ತೀವ್ರ ರಕ್ತಸ್ರಾವ, ವಿವಿಧ ಅಂಗಾಂಗ ವೈಫಲ್ಯ..!

0
41

 

ಕನ್ನಡಮ್ಮ ಸುದ್ದಿ-ಕೊಪ್ಪಳ: ನಗರದ ಖಾಸಗಿ ಆಸ್ಪತ್ರೆಗೆ ವೆಂಟಿಲೇಟರ್ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದ ಬಾಣಂತಿಯೊಬ್ಬರು ಮೃತರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ ಎಂಬ ಸುದ್ದಿ ತಿಳಿದು ಆಸ್ಪತ್ರೆಗೆ ಬಂದ ಸಂಬಂಧಿಕರು ಮಹಿಳೆ ಜೀವಂತ ಇರುವುದನ್ನು ಕಂಡು ಹೌಹಾರಿದ ಘಟನೆ ಸೋಮವಾರ ನಡೆದಿದೆ. ಬಳಿಕ ಆ ಬಾಣಂತಿ ಮೃತಪಟ್ಟಿದ್ದಾಳೆ.
ಮೃತ ಮಹಿಳೆಯನ್ನು ನಗರದ ಕುಂಬಾರ ಓಣಿಯ ಕವಿತಾ ಮಂಜುನಾಥ ಕುಂಬಾರ (೨೫) ಎಂದು ಗುರುತಿಸಲಾಗಿದೆ. ಕವಿತಾ ಅವರಿಗೆ ಇದು ೬ನೇ ಹೆರಿಗೆ ಆಗಿದೆ. ಈಗಾಗಲೇ ನಾಲ್ಕು ಹೆಣ್ಣು, ಒಂದು ಗಂಡು ಮಗು ಇದೆ. ಇನ್ನೊಂದು ಗಂಡು ಮಗುವಾಗಲಿ ಎಂಬ ಆಶಯೊಂದಿಗೆ ನಗರದ ಗೋವನಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರ ಸಂತಾನಹರಣ ಚಿಕಿತ್ಸೆ ಮಾಡಲಾಗಿತ್ತು. ಅತಿಯಾದ ರಕ್ತಸ್ರಾವದಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ ಸ್ಥಿತಿ ಗಂಭೀರವಾಗಿದ್ದನ್ನು ಕಂಡು ಕೆ.ಎಸ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯ ಮೆದುಳು ಮತ್ತು ಕಿಡ್ನಿ ವೈಫಲ್ಯಗಳಾಗಿ ಅವೆರಡೂ ನಿರ್ಷ್ಕಿಯ(ಆರ್ಗನ್ಸ್ ಡೆಡ್)ವಾಗಿವೆ ಎಂದು ಡ್ಯೂಟಿ ಡಾಕ್ಟರ್‌ವೊಬ್ಬರು ತಿಳಿಸಿದ್ದಾರೆ. ಆ ಮಾತು ಕೇಳಿದ ಬಾಣಂತಿ ಕಡೆಯವರು ಕವಿತಾ ಮೃತಪಟ್ಟಿದ್ದಾಳೆ ಎಂದು ತಿಳಿದಿದ್ದಾರೆ. ಇದರಿಂದಾಗಿ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಊರುಗಳಿಂದ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು, ಗ್ರಾಮಸ್ಥರು ಮನೆ ಬಳಿ ಜಮಾವಣೆಗೊಂಡಿದ್ದಾರೆ. ಆದರೆ ಬೆಳಗ್ಗೆ ಓರ್ವ ಮಹಿಳೆ ಕೈ ಮುಟ್ಟಿ ನೋಡಿದಾಗ ಕವಿತಾ ಇನ್ನೂ ಬದುಕಿದ್ದಾಳೆ ಎಂದು ತಿಳಿದು ಬೆಳಿಗ್ಗೆ ೧೦ಕ್ಕೆ ನೇರವಾಗಿ ಆಸ್ಪತ್ರೆಗೆ ಸಂಬಂಧಿಕರು, ಕುಟುಂಬಸ್ಥರು ಬಂದಿದ್ದರಿಂದ ಗದ್ದಲ ಉಂಟಾಯಿತು. ಇದರಿಂದ ಆಸ್ಪತ್ರೆ ಸಿಬ್ಬಂದಿ ಗಾಬರಿಗೊಂಡು ಓಪಿಡಿ ಬಂದ್ ಮಾಡಿದ್ದಾರೆ.

‘ರೋಗಿಯನ್ನು ದಾಖಲಿಸಿಕೊಂಡು ನಿರಂತರ ರಕ್ತ ಪÇರೈಸಲಾಗಿತ್ತು. ಕೃತಕ ಉಸಿರಾಟದ ಸಾಧನ ಅಳವಡಿಸಿ, ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ತೀವ್ರ ರಕ್ತಸ್ರಾವದಿಂದ ಮೆದುಳು, ಮೂತ್ರಪಿಂಡ, ಲಿವರ್ ನಿಷ್ಕಿçಯಗೊಂಡಿದ್ದರಿಂದ ವೈದ್ಯಕೀಯ ಉಪಕರಣಗಳಿಂದ ಜೀವ ಹಿಡಿದಿದ್ದು, ಅವುಗಳನ್ನು ತೆಗೆದರೆ ಸಾಯುತ್ತಾಳೆ. ಸಂಬಂಧಿಕರು ಬೇಗನೆ ಎಲ್ಲರಿಗೂ ವಿಷಯ ತಿಳಿಸಿ ಎಂದು ಹೇಳಲಾಗಿತ್ತು’ ಎಂದು ವೈದ್ಯ ಡಾ. ಬಸವರಾಜ ಸಜ್ಜನ ತಿಳಿಸಿದರು.
ಬಹು ಅಂಗಾಂಗ ವೈಫಲ್ಯದ ಪ್ರಮಾಣಪತ್ರ ನೀಡಲಾಗಿತ್ತು. ಮಂಗಳವಾರ ಬೆಳಗಿನವರೆಗೆ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಿ ಎಂದು ಸಂಬಂಧಿಕರಿಗೆ ಹೇಳಿದ್ದೆವು. ಸೋಮವಾರ ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ಇನ್ನೂ ಉಸಿರಾಡುತ್ತಿರುವುದನ್ನು ಕಂಡು ಈ ರೀತಿ ಗೊಂದಲವಾಗಿದೆ ಎಂದು ಡಾ. ಸಜ್ಜನ ಹೇಳುತ್ತಾರೆ.

ಆಸ್ಪತ್ರೆ ಒಳಗೆ ಮತ್ತು ಹೊರಗೆ ಇಷ್ಟೆಲ್ಲ ಗದ್ದಲ ನಡೆಯುತ್ತಿದ್ದರೂ, ಕವಿತಾ ಅವರ ಜೀವ ಮಧ್ಯಾಹ್ನ ೨.೩೦ಕ್ಕೆ ಹೋಗಿತ್ತು. ಇಡೀ ಘಟನೆಯಿಂದ ಆಸ್ಪತ್ರೆ ತುಂಬ ಜನ ಸೇರಿದ್ದರಿಂದ ಗಲಾಟೆ ನಿಯಂತ್ರಿಸಲು, ಉಳಿದ ರೋಗಿಗಳಿಗೆ ತೊಂದರೆಯಾಗದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ಕುಷ್ಟಗಿ ಮಾಜಿ ಶಾಸಕ ಕೆ. ಶರಣಪ್ಪ, ಜಿಪಂ ಸದಸ್ಯರಾದ ರಾಜಶೇಖರ ಹಿಟ್ನಾಳ, ಕೆ. ಮಹೇಶ ಅವರು ಕುಂಬಾರ ಸಮಾಜದ ಮುಖಂಡರ ಜೊತೆ ಮಾತನಾಡಿ ಸಂಬಂಧಿಕರನ್ನು ಸಮಾಧಾನಪಡಿಸಿ ಮೃತ ಮಹಿಳೆ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.

loading...