ಕಾಮಗಾರಿ ಅಥವಾ ಏಜೆನ್ಸಿ ಬದಲಿಸಬೇಕಾದರೆ ವರದಿ ಸಲ್ಲಿಸಿ: ಸುಬೋಧ್

0
23

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈಗಾಗಲೆ ನಿಗದಿಪಡಿಸಿದ ಕಾಮಗಾರಿಯನ್ನು ಅಥವಾ ಏಜೆನ್ಸಿಯನ್ನು ಬದಲಿಸುವ ಹಾಗಿದ್ದರೆ ಈ ಕುರಿತು ವರದಿ ಸಲ್ಲಿಸುವುಂತೆ ಪ್ರಾದೇಶಿಕ ಆಯುಕ್ತರು ಹಾಗೂ ಮಂಡಳಿ ಕಾರ್ಯದರ್ಶಿಗಳಾದ ಸುಬೋಧ್ ಯಾದವ್ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಿಡುಗಡೆಯಾದ ಹಣ ಬಳಕೆ ಪ್ರಮಾಣ ಪತ್ರ ಕುರಿತ ಅನುಷ್ಠಾನ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲ್ಪಾವಧಿ ಅಥವಾ ದೀರ್ಘಾವಧಿ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಾಗ ಸರಿಯಾದ ಮೊತ್ತವನ್ನು ನಮೂದಿಸಿ ನಿಗದಿತ ಕಾಲಮಿತಿಯೊಳಗೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ. ಆರ್ಥಿಕ ಹಾಗೂ ಭೌತಿಕ ಸಾಧನೆಯು ಸಮನಾಗಿರುವಂತೆ ಸರಿಯಾದ ದತ್ತಾಂಶಗಳನ್ನು ಒಳಗೊಂಡ ವರದಿಯನ್ನು ಯಾವುದೇ ಬದಲಾವಣೆ ಇದ್ದರೆ ಅದಕ್ಕೆ ತಕ್ಕ ಪ್ರಸ್ತಾವನೆಯನ್ನು ಬರುವ ಆಗಸ್ಟ್ ೧೫ರೊಳಗೆ ಸಲ್ಲಿಸಿ, ಸೆಪ್ಟೆಂಬರ್ ೧ ರಿಂದ ಕಡ್ಡಾಯವಾಗಿ ಕಾಮಗಾರಿಯನ್ನು ಆರಂಭಿಸಬೇಕು ಎಂದರು. ೨೦೧೩-೧೪ ನೇ ಸಾಲಿನಿಂದ ೨೦೧೮-೧೯ ರವರೆಗೆ ಸಾಮಾನ್ಯ, ಎಸ್.ಸಿ.ಪಿ, ಟಿ.ಎಸ್.ಪಿ ವಿಭಾಗದಲ್ಲಿ ನಿರ್ದಿಷ್ಟ ಕಾಮಗಾರಿಗಳಿಗೆ ನಿರ್ದಿಷ್ಟ ಮೊತ್ತವನ್ನು ಸಹ ಬಿಡುಗಡೆ ಮಾಡಲಾಗಿದೆ. ಆದರೆ ಬಿಡುಗಡೆ ಆದ ಹಣವನ್ನು ಅನುಷ್ಠಾನ ಏಜೆನ್ಸಿಗಳು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಅಭಿವೃದ್ಧಿ ಕಾಮಗಾರಿಗಳೂ ಅನುಷ್ಠಾನಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಏಜೆನ್ಸಿಗಳ ಅನುಷ್ಠಾನ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹಾಜರಿರಬೇಕು ಹಾಗೂ ಕರ್ತವ್ಯ ನಿಮಿತ್ತ ಕೇಂದ್ರ ಸ್ಥಾನ ಬಿಟ್ಟು ತೆರಳುವ ಸಂದರ್ಭ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿಯನ್ನು ಲಿಖಿತ ರೂಪದಲ್ಲಿ ಪಡೆದು ತೆರಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಪಿ. ಸುನೀಲ್ ಕುಮಾರ, ರಘುನಂದನ್ ಮೂರ್ತಿ, ನೇಹಾ ಜೈನ್, ಸೈಯಿದಾ ಅಯಿಷಾ ಸೇರಿದಂತೆ ಜಿಲ್ಲೆಯ ಅನುóಷ್ಠಾನ ಅಧಿಕಾರಿಗಳು, ವಿವಿಧ ವಿಭಾಗಗಳ ಅಭಿಯಂತರರು ಉಪಸ್ಥಿತರಿದ್ದರು.

loading...