ಕಲಿತ ವಿದ್ಯಾ ಸಂಸ್ಥೆಗಳ ಉನ್ನತಿಗೆ ಸಹಾಯ ನೀಡಿ: ಹಂಚಿನಮನಿ

0
106

ಕನ್ನಡಮ್ಮ ಸುದ್ದಿ-ಧಾರವಾಡ: ನಮ್ಮ ನಾಡಿನ ಅನೇಕ ಮಹನೀಯರ ತ್ಯಾಗ ಪರಿಶ್ರಮದ ಫಲವಾಗಿ ಬಹಳ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳು ಇಂದಿಗೂ ಮುನ್ನಡೆದಿವೆ. ಶಿಕ್ಷಣ ಸಂವರ್ಧನೆಯ ಪವಿತ್ರ ಕೈಂಕರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎನ್. ಹಂಚಿನಮನಿ ಹೇಳಿದರು.
ನಗರದ ಸಿ.ಎಸ್.ಐ. ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ೨೦ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶಾಲಾ-ಕಾಲೇಜುಗಳ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾ ಸಂಸ್ಥೆಗಳ ಉನ್ನತಿಗೆ ಸಹಾಯ-ಸಹಕಾರಗಳನ್ನು ನೀಡಬೇಕು ಎಂದರು. ಸಿ.ಎಸ್.ಐ. ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಮಾತನಾಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಮ್ಮ ಸಂಘಟನೆಯ ಹೆಸರಿನಲ್ಲಿ ವಿದ್ಯಾ ವಿಕಾಸಕ್ಕೆ ಪೂರವಾದ ವಿಧಾಯಕ ಕಾರ್ಯಗಳನ್ನು ಕೈಕೊಳ್ಳಬೇಕು ಎಂದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಪ್ಪಣ್ಣ ಮಲಶಂಕರಿಮಠ, ಪದಾಧಿಕಾರಿಗಳಾದ ಶಿವಪ್ರಸಾದ ವಸ್ತçದ, ಮಹೇಶ ಬೆಲ್ಲದ, ಜಿತೇಶ ಮೆಹೆತಾ, ಶಹರೀಶ ಮಾಡೊಳ್ಳಿ, ವಿದ್ಯಾ ತಾಯಣ್ಣವರ, ನಾಝಿನಿನ್ ನದಾಫ್, ಮಾಧುರಿ ಕುಲಕರ್ಣಿ, ವೀಣಾ ಕಣವಿ, ಶರಣ ಹಿರೇಮಠ, ಅಮೃತ ಕಬಾಡಿ, ಲಕ್ಷಿö್ಮ ಕರೆಣ್ಣವರ, ಸುಮಾ ಸರದಾರ, ಸತೀಶ ಶಿಂಧೆ, ಕೀರ್ತಿ ಕೇಶವ ಇದ್ದರು. ಪ್ರಿಯಾ ದೀಕ್ಷಿತ ಸ್ವಾಗತಿಸಿದರು. ಮನೋಜ ಬುರ್ಲಿ ವಂದಿಸಿದರು.

loading...