ಕಲೆಗೆ ಬೆಲೆ ಸಿಗಬೇಕಾಗ ಕಲಾವಿದ ಉಳಿಯಲು ಸಾಧ್ಯ

0
48

ಕನ್ನಡಮ್ಮ ಸುದ್ದಿ-ಧಾರವಾಡ: ಕನ್ನಡ ಸಾಹಿತ್ಯ ಭವನÀದಲ್ಲಿ ಕಲ್ಮೆÃಶ್ವರ ಜಾನಪದ ಮಹಿಳಾ ಕೋಲಾಟ ಸಂಘ ಜಾನಪದ ಸಿರಿ ಕಾರ್ಯಕ್ರಮ ಆಯೋಜಿಸಿತ್ತು. ಕಾಂಗ್ರೆಸ್ ಮುಖಂಡರಾದ ದ್ರಾಕ್ಷಾಯಣಿ ಬಸವರಾಜ ಮಾತನಾಡಿ, ಒಬ್ಬ ವ್ಯಕ್ತಿ ಎಷ್ಟೊÃ ಕಷ್ಟ ಪಟ್ಟು ಕಲೆಯನ್ನು ಕಲಿಯುತ್ತಾನೆ. ಆ ಕಲೆಗೆ ಬೆಲೆ ಸಿಗಬೇಕಾದಾಗ ಕಲಾವಿದ ಉಳಿಯಬೇಕು. ಅಂತಹ ಕಲಾವಿದನಿಗೆ ಸರ್ಕಾರ ಯಾವತ್ತೂ ಸಹಾಯ ಸಹಕಾರ ನೀಡಿದರೆ ಮಾತ್ರ ಈ ನಾಡಿನಲ್ಲಿ ಕಲಾವಿದ ಮತ್ತು ಕಲೆ ಉಳಿಯಲು ಸಾಧ್ಯ ಎಂದರು.
ಮುತ್ತುರಾಜ ಮಾಕಡವಾಲೆ ಮಾತನಾಡಿ, ನಾನು ಪ್ರತಿವರ್ಷ ದಸರಾದಲ್ಲಿ ದೇವಿ ಜಾತ್ರೆ ಮಾಡುತ್ತೆÃನೆ. ಆ ಜಾತ್ರೆಯಲ್ಲಿ ಹಲವಾರು ಜಾನಪದ ಕಲಾ ತಂಡಗಳನ್ನು ಕರೆಯಿಸಿ ಅವರನ್ನು ಗೌರವದಿಂದ ಕಾಣುತ್ತೆÃನೆ. ಇಂತಹ ಕಲಾವಿದರಿಗೆ ಏನಾದರೂ ತೊಂದರೆ ಬಂದಲ್ಲಿ ಅವರಿಗೆ ಸಹಾಯ ಸಹಕಾರ ನೀಡುತ್ತೆÃನೆ ಎಂದರು.

ಮಂಜುಳಾ ಯಲಿಗಾರ ಅಧ್ಯಕ್ಷತೆವಹಿಸಿದ್ದರು. ಜಯಶ್ರಿÃ ಗೌಳಿ, ನಿಂಗವ್ವ ಕೋರಿ, ಸತೀಶ ತುರಮರಿ, ಬಿ.ಕೆ. ಹೊಂಗಲ, ಕುಮಾರಿ ಹೇಮಾವತಿ ಪಾಟೀಲ, ಶೋಭಾ ಪತ್ತಾರ, ಅರ್ಜುನ ಮರೇವಾಡ, ಶಾನವಾಡ ಮಾಸ್ತರ್ ಉಪಸ್ಥಿತರಿದ್ದರು.

loading...