ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ

0
68

 

ಗಂಗಾವತಿ: ಮತದಾನ ದೇವರ ಪೂಜೆ ಮಾಡುವಂತೆ ಪವಿತ್ರವಾದ ಕೆಲಸವಾಗಿದೆ. ಮತದಾನದಿಂದ ವಂಚಿತಗೊಳ್ಳಬಾರದು ಎಂದು ಆಲ್ ಫಾರೂಕ್ ಶಾಲೆಯ ಮುಖ್ಯ ಶಿಕ್ಷಕಿ ಗೌಸ್‌ಬಿ ತಿಳಿಸಿದರು.
ಬುಧವಾರ ತಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮತದಾನ ಮಹತ್ವ ಕುರಿತು ವಿವರಿಸಿದರು. ಈವಿಎಂ ಯಂತ್ರದ ಮೂಲಕ ಮತದಾನ ಮಾಡುವ ವಿಧಾನವನ್ನು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ನಾಯಕರು. ಮುಂದಿನ ದಿನಗಳಲ್ಲಿ ನಿಮಗೆ ಮತದಾನದ ಹಕ್ಕು ಬಂದ ಸಂದರ್ಭದಲ್ಲಿ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಗೆ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಿಳಿಸಿದರು.

ಶಿಕ್ಷಕರಾದ ಅಮೀನಾಬೇಗಂ, ಲಕ್ಷö್ಮಣ, ಹೈದರ್ ಅಲಿ, ಪ್ರಭುರಾಜ, ಮಂಜುನಾಥ, ನಫೀಸಾ ಬೇಗಂ, ಅನ್ನಪೂರ್ಣ ಪಾಲ್ಗೊಂಡಿದ್ದರು.

loading...