ಬಾಕಿ ಕೂಲಿ ಪಾವತಿಗೆ ಕೂಲಿಕಾರರ ಆಗ್ರಹ

0
8

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಉದ್ಯೊÃಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಬಾಕಿ ಕೂಲಿ ನೀಡಬೇಕು ಎಂದು ಒತ್ತಾಯಿಸಿ ಕೂಲಿಕಾರರು ಗಂಗಾವತಿ ತಾಲ್ಲೂಕಿನ ಹಣವಾಳ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಹಣವಾಳ ಗ್ರಾಮದಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಜನರಿಗೆ ಕೂಲಿ ಕೆಲಸ ನೀಡಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿ ಮಾಡಿ, ಈಗಾಗಲೇ ತಿಂಗಳುಗಳು ಕಳೆದರೂ ಅಧಿಕಾರಿಗಳು ಕೂಲಿ ಪಾವತಿ ಮಾಡುತ್ತಿಲ್ಲ ಎಂದು ಕೂಲಿಕಾರ್ಮಿಕರು ಆರೋಪಿಸಿದರು. ಕೂಲಿ ಹಣವನ್ನು ನೇರವಾಗಿ ಕೂಲಿಕಾರರ ಖಾತೆಗೆ ಜಮಾ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಸುಮಾರು ರೂ. ೫೨ ಲಕ್ಷಕ್ಕೂ ಅಧಿಕ ಕೂಲಿ ಬಾಕಿ ಇದ್ದು, ಇದುವರೆಗೂ ಪಾವತಿ ಮಾಡಲು ಮುಂದಾಗುತ್ತಿಲ್ಲ. ತಿಂಗಳುಗಳ ಕಾಲ ಕೂಲಿ ಇಲ್ಲದೆ ಬರಿಗೈಯಲ್ಲಿಯೇ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಟುಂಬ ನಿರ್ವಹಣೆ ಸಹ ಸಂಕಷ್ಟವಾಗಿದೆ. ಕೂಡಲೇ ತಾಲ್ಲೂಕು ಪಂಚಾಯಿತಿ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು, ಬಾಕಿ ಇರುವ ಕೂಲಿ ಹಣವನ್ನು ಪಾವತಿ ಮಾಡಬೇಕು ಎಂದು ಕೂಲಿಕಾರರಾದ ಹುಸೇನ್, ಶರಣಪ್ಪ, ಈರಮ್ಮ, ಓಂಕಾರಪ್ಪ, ಹಂಪಮ್ಮ, ನಿಂಗಮ್ಮ, ರಾಜೇಶ್ವರಿ, ಬಸಮ್ಮ, ಅನ್ನಪÇರ್ಣ, ಸುರೇಶ ಇತರರು ಒತ್ತಾಯಿಸಿದರು.

loading...