ಮನೆಗೊಂದು ಮರ ಬೆಳೆಸಿ

0
15

ವಿಜಯಪÅರ: ವಿಜಯಪುರದಲ್ಲಿ ಅಗಷ್ಟ ೪ರಂದು ನಡೆಯಲಿರುವ ಮ್ಯಾರಥಾನ್ ಕುರಿತ ಭಾಗವಹಿಸಲು ವಿನಂತಿಸಿ, ವೃಕ್ಷ ಅಭಿಯಾನ ಪ್ರತಿಷ್ಠಾನ ಸದಸ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು “ಮನೆಗೊಬ್ಬರು ಓಟದಲ್ಲಿ ಭಾಗವಹಿಸಿ, ಮನೆಗೊಂದು ಮರ ಬೆಳೆಸಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಬೆಳಿಗ್ಗೆ ನಗರದ ಗಗನಮಹಲ್‌ನಲ್ಲಿ ಸೇರುವ ವಾಯು ವಿಹಾರಿಗಳಿಗೆ ಮರನೆಡಲು ಸಸಿಗಳನ್ನು ವಿತರಿಸಿ, ಜಿಲ್ಲೆಯ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಪೆÇÃಷಿಸಿ ಮರವನ್ನಾಗಿ ಬೆಳೆಸಬೇಕು. ಅಲ್ಲದೇ ಪ್ರತಿ ಮನೆಯ ಒಬ್ಬ ಸದಸ್ಯರು ಅಗಷ್ಟ ೪ರ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡು, ಕೋಟಿ ವೃಕ್ಷ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಕೋರಿಕೊಂಡರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದುಂಡಪ್ಪಣ್ಣ ಗುಡ್ಡೊಡಗಿ, ಕೆ.ಬಿ.ನಾಗೂರ, ಮಿಲಿಂದ ಚಂಚಲಕರ, ಡಾ.ಮುರುಗೇಶ ಪಟ್ಟಣಶೆಟ್ಟಿ, ಅರಣ್ಯ ಅಧಿಕಾರಿಗಳಾದ ಮಹೇಶ ಕ್ಯಾತನ್, ಬಿ.ಪಿ. ಚವ್ಹಾಣ ಸೇರಿದಂತೆ ಮುಂತಾದವರು ಇದ್ದರು.

loading...