ನೇ ತರಗತಿಯ ಕುಮಾರ ತನ್ಮಯ್ ಕುಪ್ಪಸ್ತ್, ೭ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಖುಷಿವರ್ಮಾ ಹಾಗೂ ಚಂದನಾ ಕರಬಾಶೆಟ್ಟಿ, ೬ನೇ ವರ್ಗದ ಕುಮಾರಿ ಶ್ರಿÃರಕ್ಷಾ ಚಿಮ್ಮನಕಟ್ಟಿ ಹಾಗೂ ೯ನೇ ವರ್ಗದ ಕುಮಾರ ವಿಷ್ಣುವರ್ಮಾ ಅತ್ಯುತ್ತಮ ಪ್ರದರ್ಶನ ನೀಡಿ ಬಂಗಾರ ಪದಕವನ್ನು ಪಡೆದಿದ್ದರೆ, ೯ ನೇ ಶಾಸ್ತಿçà ವಿಭಾಗದ ಕುಮಾರ ಮಲ್ಲಪ್ಪ ಹುಬ್ಬಳ್ಳಿ ಬೆಳ್ಳಿಯ ಪದಕ ಪಡೆಯುವ ಮೂಲಕ ಜಿಲ್ಲೆಗೆ, ಹಾಗೂ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿರಾಜ್ಯದ ೨೧ ಜಿಲ್ಲೆಗಳಿಂದ ೫೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕರ್ನಾಟಕ ಕ್ರಿÃಡಾ ಪ್ರಾಧಿಕಾರ, ಕರ್ನಾಟಕ ವುಶು ಸಂಘಟನೆ ಹಾಗೂ ಮೈಸೂರು ಜಿಲ್ಲಾ ವುಶು ಸಂಘಟನೆಯವರು ಸಂಯುಕ್ತವಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಬಾಗಲಕೋಟ ಜಿಲ್ಲಾ ವುಶು ಸಂಸ್ಥೆಯ ಶ್ರಿÃಯುತ ಸಂಗಮೇಶ ಲಾಯದಗುಂದಿಯವರು ಈ ಮಕ್ಕಳಿಗೆ ತರಬೇತಿ ನೀಡಿದ್ದರು.
ಶಾಲೆಯ ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷ ಶಾಸಕ ಡಾ. ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ಆಡಳಿತಾಧಿಕಾರಿಗಳಾದ ಎನ್.ಜಿ.ಕರೂರ, ಶಾಲೆಯ ಪ್ರಾಚಾರ್ಯ ಸಿ.ಬಿ. ಸುರೇಶ ಹೆಗ್ಡೆ, ಉಪಪ್ರಾಚಾರ್ಯ ಮಂಗಳಗೌರಿ ಹೆಗ್ಡೆ ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

loading...