ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಅಳವಡಿಕೆಗೆ ಕ್ರಮ

0
27

ಕನ್ನಡಮ್ಮ ಸುದ್ದಿ-ಧಾರವಾಡ: ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆ ಹಾಗೂ ರಸ್ತೆಗಳಿಗೆ ಈಗಾಗಲೇ ಇರುವ ಸ್ವಾತಂತ್ರö್ಯ ಯೋಧರು, ಕನ್ನಡ ನಾಡಿನ ಸಾಧಕರ ಹೆಸರುಗಳನ್ನು ಪೂರ್ಣ ಪ್ರಮಾಣದಲ್ಲಿ ಮರುಬಳಕೆಗೆ ತರಲಾಗುವುದು ಎಂದು ಪಾಲಿಕೆಯ ಆಯುಕ್ತ ಡಾ. ಸುರೇಶ್ ಇಟ್ನಾಳ ಹೇಳಿದರು.
ಪಾಲಿಕೆಯ ತಮ್ಮ ಕಚೇರಿಯಲ್ಲಿಂದು ಜರುಗಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹಾನಗರ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರಕವಿ ಡಾ.ದ.ರಾ, ಬೇಂದ್ರೆಯವರ ಕೃತಿಗಳನ್ನಾಧರಿಸಿ ಚಿತ್ರಕಲೆಗಳನ್ನು ಅಳವಡಿಸಲು ಉದ್ದೆÃಶಿಸಲಾಗಿದೆ. ಅವಳಿ ನಗರದ ಎಲ್ಲ ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಅಳವಡಿಕೆಗೆ ಕ್ರಮ ವಹಿಸಲಾಗುವುದು.

ಅವಳಿ ನಗರದಲ್ಲಿರುವ ಎಲ್ಲ ಖಾಸಗಿ ಕೈಗಾರಿಕೆಗಳ ‘ಸಿ’ ಮತ್ತು ‘ಡಿ’ ಗುಂಪಿನ ಹುದ್ದೆಗಳಿಗೆ ಸ್ಥಳೀಯರನ್ನೆÃ ನೇಮಕ ಮಾಡಿಕೊಳ್ಳಲು ಸೂಚಿಸಲಾಗುವುದು. ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯಲು ಪ್ರೊÃತ್ಸಾಹಕರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಪಾಲಿಕೆಯ ಜಾಹೀರಾತು ಫಲಕಗಳು ಮತ್ತು ಟೆಂಡರ್ ನೋಟಿಸ್‌ಗಳ ಜಾಹೀರಾತುಗಳನ್ನು ಕನ್ನಡದಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ. ಮಹಾನಗರ ಕನ್ನಡ ಜಾಗೃತಿ ಸಮಿತಿಯ ವಾರ್ಷಿಕ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದರು.
ಸಮಿತಿ ಸದಸ್ಯ ಶಂಕರ ಹಲಗತ್ತಿ, ಸುನಂದಾ ಪ್ರಕಾಶ ಕಡಮೆ, ಡಾ. ಧನವಂತ ಹಾಜವಗೋಳ, ಡಾ. ರಾಮು ಮೂಲಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಮಿತಿಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆÃಶಕಿ ಮಂಜುಳಾ ಯಲಿಗಾರ ಇದ್ದರು.

loading...